ಮುಂಬೈ:- ಯುವತಿಯೊಬ್ಬಳು ಮೈಗೆ ಟವೆಲ್ ಸುತ್ತಿಕೊಂಡು ಬೀದಿ ಸುತ್ತಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮಮ್ಮಿ, ಪಪ್ಪಾ, ನನ್ನನ್ನು ಕ್ಷಮಿಸಿ: ನಾನು ಸತ್ರೆ ಬ್ರೇಕಿಂಗ್ ನ್ಯೂಸ್ ಆಗುತ್ತೆ ಎಂದು UPSC ಅಭ್ಯರ್ಥಿ ಸೂಸೈಡ್!
ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಮಹಿಳೆಯೊಬ್ಬಳು ಬಿಕಿನಿ ತೊಟ್ಟು ಬಸ್ಸಿನಲ್ಲಿ ಸುತ್ತಾಡಿದ್ದಳು, ಇದಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಂಹತದ್ದೇ ಘಟನೆಯೊಂದು ಮುಂಬೈನಲ್ಲಿ ನಡೆಸಿದೆ. ಯುವತಿಯೊಬ್ಬಳು ಮೈಗೆ ಟೆವೆಲ್ ಸುತ್ತಿಕೊಂಡು ಬೀದಿ ಬೀದಿ ಸುತ್ತಾಡಿದ್ದಾಳೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದ್ದು, ಟೀಕೆಗೂ ಕಾರಣವಾಗಿದೆ.
ಹೌದು. ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು ರೀಲ್ಸ್ ಸ್ಟಾರ್ ಯುವತಿ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ಓಡಾಡಿದ್ದರು. ಇದನ್ನ ನೋಡಿದವರಿಗೆ ಆಕೆ ಬಾತ್ರೂಂನಿಂದ ಸ್ನಾನ ಮಾಡಿಕೊಂಡು ಹಾಗೇ ಎದ್ದು ಬಂದಿರುವಂತೆ ಕಾಣಿಸುತ್ತಿತ್ತು. ಅಲ್ಲದೇ ವೀಡಿಯೋ ತುಂಬಾ ʻತೌಬಾ-ತೌಬಾʼ ಎಂಬ ಹಿಂದಿ ಗೀತೆಯೊಂದು ಪ್ರಸಾರವಾಗುತ್ತಲೇ ಇದೆ.
ಈ ಉಡುಗೆಯ ಜೊತೆಗೆ ಕಿವಿಯೋಲೆಯನ್ನೂ ಆಕೆ ಧರಿಸಿದ್ದಳು ಮತ್ತು ಸ್ಟೈಲಿಶ್ ಸ್ಫೋರ್ಟ್ ಶೂ ಸಹ ಧರಿಸಿದ್ದಳು. ಈ ವೇಷದಲ್ಲಿ ಬಸ್ ನಿಲ್ದಾಣದಿಂದ ಅಂಗಡಿಯ ಕಡೆಗೆ ಹೋಗುತ್ತಿದ್ದಾಗ, ಅಲ್ಲಿದ್ದ ದಾರಿಹೋಕರು ಈಕೆಯನ್ನೇ ದಿಟ್ಟಿಸಿ ನೋಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಕೊನೆಯಲ್ಲಿ ರೀಲ್ಸ್ ಆರಣಿ ತನ್ನ ಕೂದಲಿಗೆ ಹಾಗೂ ದೇಹಕ್ಕೆ ಸುತ್ತಿದ್ದ ಟವೆಲ್ ಅನ್ನು ತೆಗೆದಿದ್ದಾಳೆ. ನಂತರ ಇದು ರೀಲ್ಸ್ ಗಾಗಿ ಮಾಡಿದ ವೀಡಿಯೋ ಎಂಬುದು ಜನರ ಅರಿವಿಗೆ ಬಂದಿದೆ.