ಬೆಂಗಳೂರು:- ನಾಳೆಯಿಂದ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರ ಮೈಸೂರು ಚಲೋ ಪಾದಯಾತ್ರೆ ಆರಂಭವಾಗ್ತಿದೆ. ಇದಕ್ಕೆ ಟಕ್ಕರ್ ಕೊಡೋಕೆ ಕಾಂಗ್ರೆಸ್ ಇಂದಿನಿಂದಲೇ ಜನಾಂದೋಲನ ಕಾರ್ಯಕ್ರಮ ಆರಂಭಿಸಿ ಬಿಜೆಪಿ ಕಾಲದ ಭ್ರಷ್ಟಾಚಾರದ ಹಗರಣಗಳನ್ನು ಬಿಚ್ಚಿಡೋಕೆ ಮುಂದಾಗಿದೆ. ಮೈತ್ರಿ ಪಾದಯಾತ್ರೆಗೆ ಕೈ ನಾಯಕರು ವ್ಯಂಗ್ಯವಾಡ್ತಿದ್ರೆ, ಅತ್ತ ಕಮಲ-ದಳ ನಾಯಕರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಈ ಮಧ್ಯೆ ಡಿಕೆಶಿ VS ವಿಜಯೇಂದ್ರ ವಾರ್ ಶುರುವಾಗಿದೆ……
ರಾಜ್ಯದಲ್ಲೀಗ ಪಾದಯಾತ್ರೆ ಯದ್ದೇ ಸದ್ದು ಜೋರಾಗಿದೆ, ನಾಳೆಯಿಂದ ಬಿಜೆಪಿ- ಜೆಡಿಎಸ್ ಮೈತ್ರಿ ನಾಯಕರ ಮೈಸೂರು ಚಲೋ ಪಾದಯಾತ್ರೆ ಆರಂಭವಾಗ್ತಿದೆ. ಇದಕ್ಕೆ ಠಕ್ಕರ್ ಕೊಡೋಕೆ ಕಾಂಗ್ರೆಸ್ ಹೊಸ ಗೇಮ್ ಪ್ಲಾನ್ ಶುರುಮಾಡಿದ್ದು ಜನಾಂದೋಲನ ಕಾರ್ಯಕ್ರಮ ಆರಂಭಿಸಿದೆ. ಬಿಜೆಪಿ- ಜೆಡಿಎಸ್ ನಾಯಕರು ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೋ ಅದೇ ಸ್ಥಳದಲ್ಲಿ ಒಂದೊಂದು ದಿನ ಮುಂಚಿತವಾಗಿ ಬಿಜೆಪಿ ಕಾಲದ ಭ್ರಷ್ಟಾಚಾರದ ಹಗರಣಗಳನ್ನು ಜನರ ಮುಂದಿಡುವ ಕಾರ್ಯಕ್ರಮ ಮಾಡ್ತಿದೆ ಕಾಂಗ್ರೆಸ್. ಈ ಪ್ರೋಗ್ರಾಂನಲ್ಲಿ ಸಿಎಂ, ಡಿಸಿಎಂ, ಸಚಿವರು ಸೇರಿ ಶಾಸಕರು ಭಾಗಿಯಾಗಿ ಮೈತ್ರಿಗೆ ಠಕ್ಕರ್ ಕೊಡಲಿದ್ದಾರೆ..
ನಾಳೆಯಿಂದ ಬಿಜೆಪಿ- ಜೆಡಿಎಸ್ ಪಾದಯಾತ್ರೆ ಆರಂಭವಾಗ್ತಿದೆ ಬೆಳಿಗ್ಗೆ 8.30ಕ್ಕೆ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ಇರುವ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. 8 ದಿನಗಳ ಪಾದಯಾತ್ರೆಗೆ ಮಾಜಿ ಸಿಎಂ ಗಳಾದ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ..
