ಪ್ಯಾರಿಸ್: ಬ್ಯಾಡ್ಮಿಂಟನ್ನಲ್ಲಿ ಮೊಟ್ಟಮೊದಲ ಒಲಿಂಪಿಕ್ ಚಿನ್ನದ ಪದಕ ಜಯಿಸುವ ಭಾರತದ ಕನಸು ಲಕ್ಷ್ಯ ಸೇನ್ (Lakshya Sen) ಸೋಲಿನೊಂದಿಗೆ ನುಚ್ಚು ನೂರಾಯಿತು.
ಭಾನುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಲಕ್ಷ್ಯ ಸೇನ್ ನೇರ ಗೋಮ್ನಲ್ಲಿ ಸೋಲನುಭವಿಸಿದರು.
Paris Olympics 2024: ಪದಕ ಗೆಲ್ಲುವತ್ತ ಭಾರತ ಹಾಕಿ ತಂಡ: ಗ್ರೇಟ್ ಬ್ರಿಟನ್ ಮಣಿಸಿ ಸೆಮಿಫೈನಲ್ ಲಗ್ಗೆ
ಕಂಚಿನ ಪದಕ ಗೆಲ್ಲಲು ಸೇನ್ಗೆ ಮತ್ತೊಂದು ಅವಕಾಶ ಇದೆ. ಪ್ಲೇಆಫ್ನಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೆಣಸಲಿದ್ದಾರೆ. ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಆಗಲು ಸೇನ್ಗೆ ಅವಕಾಶವೊಂದಿದೆ.
54 ನಿಮಿಷಗಳ ಸೆಮಿಫೈನಲ್ ಹಣಾಗಣಿಯಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಅಕ್ಸೆಲ್ಸೆನ್ ವಿರುದ್ಧ ಸೇನ್ 20-22, 14-21 ನೇರ ಸೆಟ್ಗಳ ಸೋಲು ಅನುಭವಿಸಿದರು