ಮುಂದಿನ ವರ್ಷ ಐಪಿಎಲ್ ಆಡುವ ಬಗ್ಗೆ MS ಧೋನಿ ಕೂಲಾಗೆ ಮಾತನಾಡಿದ್ದಾರೆ.
SC ಒಳ ಮೀಸಲಾತಿಗೆ ಸುಪ್ರೀಂ ಅಸ್ತು: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು ಗೊತ್ತಾ!?
ವಾಸ್ತವವಾಗಿ 2023 ರ ಆವೃತ್ತಿಯೇ ಧೋನಿಯ ಕೊನೆಯ ಐಪಿಎಲ್ ಎನ್ನಲಾಗುತ್ತಿತ್ತು. ಆದರೆ ಧೋನಿ 2024 ರ ಐಪಿಎಲ್ನಲ್ಲಿ ಕಣಕ್ಕಿಳಿಯುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಧೋನಿ ಮುಂದಿನ ಆವೃತ್ತಿಯನ್ನು ಆಡುತ್ತಾರೋ, ಇಲ್ಲವೋ ಎಂಬುದರ ಬಗ್ಗೆ ಫ್ರಾಂಚೈಸಿಯಾಗಲಿ ಅಥವಾ ಧೋನಿಯಾಗಲಿ ಇದುವರೆಗೆ ಏನನ್ನು ಹೇಳಿಲ್ಲ.
ಆದರೆ ಈ ಕುರಿಯಾದ ಪ್ರಶ್ನೆಗೆ ಧೋನಿ ಇದೇ ಮೊದಲ ಬಾರಿಗೆ ಉತ್ತರಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಂದಿನ ಆವೃತ್ತಿಯ ಐಪಿಎಲ್ ಆಡುತ್ತೀರಾ ಎಂಬ ಪ್ರಶ್ನೆಯನ್ನು ಧೋನಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಧೋನಿ, ಇದೆಲ್ಲವೂ ತನ್ನ ಕೈಯಲ್ಲಿಲ್ಲ. ಐಪಿಎಲ್ 2025 ರ ಧಾರಣ ನಿಯಮಗಳನ್ನು ನೋಡಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಹೀಗಾಗಿ ಪ್ರಸ್ತುತ ಈ ನಿರ್ಧಾರವು ತನ್ನ ಕೈಯಲ್ಲಿಲ್ಲ ಎಂದು ಧೋನಿ ಹೇಳಿದ್ದಾರೆ
ಮುಂದುವರೆದು ಧೋನಿ, ಆಟಗಾರರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕಾಗಿ ನಾವು ಕಾಯಬೇಕಾಗಿದೆ. ಚೆಂಡು ಸದ್ಯಕ್ಕೆ ನಮ್ಮ ಅಂಗಳದಲ್ಲಿಲ್ಲ. ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡಿದ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ತಂಡದ ಹಿತಾಸಕ್ತಿ ಪರಿಗಣಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಪ್ರಸ್ತುತ ಎಂಎಸ್ ಧೋನಿ ಅವರಿಗೆ 43 ವರ್ಷ ವಯಸ್ಸಾಗಿದ್ದು, ಕಳೆದ ಸೀಸನ್ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈಗ ಅವರ ಫಿಟ್ನೆಸ್ ಮೊದಲಿನಂತೆಯೇ ಇಲ್ಲವಾದರೂ, ಕಳೆದ ಆವೃತ್ತಿಯಲ್ಲಿ ಧೋನಿ, ವಿಕೆಟ್ ಕೀಪಿಂಗ್ ಜವಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಹೀಗಾಗಿ ಧೋನಿ ಫಿಟ್ ಇಲ್ಲ ಎಂದು ಹೇಳುವುದು ಅಸಾಧ್ಯ.
ಪ್ರದರ್ಶನದ ದೃಷ್ಟಿಯಿಂದ, ಧೋನಿ ನಿವೃತ್ತಿಗೆ ಇದು ಸರಿಯಾದ ಸಮಯವಲ್ಲ. ಧೋನಿ ಕಳೆದ ಸೀಸನ್ನಲ್ಲಿ ಫಿನಿಶರ್ ಆಗಿ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಧೋನಿ ಆಡಿದ 8 ಇನ್ನಿಂಗ್ಸ್ಗಳಲ್ಲಿ 53 ಕ್ಕಿಂತ ಹೆಚ್ಚು ಸರಾಸರಿ ಹಾಗೂ 220 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ 161 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.
ಮೆಗಾ ಹರಾಜಿನಲ್ಲಿ ಬಿಸಿಸಿಐ ನಾಲ್ವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ನಿಯಮ ರೂಪಿಸಿದರೆ ಮುಂದಿನ ಸೀಸನ್ನಲ್ಲಿ ಧೋನಿ ಆಡುವುದು ಕಷ್ಟ ಎಂಬ ವರದಿ ಇದೆ. ವರದಿಯ ಪ್ರಕಾರ, ಬಿಸಿಸಿಐ ಮುಂದಿನ ಸೀಸನ್ಗೂ ಮೊದಲು ಐದರಿಂದ ಆರು ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಮಾಡಿದರೆ ಮಾತ್ರ, ಚೆನ್ನೈ ತಂಡವು ಧೋನಿಯನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.