ಬಿಜೆಪಿ ಜೆಡಿಎಸ್ ಪಾದಯಾತ್ರೆಯ ರೂಟ್:-
ದಿನ -1 ಕೆಂಗೇರಿ ಕೆಂಪಮ್ಮ ದೇವಸ್ಥಾನದಿಂದ ಆರಂಭವಾಗಿ ಬಿಡದಿ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿ ಅಂತ್ಯ – 16 KM
ದಿನ -2 ಮಂಜುನಾಥ ಕನ್ವೆನ್ಷನ್ ಹಾಲ್ ನಿಂದ ಕೆಂಗಲ್ ಕೆವಿಕೆ ಕನ್ವೆನ್ಷನ್ ಹಾಲ್ ವರೆಗೆ- 22 KM
ದಿನ – 3 ಕೆಂಗಲ್ ಕೆವಿಕೆ ಕನ್ವೆನ್ಷನ್ ಹಾಲ್ ನಿಂದ
ನಿಡಘಟ್ಟ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್ ವರೆಗೆ – 20KM
ದಿನ – 4 ನಿಡಘಟ್ಟ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್ ನಿಂದ ಮಂಡ್ಯದ ಶಶಿಕಿರಣ್ ಕನ್ವೆನ್ಷನ್ ಹಾಲ್ ವರೆಗೆ – 16 KM
ದಿನ – 5 ಮಂಡ್ಯದ ಶಶಿಕಿರಣ್ ಕನ್ವೆನ್ಷನ್ ಹಾಲ್ ನಿಂದ
ತೂಬಿನಕೆರೆ ಕೈಗಾರಿಕಾ ಪ್ರದೇಶದ ವರೆಗೆ – 20KM
ನಾಳೆಯಿಂದ ಆರಂಭವಾಗಲಿರೋ ಪಾದಯಾತ್ರೆಗೆ ಕಾಂಗ್ರೆಸ್ ಇಂದಿನಿಂದಲೇ ಜನಾಂದೋಲನ ಕಾರ್ಯಕ್ರಮ ಆರಂಭಿಸಿದೆ. ಮೈತ್ರಿ ನಾಯಕರ ಬಿಡದಿಯ ಪಾದಯಾತ್ರೆ ಆರಂಭದ ಸ್ಥಳದಲ್ಲೇ ಇಂದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜನಾಂದೋಲನ ಕಾರ್ಯಕ್ರಮ ನಡೆಸಲಾಯ್ತು. ಈ ವೇಳೆ ಡಿಕೆಶಿ ಬಿಜೆಪಿ ಹಗರಣಗಳ ಪಟ್ಟಿ ಮಾಡಿದ್ರು ಬೋವಿ ನಿಗಮದಲ್ಲಿ 87 ಕೋಟಿ, ಕೃಷಿ ಮಾರುಕಟ್ಟೆಗಳಲ್ಲಿ 47 ಕೋಟಿ ಅಕ್ರಮ ನಡೆದಿದೆ. ಈ ಹಗರಣ ನಡೆದಾಗ ಯಾರು ಮುಖ್ಯಮಂತ್ರಿ, ಯಾರು ಮಂತ್ರಿ, ಯಾರು ನಿಗಮದ ಅಧ್ಯಕ್ಷರಾಗಿದ್ದರು. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಬಿಜೆಪಿಯ ವೀರಯ್ಯ ಅವರು 47 ಕೋಟಿ ರೂ. ನುಂಗಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಆತ ಜೈಲು ಸೇರಿದ್ದಾನೆ. ಅಕ್ರಮಗಳ ದೊಡ್ಡ ಪಟ್ಟಿಯೇ ನಮ್ಮ ಬಳಿ ಇವೆ ಪಟ್ಟಿ ಕೊಡ್ತೀನಿ ಒಂದು ವಾರದೊಳಗೆ ಉತ್ತರ ಕೊಡಿ ಅಂತ ಮೈತ್ರಿ ನಾಯಕರಿಗೆ ಡಿಕೆಶಿ ಸವಾಲು ಹಾಕಿದ್ದಾರೆ..
