ಬೆಂಗಳೂರು: ಸಿನಿಮೀಯ ರೀತಿಯಲ್ಲೇ ತಾಯಿಯಿಂದಲೇ ಮಗುವನ್ನು ಧರಧರನೇ ಎಳೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಘಟನೆ ಬೇರೆ ಎಲ್ಲೋ ಆಗಿದ್ದಲ್ಲ ನಗರದ ಹೊರವಲಯದ ಕೆ.ಆರ್ ಪುರಂ ನಲ್ಲಿ ನಡೆದ ಘಟನೆ ನಡೆದಿದೆ,ಮಗುವಿನ ತಾಯಿ ಅನುಪಮ ಮತ್ತು ಆತನ ಸ್ನೇಹಿತನಿಂದ ಕೃತ್ಯ ವೆಸಗಿರುವ ದೇಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಪತಿ ಸಿದ್ದಾರ್ಥ ಮತ್ತು ಪತ್ನಿ ಅನುಪಮ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದೂರಾಗಿದ್ರು 2014 ರಲ್ಲಿ ವಿವಾಹವಾಗಿದ್ದ ಅನುಪಮ ಹಾಗೂ ಸಿದ್ಧಾರ್ಥ್ ಕೌಟುಂಬಿಕ ಕಲಹ ಹಿನ್ನಲೆ ಕೋರ್ಟ್ ನಲ್ಲಿ ಪ್ರಕರಣ ಇದೆ ಕೋರ್ಟ್ ಆರುವರೆ ವರ್ಷದ ಮಗುವನ್ನು ಪತಿ ಸಿದ್ದಾರ್ಥ ಗೆ ನೀಡಿ ಆದೇಶಿಸಿತ್ತು.
ಅಪಾರ್ಟ್ ಮೆಂಟ್ ಮುಂಭಾಗ ಸ್ಕೂಲ್ ಗೆ ತಾತನ ಜೊತೆ ನಿಂತಿದ್ದ ವೇಳೆ ತನ್ನ ಸ್ನೇಹಿತನ ಜೊತೆ ಬಂದ ತಾಯಿ ಮಗನನ್ನು ಕಿಡ್ನ್ಯಾಪ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಅನುಪಮಾ ಮಗನನ್ನು ಕಿಡ್ನ್ಯಾಪ್ ಮಾಡಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.