ಬೆಂಗಳೂರು: ವಯನಾಡು ಅಕ್ಷರಶಃ ದುರಂತ ಭೂಮಿಯಾಗಿದೆ. ಭೀಕರ ದುರಂತದಲ್ಲಿ ಬದುಕುಳಿದವರಿಗೆ ಮುಂದಿನ ಜೀವನ ಹೇಗೆ ಎನ್ನುವ ಪ್ರಶ್ನೆ ಕಣ್ಣ ಮುಂದೆ ಸಿಡಿಲಿನಂತೆ ಬಡಿಯುತ್ತಿದೆ. ಸದ್ಯ ಸಂತ್ರಸ್ಥರ ಕಷ್ಟ ಯಾರಿಗೂ ಬೇಡವಾಗಿದೆ. ಆದರೆ ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು, ನಿಮ್ಮ ಜೊತೆ ನಾವಿದ್ದೇವೆಂದು 100 ಮನೆಗಳನ್ನು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಹೌದು ಕೇರಳದ ವಯನಾಡಿನಲ್ಲಿಭೂಕುಸಿತದಿಂದ ಸೂರು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ100 ಮನೆಗಳನ್ನು ನಿರ್ಮಿಸಿಕೊಡಲು ಕರ್ನಾಟಕ ಸರಕಾರ ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಆಸರೆ ಕಳೆದುಕೊಂಡ ಕುಟುಂಬಗಳಿಗೆ 100 ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸಿಕೊಡಲಾಗುವುದು. ಯಾವ ಸ್ಥಳದಲ್ಲಿನಿರ್ಮಾಣ ಮಾಡಬೇಕು ಮತ್ತು ತಲಾ ಮನೆಯ ವೆಚ್ಚ ಎಷ್ಟು ಎಂಬುದನ್ನು ನಂತರ ತೀರ್ಮಾನಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಅಬ್ಬಬ್ಬಾ! ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಹಿಡಿದು 150 ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ ಈ ʼʼಕಾಡು ಬಸಳೆʼʼ
ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಮೊದಲು ಕೇರಳದ ನೆರವಿಗೆ ಧಾವಿಸಿದ್ದರಿಂದ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೈ ನಾಯಕಿ ಪ್ರಿಯಾಂಕಾ ಗಾಂಧಿ ಧನ್ಯವಾದ ತಿಳಿಸಿದ್ದಾರೆ. ಕೇರಳ ಜನರ ಸಂಕಷ್ಟಕ್ಕೆ ಸ್ಪಂದಿಸಿದ ನಿಮ್ಮ ಸ್ಪಂದನೆಗೆ ನಮನ. 100 ಮನೆಗಳನ್ನು ಕಟ್ಟಿಕೊಡುವ ಭರವಸೆ ನೀಡಿದ್ದಕ್ಕೆ ಸಿಎಂ ಹಾಗೂ ಕರ್ನಾಟಕದ ಜನರಿಗೆ ಕಾಂಗ್ರೆಸ್ ನಾಯಕರು ಎಕ್ಸ್ ಅಕೌಂಟ್ನಲ್ಲಿ ಧನ್ಯವಾದ ತಿಳಿಸಿ ಪೋಸ್ಟ್ ಶೇರ್ ಮಾಡಿದ್ದಾರೆ.