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಮೈತ್ರಿ ಪಾದಯಾತ್ರೆಗೆ ವ್ಯಂಗ್ಯವಾಡಿದ್ದಾರೆ ಕುಮಾರಸ್ವಾಮಿ
ಈ ಕೇಸ್ನಲ್ಲಿ ಏನು ಇಲ್ಲ ಪಾದಯಾತ್ರೆ ಬೇಡಾ ಅಂದ್ರು.
ಮಳೆ ಜಾಸ್ತಿಯಾಗಿ ಪ್ರವಾಹ ಬಂದಿದೆ ಅದರ ಕಡೆ ಗಮನ ಕೊಡಬೇಕು ಅಂದ್ರು. ಈಗ ಪ್ರವಾಹ ಎಲ್ಲಾ ಹೋಗಿದ್ಯಾ
ಕುಮಾರಸ್ವಾಮಿ ಇದನ್ನು ಸ್ವ ಸ್ವಿಚ್ಛೆಯಿಂದ ಮಾಡ್ತಾ ಇಲ್ಲ.
ಇದನ್ನೇಲ್ಲಾ ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಸವಾಲಾಕಿದ್ದಾರೆ ಸಿಎಂ…
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಧ್ಯೆ ವೈಯಕ್ತಿಕ ಟಾಕ್ ವಾರ್ ಶುರುವಾಗಿದೆ. ಡಿಕೆಶಿ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ ಶಿವಕುಮಾರ್ ಭ್ರಷ್ಟಾಚಾರದ ಪಿತಾಮಹ ಅಂತವರು ಹಗರಣಗಳ ಬಗ್ಗೆ ಮಾತನಾಡೋದು ಹಾಸ್ಯಾಸ್ಪದ. ಮೂಡಾ ಹಗರಣದಲ್ಲಿ ಸಿಎಂರನ್ನ ಸಿಲುಕಿಸಲು ಕಾಂಗ್ರೆಸ್ ಸಚಿವರ ಕೈವಾಡವಿದೆ,
ಅವರನ್ನ ಗಂಭೀರವಾಗಿ ತಗೋಬೇಡಿ ಕಡೆಗಣನೆ ಮಾಡಿ ಎಂದಿದ್ದಾರೆ. ವಿಜಯೇಂದ್ರ ಗೆ ಡಿಕೆಶಿ ಏಕವಚನದಲ್ಲಿ ಟಾಂಗ್ ಕೊಟ್ಟಿದ್ದಾರೆ ಹೇ.. ವಿಜಯೇಂದ್ರ ನಿನಗೆ ತಾಕತ್ತಿದ್ದರೆ, ಧೈರ್ಯವಿದ್ದರೆ ನೀನು ಹೇಳಿದಂತೆ ಕಾಂಗ್ರೆಸ್ ಪಕ್ಷದ ಯಾವನು ಪಾದಯಾತ್ರೆಗೆ ಕುಮ್ಮಕ್ಕು ನೀಡಿದ್ದಾನೆ ಅವನ ಹೆಸರು ಹೇಳು ಎಂದು ಕಿಡಿ ಕಾರಿದ್ದಾರೆ..
ಒಟ್ನಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮಧ್ಯೆ ಪಾದಯಾತ್ರೆ vs ಜನಾಂದೋಲನ ವಾರ್ ಶುರುವಾಗಿದೆ. ಮೈತ್ರಿ ಮೈಸೂರು ಚಲೋಗೆ , ಕೈ ಜನಾಂದೋಲನ ಶುರುಮಾಡಿ ಹಗರಣಗಳ ಪಟ್ಟಿ ಮಾಡಿದೆ. ಈ ಮಧ್ಯೆ ಅಧ್ಯಕ್ಷರುಗಳ ವೈಯಕ್ತಿಕ ಟಾಕ್ ವಾರ್ ಜೋರಾಗಿದ್ದು ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂಬುದನ್ನು ಕಾದುನೋಡಬೇಕಿದೆ….