ಬೆಂಗಳೂರು:- ಆ ಘಟನೆ ಬೆಂಗಳೂರಿನ ಚಿನ್ನದ ಅಂಗಡಿ ಮಾಲೀಕರುಗಳನ್ನೆ ಬೆಚ್ಚಿ ಬೀಳಿಸಿತ್ತು. ಹಾಡ ಹಗಲೇ ಚಿನ್ನದ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು
ಅಂತಹ ಕುಖ್ಯಾತ ಕಳ್ಳರಿಗೆ ಪೋಲಿಸರು ಎಡೆಮುರಿ ಕಟ್ಟಿದ್ದಾರೆ ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ.
ವಯನಾಡು ಭೂಕುಸಿತದಿಂದ ಎಚ್ಚೆತ್ತ ಸರ್ಕಾರ: ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮಕ್ಕೆ ಸೂಚನೆ!
ಹೌದು ಈ ಸಿಸಿ ಟಿವಿ ವಿಡಿಯೋನಾ ಒಮ್ಮೆ ನೋಡಿ. ತಲೆಗೆ ಮಂಕಿ ಕ್ಯಾಪ್ ಹಾಕಿಕೊಂಡು ಏಕಾಏಕಿ ಅಂಗಡಿ ಒಳಗೆ ನುಗ್ಗಿ ಪಿಸ್ತೂಲ್ ತೋರಿಸಿ, ಚೀಲಕ್ಕೆ ಚಿನ್ನಾಭರಣ ಹಾಕಿಕೊಂಡು ಕ್ಷಣ ಮಾತ್ರದಲ್ಲಿ ಎಸ್ಕೇಪ್ ಆಗುತ್ತರುವ ಖದೀಮರು ಈ ಎಲ್ಲ ಘಟನೆ ನಡೆದಿದ್ದು ಜೂನ್ 25 ರಂದು ಬೆಳ್ಳಂ ಬೆಳಗ್ಗೆಮಾದನಾಯಕನಹಳ್ಳಿ ಸಮೀಪದ ದೊಂಬರಹಳ್ಳಿಯ ಪದಮ್ ಜ್ಯುವೆಲ್ಲರಿಯಲ್ಲಿ ದರೋಡೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗಾಗಿ ನೆಲಮಂಗಲ ಡಿವೈಎಸ್ ಪಿ ಜಗದೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು ಈಗ ಆರೋಪಿಗಳನ್ನು ಎಡೆಮುರಿ ಕಟ್ಟುವಲ್ಲಿ ನೆಲಮಂಗಲ ಉಪವಿಭಾಗದ ಪೋಲೀಸರು ಯಶಸ್ವಿಯಾಗಿದ್ದಾರೆ. ಅಸಲಿಗೆ ಈ ಗ್ಯಾಂಗ್ ನಲ್ಲಿ ಒಟ್ಟು 7 ಜನರಿದ್ದಾರೆ. 5 ಜನ ರಾಜಸ್ಥಾನ ಮೂಲದವರಾಗಿದ್ದು, ಇಬ್ಬರು ಬೆಂಗಳೂರಿನವರು. ರಾಜಸ್ಥಾನದಲ್ಲಿ ಚಿನ್ನದ ಅಂಗಡಿಯಲ್ಲಿ ಲೇವಾ ದೇವಿ ಮಾಡುವ ವೇಳೆ ಲಾಸ್ ಆಗಿದ್ದು ಅನಂತರ ಕಳ್ಳತನ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದಾರೆ. ಸಿಸಿ ಟಿವಿ ದೃಶ್ಯ ಮತ್ತು ಕೆಲವು ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ವಿಶೇಷ ತಂಡ ರಾಜಸ್ಥಾನಕ್ಕೆ ಹೋಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ಆರೋಪಿ ಗಳಾದ ನಾರಾಯಣ ಲಾಲ್, ರಾಮ್ ಲಾಲ್, ಕಿಶೋರ್ ಪವಾರ್, ಮಹೇಂದ್ರ ಗೆಹ್ಲೋಟ್ , ಕೀರ್ತಿರಾಮ್, ಅಶೋಕ್ ಕುಮಾರ್ , ಸೋಹನ್ ರಾಮ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 35 ಲಕ್ಷ ರೂಪಾಯಿ ಮೌಲ್ಯದ 417 ಗ್ರಾಂ ಚಿನ್ನಾಭರಣ , ಪಿಸ್ತೂಲ್, ಡ್ರಾಗರ್, ಒಂದು ಬೈಕ್, ಆಟೋ ವಶಕ್ಕೆ ಪಡೆಯಲಾಗಿದೆ. ಇನ್ನೂ ಕಳ್ಳತನ ಮಾಡುವ ಮೊದಲೇ ಈ ಆಸಾಮಿಗಳು ಈ ಅಂಗಡಿ ಸುತ್ತಮುತ್ತ ನಿಗಾವಹಿಸಿದ್ದರು ನಂತರ ಬಂದು ಕೃತ್ಯ ಎಸಗಿದ್ದಾರೆ. ಪಿಸ್ತೂಲ್ ನ್ನು ಬಿಹಾರ ಮೂಲದ ಪರಿಚಯಸ್ಥರಿಂದ ತೆಗೆದುಕೊಂಡಿದ್ದು ಕಳ್ಳತನ ಮಾಡಿದ ಚಿನ್ನವನ್ನ ಏಳು ಜನರೂ ಕೂಡ ಹಂಚಿಕೊಂಡಿದ್ದಾರೆ. ಇವರು ಈ ಮೊದಲು ಚಿಕ್ಕಪೇಟೆ, ರಾಜಸ್ಥಾನದಲ್ಲಿ ಎರಡು ಮೂರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಇತರೆ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಒಟ್ಟಾರೆ ಹಾಡ ಹಗಲೇ ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖದೀಮರನ್ನು ಬಂದಿಸುವಲ್ಲಿ ಮಾದನಾಯಕನಹಳ್ಳಿ ಪೋಲೀಸರು ಯಶಸ್ವಿಯಾಗಿದ್ದಾರೆ. ಈ ಘಟನೆಯಿಂದ ಬೆಚ್ಚಿಬಿದ್ದಿದ್ದ ಜನಸಾಮಾನ್ಯರು ಜ್ಯುವೆಲರಿ ಅಂಗಡಿಗಳ ಮಾಲೀಕರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.