ಚಾಮರಾಜನಗರ:– ವಯನಾಡ್ ಭೂಕುಸಿತ ಕೇಸ್ ಗೆ ಸಂಬಧಪಟ್ಟಂತೆ ದುರಂತದಿಂದ ಪಾರಾಗಿದ್ದ ಚಾಮರಾಜನಗರದ 6 ಮಂದಿ ತವರಿಗೆ ವಾಪಾಸ್ ಆಗಿದ್ದಾರೆ.
Bengaluru: ಅಶ್ಲೀಲ ಮೆಸೇಜ್ ನಿಂದ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣು!
ಚಾಮರಾಜನಗರ ಜಿಲ್ಲಾಡಳಿತ, ಮೇಪ್ಪಾಡಿ ಕಾಳಜಿ ಕೇಂದ್ರದಿಂದ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಇವರೆಲ್ಲರೂ ನೆರೆ ರಾಜ್ಯ ಕೇರಳದ ಚೂರಲ್ಮಲಾ ಟೀ ಎಸ್ಟೇಟ್ಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡಿಕೊಂಡಿದ್ದರು. ದುರಂತದಿಂದ ಪಾರಾಗಿ ಮೇಪ್ಪಾಡಿ ಕಾಳಜಿ ಕೇಂದ್ರದಲ್ಲಿ ಈ ಕಾರ್ಮಿಕರನ್ನು ಇರಿಸಲಾಗಿತ್ತು. ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನಾಗಶೆಟ್ಟಿ, ಗೌರಮ್ಮ, ದಿವ್ಯಾ, ಚಾಮರಾಜನಗರ ತಾಲೋಕಿನ ಮಂಗಲ ಗ್ರಾಮದ ಜಯಶ್ರೀ, ಮಂಜುಳಾ, ಹಾಗೂ ಸಿದ್ದರಾಜು ಎಂಬುವವರನ್ನು ಅಧಿಕಾರಿಗಳು ಟೆಂಪೋ ಟ್ರಾವೆಲ್ಲರ್ ಮೂಲಕ ಸ್ವಗ್ರಾಮಗಳಿಗೆ ಕರೆತಂದು ಬಿಟ್ಟಿದ್ದಾರೆ. ಇನ್ನು ದೇವರನಾಡು ಕೇರಳದ ವಯನಾಡು ಜಿಲ್ಲೆಯ ಚೂರಲಮಲದ ಚಹಾ ಎಸ್ಟೇಟ್ನಲ್ಲಿ ಕೂಲಿ ಮಾಡುತ್ತಾ ಇದ್ದ ರತ್ನಮ್ಮ ಹಾಗೂ ರಾಜೇಂದ್ರ ದಂಪತಿ ಗುಡ್ಡ ಕುಸಿತದಲ್ಲಿ ಸಾವಿಗೀಡಾಗಿದ್ದರು. ಇದೀಗ ಉಳಿದವರನ್ನು ರಕ್ಷಿಸಿ ಕರೆತರಲಾಗಿದೆ.