ಬೆಂಗಳೂರು ಗ್ರಾಮಾಂತರ:- ವ್ಯವಹಾರದಲ್ಲಿ ಬೇಸರವಾಗಿ ಹೋಟೆಲ್ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ನೆಲಮಂಗಲದ ಶ್ರೀನಂದಿ ವೈಭವ್ ಹೋಟೆಲ್ ಮ್ಯಾನೇಜರ್ ಸೂಸೈಡ್ ಮಾಡಿಕೊಂಡಿದ್ದಾರೆ.
ಮುಡಾ ಹಗರಣ: ಹೆಚ್ ಡಿ ರೇವಣ್ಣ ಎಂಟ್ರಿ, ಸೈಟ್ ಹಂಚಿಕೆ ಬಗ್ಗೆ ವಿವರ ಕೇಳಿದ ಮಾಜಿ ಸಚಿವ!
ಕಬ್ಬಿಣದ ಆ್ಯಂಗಲ್ಗೆ ಸ್ಕ್ರೀನ್ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವ್ಯವಹಾರದಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮೃತನ ಅಕ್ಕ ಶ್ರೀನಿಧಿಶೆಟ್ಟಿ ಎಂಬುವವರು ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದು, ಆತ್ಮಹತ್ಯೆ ಬಗ್ಗೆ ಯಾವುದೇ ಅನುಮಾನ ಇಲ್ಲವೆಂದು ಹೇಳಿಕೆ ಕೊಟ್ಟಿದ್ದಾರೆ. ಹೋಟೆಲ್ ಸಿಬ್ಬಂದಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.