ಇಂಗ್ಲೆಂಡ್ ವೈಟ್ಬಾಲ್ ತಂಡದ ಹೆಡ್ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಏಕದಿನ ವಿಶ್ವಕಪ್ ವಿಜೇತ ಐಯಾನ್ ಮಾರ್ಗನ್ ಅವರು, ಭಾರತ ತಂಡದ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರನ್ನು ಕೂಡ ಆಯ್ಕೆ ಮಾಡಿದ್ದಾರೆ.
ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಬಳಿಕ ತಮ್ಮ ಹೆಡ್ ಕೋಚ್ ಹುದೆಯಿಂದ ಹೊರ ಬಂದಿದ್ದರು. ಪುನಃ ಇದೇ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ ದ್ರಾವಿಡ್ ಅವರು ಕೌಟುಂಬಿಕ ಕಾರಣಗಳಿಂದ ನಿರಾಕರಿಸಿದ್ದರು.
INd Vs SL: ಏಕದಿನ ಕ್ರಿಕೆಟ್ ಸರಣಿಯ ಚೊಚ್ಚಲ ಪಂದ್ಯ ಟೈ: ಟೀಂ ಇಂಡಿಯಾ ಪ್ಲೇಯರ್ಸ್ ಕಪ್ಪು ಪಟ್ಟಿ ಧರಿಸಿದ್ದೇಕೆ..?
“ನೀವು ನೆನಪಿನಲ್ಲಿಟ್ಟುಕೊಳ್ಳಬೇಕು, ಇದು ಇಂಗ್ಲೆಂಡ್ ಕ್ರಿಕೆಟ್ ತಂಡ, ಇದು ವಿಶ್ವದ ಅತ್ಯಂತ ಸಂಪನ್ಮೂಲ ಹೊಂದಿರುವ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದೆ, ಆದ್ದರಿಂದ ಆ ಪಾತ್ರವನ್ನು ಸಾಧ್ಯವಾದಷ್ಟು ಆಕರ್ಷಕವಾಗಿ ಮಾಡುವುದು ರಾಬ್ ಕೀಗೆ ಬಿಟ್ಟಿದ್ದು. ವಿಶ್ವದಲ್ಲಿ ಅತ್ಯುತ್ತಮ ಕೋಚ್ಗಳಿದ್ದಾರೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಇಂಗ್ಲೆಂಡ್ ಕೋಚ್ ಹುದ್ದೆಗೆ ನೇಮಿಸುವುದು ದೊಡ್ಡ ಜವಾಬ್ದಾರಿ,” ಎಂದು ಮಾಜಿ ನಾಯಕ ಹೇಳಿದ್ದಾರೆ.
ರಾಬ್ ಕೀ ಅವರು, ಇಂಗ್ಲೆಂಡ್ ತಂಡದ ಕೋಚ್ ಹುದ್ದೆಗಾಗಿ ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಸ್ಟಿಫೆನ್ ಫ್ಲೇಮಿಂಗ್ ಹಾಗೂ ಬ್ರೆಂಡನ್ ಮೆಕಲಮ್ ಅವರನ್ನು ಸಂಪರ್ಕಿಸಬೇಕೆಂದು ಮಾರ್ಗನ್ ತಿಳಿಸಿದ್ದಾರೆ. ಸದ್ಯ ಬ್ರೆಂಡನ್ ಮೆಕಲಮ್ ಅವರು ಇಂಗ್ಲೆಂಡ್ ರೆಡ್ ಬಾಲ್ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.