ವಿಜಯಪುರ:- ರೋಗಿ ವೇಶದಲ್ಲಿ ಆಸ್ಪತ್ರೆಗೆ ನುಗ್ಗಿ ವೈದ್ಯೆಯ ಚಿನ್ನದ ತಾಳಿಸರ ಕಿತ್ತು ಸರಗಳ್ಳ ಪರಾರಿಯಾದ ಘಟನೆ ವಿಜಯಪುರ ನಗರದ ಕಾಳಿಕಾನಗರದ ಲೇಡಿಸ್ ಹಾಸ್ಟೇಲ್ ಬಳಿ ಜರುಗಿದೆ.
Kolara: ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರದ ತನಿಖೆಗೆ ಒತ್ತಾಯಿಸಿ ಆ.5 ರಂದು ಸಿಎಂ ಮನೆಗೆ ಮುತ್ತಿಗೆ!
ಪಾಟೀಲ್ ಆಸ್ಪತ್ರೆಯ ವೈದ್ಯೆ ಸರೋಜಿನಿ ಪಾಟೀಲ್ ಅವರ 11 ಗ್ರಾಂ ಚಿನ್ನದ ಸರ ಕಿತ್ತು ಪರಾರಿ ಆಗಿದ್ದಾನೆ. ಇಂಗ್ಲಿಷ್ನಲ್ಲೆ ವೈದ್ಯೆಯ ಜೊತೆಗೆ ಮಾತನಾಡಿದ ಖತರ್ನಾಕ್ ಸರಗಳ್ಳ, ಈ ವೇಳೆ ಸರ ಕದ್ದು ಎಸ್ಕೇಪ್ ಆಗಿದ್ದಾನೆ.
ಸರ ಕಿತ್ತು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳರ ಸರಕಿತ್ತು ಪರಾರಿಯಾಗ್ತಿದ್ರೆ ಇತರೆ ರೋಗಿಗಳು ಗಾಬರಿಯಿಂದ ಹೆದರಿ ಓಡಿದ್ದಾರೆ. ಮಂಕಿ ಕ್ಯಾಪ್ ಧರಿಸಿ ಬೈಕ್ ಮೇಲೆ ಬಂದಿದ್ದ ಇಬ್ಬರು ಸರಗಳ್ಳರಿಂದ ಕೃತ್ಯ ನಡೆದಿದೆ.
ಇಬ್ಬರ ಪೈಕಿ ಒಬ್ಬನಿಂದ ರೋಗಿ ವೇಷ ಧರಿಸಿ ಸರಗಳ್ಳತನ ಮಾಡಲಾಗಿದೆ. ಸರ ಕಿತ್ತ ಬಳಿಕ ಬೈಕ್ಮೇಲೆ ಇಬ್ಬರು ಪರಾರಿ ಆಗಿದ್ದಾರೆ.