ಬೆಂಗಳೂರು:-ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಜೈಲಿನಿಂದಲೇ ಕೆಲ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸವೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ದರ್ಶನ್ ಗ್ಯಾಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂದುವರಿದ ಮಳೆ: ನಾಳೆ ಉತ್ತರ ಕನ್ನಡ ಜಿಲ್ಲೆಯ 9 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ!
ಜೈಲಿನಲ್ಲಿದ್ದುಕೊಂಡೇ ದರ್ಶನ್ ಅಂಡ್ ಗ್ಯಾಂಗ್ ಬೆದರಿಕೆ ಹಾಕಿರೋದು ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರೋ ವ್ಯಕ್ತಿಗೆ ಸಾಕ್ಷಿ ನುಡಿಯದಂತೆ ಡಿ ಗ್ಯಾಂಗ್ ಬೆದರಿಕೆ ಹಾಕಿದೆ ಎನ್ನಲಾಗಿದೆ. ಸದ್ಯ ಬೆದರಿಕೆ ಸಂಬಂಧ ಸಾಕ್ಷಿದಾರ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆಯಲ್ಲಿ ಪ್ರಮುಖವಾಗಿ ಬಳಸಿರೋ ಸಾಧನ ಮೆಗ್ಗರ್ ಬಗ್ಗೆ ಮಹತ್ವದ ಮಾಹಿತಿ ತಿಳಿಸದುಬಂದಿದೆ. ಕರೆಂಟ್ ಶಾಕ್ ನೀಡಲೆಂದೇ ಮೆಗ್ಗರ್ ಅನ್ನು ಖರೀದಿ ಮಾಡಿರೋದು ತನಿಖೆ ವೇಳೆ ಬೆಳಕಿಗೆ. ಪ್ರಕರಣದ ಆರೋಪಿ ಧನರಾಜ್ ಅಮೆಜಾನ್ನಲ್ಲಿ ಮೆಗ್ಗರ್ ಡಿವೈಸ್ ಬುಕ್ ಮಾಡಿದ್ದು, ಅದರ ಬೆಲೆ 699 ರೂಪಾಯಿಗಳಾಗಿದೆ. ಇನ್ನು ಬುಕ್ ಮಾಡಿದ ಮೆಗ್ಗರ್ ಅನ್ನು ಸ್ವೀಕರಿಸುವ ವೇಳೆ ಸ್ಕ್ಯಾನರ್ ಮೂಲಕ ಹಣ ಪೇ ಮಾಡಲು ಧನರಾಜ್ ಯತ್ನಿಸಿದ್ದ. ಆದರೆ ಅಮೆಜಾನ್ ಪೇ ಕೋಡ್ ಸ್ಕ್ಯಾನ್ ಮಾಡಿದ ವೇಳೆ ಹಣ ಸೆಂಡ್ ಆಗದ ಕಾರಣ ಆನ್ ಲೈನ್ ಮೂಲಕ ಹಣವನ್ನು ಕಳುಹಿಸಿದ್ದ ಧನರಾಜ್. ಆ ಹಣವನ್ನು ಡೆಲಿವರಿ ಬಾಯ್ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದು ಕಂಪನಿಗೆ ನೀಡಿದ್ದ. ಸದ್ಯ ಆ ಮಾಹಿತಿ ಕಲೆ ಹಾಕಿರೋ ಪೊಲೀಸರು ಮೆಗ್ಗರ್ ಡಿವೈಸ್ ಧನರಾಜ್ಗೆ ತಂದುಕೊಟ್ಟ ಡೆಲಿವರಿ ಬಾಯ್ನ ವಿಚಾರಣೆ ಮಾಡಿ ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.