ಕಾಂಗ್ರೆಸ್ ಸರ್ಕಾರ ಘೋರ ಅಪಚಾರ ಮಾಡುತ್ತಿದೆ ನಮ್ಮ ಹಣವನ್ನ ವೈನ್ ಶಾಪ್ ಚಿನ್ನದಂಗಡಿಗಳಿಗೆ ಹಾಕಿದ್ದಾರೆ. ಬೇರೆ ಯಾರಾದ್ರು ಆಗಿದ್ರೆ ರಾಜೀನಾಮೆ ಕೊಟ್ಟು ಹೋಗ್ತಾ ಇದ್ರೂ. ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಆದ್ರೆ ಸಿಎಂ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ವಸೂಲಿ ಮಾಡುತಿದ್ದೇವೆ ಅಂದ್ರೆ ಕದ್ದು ನೀವು ಏನ್ ವಸೂಲಿ ಮಾಡುತ್ತಿದ್ದೀರ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ರಾತ್ರಿ ಮಟನ್ ಊಟ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು: ಆಗಿದ್ದೇನು?
ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿಗಳ ಮೂಲಕ ಹಣ ಹೊಡೆಯಲು ನಮ್ಮ ಯೋಜನೆಗಳನ್ನ ನಿಲ್ಲಿಸಿದ್ದೀರ. 52 ಸಾವಿರ ಕೋಟಿ ಖಜಾನೆ ಹಣ ಬಿಡುಗಡೆ ಆದ ಮೇಲೆ. ನಮ್ಮ ದಲಿತ ಸಮುದಾಯದ ಹಣ ೨೫ ಕೋಟಿ ಯಾಕೆ ತೆಗೆದ್ರಿ. ನಿಮ್ಮ ದುಡ್ಡು ನಮಗೆ ಕೊಡೋದಾದ್ರೆ ಗ್ಯಾರಂಟಿ ಯಾಕೆ ಬೇಕು. ಜನ ಸಂಖ್ಯೆಗೆ ಅನುಗುಣವಾಗಿ ಫ್ರೀ ಕೊಡಬೇಕಿತ್ತು. ನಮ್ಮ ದುಡ್ಡಲ್ಲಿ ನಮಗೆ ಕರೆಂಟ್ ಫ್ರೀ ಅಂತಾರೆ. ಯಾವ ದಲಿತ ಹೆಣ್ಣು ಮಗಳು ಬಸ್ ನಲ್ಲಿ ಓಡಾಟ ಮಾಡ್ತಾರೆ. ಎಸ್ ಸಿಪಿ, ಟಿಎಸ್ ಪಿ ಹಣ ದರ್ಬಳಕೆ ಮಾಡಲಾಗುತ್ತಿದೆ.
ಮೂಡಾ ಹಗರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೂಡಾ ಡಿನೋಟಿಫಿಕೇಷನ್ ಮಾಡಲು ಆಗಲ್ಲ. ದೇವರಾಜ್, ಮಲ್ಲಯ್ಯ, ಮಲ್ಲಿಕಾರ್ಜುನ ಅನ್ನೋ ಮೂರು ಜನರ ಆಸ್ಥಿ.1998 ರಲ್ಲಿ ಡಿಸಿಎಂ ಆಗಿದ್ದ ಸಿಎಂ ಸಿದ್ದರಾಮಯ್ಯ ಅವರು ಡಿನೋಟಿಫೊಕೇಷನ್ ಮಾಡಿದ್ದಾರೆ. 20004ರಲ್ಲಿ ಇವರ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ಕನ್ವರ್ಷನ್ ಮಾಡಿ ಕೊಡುತ್ತಾರೆ, ಹೆಂಡತಿಗೆ ಮುಪ್ಪತ್ತಾಗಿದೆ ಎಂದು ಕೊಡುತ್ತಾರೆ.
20 ವರ್ಷಗಳ ಹಿಂದೆಯೆ ಇಷ್ಟೆಲ್ಲಾ ನಡೆದಿದೆ.ನಿವೇಶನಗಳನ್ನ ಮಾಡಿದ್ದೀರಿ ಎಂದು ಆಮೇಲೆ ೫೦-೫೦ ರೇಷ್ಯೂನಲ್ಲಿ ೧೪ ನಿವೇಶನ ಪಡೆದಿದ್ದಾರೆ. ಅಲ್ಲಿನ ಡಿಸಿ 14 ಪತ್ರಗಳನ್ನ ಬರೆದ ಕಾರಣ ಆ ಡಿಸಿಯನ್ನ ವರ್ಗಾವಣೆ ಮಾಡಿದ್ದಾರೆ. ೨೦೧೬-೧೭ ರಲ್ಲಿ ನಿವೇಶನ ಪಡೆಯಲ್ಲ. ನಾನು ಕೇಳಿಲ್ಲ ಬಿಜೆಪಿಯವರು ಕೊಟ್ಟಿದ್ದಾರೆ ಎಂದು ಈಗ ಸಿದ್ದರಾಮಯ್ಯ ಹೇಳ್ತಾರೆ.ದಲಿತರ ಜಮೀನನ್ನು ಕಬಳಿಸಿದವರು ಇವರೆ.
ನಾಳೆಯಿಂದ ನಮ್ಮ ಪಾದ ಯಾತ್ರೆ ಮುಗಿಯುವಷ್ಟರಲ್ಲಿ ಈ ಸರ್ಕಾರ ಇರಲ್ಲ. ಈಗಾಗಲೆ ರಾಜ್ಯಪಾಲರ ಬಳಿ ಅವರ ಭವಿಷ್ಯ ಇದ್ದು, ಈ ವಾರದಲ್ಲಿ ನಿರ್ಧಾರವಾಗಲಿದೆಈ ಸರ್ಕಾರವೂ ಹೋಗಲಿದೆ, ಸಿಎಂ ಸಿದ್ದರಾಮಯ್ಯ ಅವರು ಹೋಗಲಿದ್ದಾರೆ. ಸಚಿವ ಸಂಪುಟವೆ ಭ್ರಷ್ಟಾಚಾರ ದಲ್ಲಿ ತೊಡಗಿದೆ. ಹಾಗಾಗಿ ಇಡೀ ಸರ್ಕಾರವೆ ಕೆಲವೆ ದಿನಗಳಲ್ಲಿ ಬೀಳಲಿದೆ ಎಂದು ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ದ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.