ಬೆಂಗಳೂರು:- ಮುಡಾ ಹಗರಣದಲ್ಲಿ ಸರ್ಕಾರ ಹಾಗು ರಾಜ್ಯಪಾಲರ ನಡುವೆ ಸಂರ್ಘಷ ಶುರುವಾಗಿದೆ.ಸಿಎಂ ಸಿದ್ದರಾಮಯ್ಯ ಗೆ ಶೋಕಾಸ್ ನೋಟಿಸ್ ಕೊಟ್ಟಿರುವ ರಾಜ್ಯಪಾಲರ ನಡೆಯನ್ನ ಸಚಿವ ಸಂಪುಟ ಸಭೆ ಖಂಡಿಸಿ,ನಿರ್ಣಯ ಅಂಗೀಕರಿಸಿದೆ.ಈ ಮೂಲಕ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಸಾಂವಿಧಾನಿಕ ಸಂಘರ್ಷಕ್ಕೆ ಇಂದಿನ ಸಚಿವ ಸಂಪುಟ ಸಭೆ ನಾಂದಿ ಹಾಡಿದೆ.
ಬಿಜೆಪಿ- ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಸುಖಾಂತ್ಯ: ಪ್ರೀತಂಗೆ ಗೇಟ್ ಪಾಸ್, HDKಗೆ ಫುಲ್ ಪವರ್!
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಖುರ್ಚಿ ಕಳೆದುಕೊಳ್ಳಲಿದ್ದಾರೆ ಎಂಬ ಚರ್ಚೆಗೆ ಇದೀಗ ಪುಷ್ಠಿ ಸಿಗುತ್ತಿದೆ.ಮುಡಾ ಹಗರಣದಲ್ಲಿ ರಾಜ್ಯಪಾಲರು ನೇರವಾಗಿ ಮಧ್ಯಪ್ರವೇಶ ಮಾಡಿದ್ದು,ಸಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.ಇದು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ತಲ್ಲಣಗೊಳಿಸಿದೆ.ರಾಜ್ಯಪಾಲರ ನಡೆ ವಿರುದ್ಧ ಸಿಎಂ ಅನುಪಸ್ಥಿತಿಯಲ್ಲಿ,ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ ಮಾಡಿದೆ.ಈ ಮೂಲಕ ಕಾಂಗ್ರೆಸ್ ಸರ್ಕಾರ ಹಾಗು ರಾಜ್ಯಪಾಲರ ನಡುವೆ ಕಾನೂನು ಸಂರ್ಘಷ ಜೋರಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.
ಇನ್ನು ರಾಜ್ಯಪಾಲರು ಸಿಎಂಗೆ ಶೋಕಾಸ್ ನೋಟಿಸ್ ನೀಡಿರುವ ಬಗ್ಗೆ ಸಂಪುಟ ಸಭೆ ಯಲ್ಲಿ ಸುದೀರ್ಘವಾಗಿ ಚರ್ಚೆಯಾಯ್ತು.ಬಳಿಕ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಹಿರಿಯ ಸಚಿವರು ಸುದ್ದಿ ಗೋಷ್ಠಿ ನಡೆಸಿ,ರಾಜ್ಯಪಾಲರ ನಡೆಗೆ ಬೆಂಕಿಯುಗಳಿದ್ರು.ಜುಲೈ ೨೬ ರಂದು ರಾಜ್ಯಪಾಲರಿಗೆ ಟಿ ಜೆ ಅಬ್ರಾಹಂ ದೂರು ನೀಡಿದ್ದರು. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಲಾಗಿದೆ.ಇದು ರಾಜಕೀಯ ದುರುದ್ದೇಶವಲ್ದೇ ಬೇರೇನು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.ಬೇರೆ ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರನ್ನ ಬಳಸಿಕೊಂಡು ಸರ್ಕಾತ ಅಸ್ಥಿರ ಮಾಡಲು ಪ್ರಯತ್ನ ಮಾಡಲಾಗುತ್ತಿದೆ.ಕರ್ನಾಟಕದಲ್ಲೂ ಇದೇ ರೀತಿಯ ಮಾಡಲಾಗುತ್ತಿದೆ ಎಂಬ ಅನುಮಾನಗಳು ನಮಗೆ ಬರುತ್ತಿದೆ.ರಾಜ್ಯದ ಜನರು ೧೩೬ ಸ್ಥಾನ ನಮಗೆ ಕೊಟ್ಟಿದ್ದಾರೆ.ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಅಸ್ಥಿರ ಮಾಡಲು ಸಾಧ್ಯವಿಲ್ಲ.ಕೂಡಲೇ ರಾಜ್ಯಪಾಲರು ಸಿಎಂಗೆ ಕೊಟ್ಟಿರುವ ಶೋಕಾಸ್ ನೋಟಿಸ್ ವಾಪಸ್ ಪಡೆಯಬೇಕೆಂದು ಡಿಸಿಎಂ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ
ಇನ್ನು ಈ ಬಗ್ಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಗವರ್ನರ್ ಮಾಡಿರೋದೇ ಕಾನೂನಿನ ವಿರುದ್ಧ, ಕಾನೂನು ಬಾಹಿರ.ಟಿ ಜೆ ಅಬ್ರಾಹಂ ಮ್ಯಾಜಿಸ್ಟ್ರೇಟ್ ಮುಂದೆ ಹೋಗೋದು ಬಿಟ್ಟು, ಗವರ್ನರ್ ಬಳಿ ಬಂದಿರೋದೇ ಕಾನೂನು ಬಾಹಿರ. ನಾವು ಉತ್ತರ ಕೊಟ್ಟಿರುವ ಸುಧೀರ್ಘವಾಗಿದೆ. ಅಷ್ಟು ಪೇಜ್ ಓದಲು ಒಂದು ದಿನ ಬೇಕು. ಆದರೆ ದೂರು ಕೊಟ್ಟ ಕೆಲವೇ ಗಂಟೆಗಳಲ್ಲಿ ನೋಟೀಸ್ ಕೊಟ್ಟಿದ್ದಾರೆ. ನಮಗೂ ಸಂವಿಧಾನವಿದೆ. ಸುಪ್ರೀಂ ಕೋರ್ಟ್ ಇದೆ. ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕಾನೂನು ಹೋರಾಟ ಬಗ್ಗೆ ನಿರ್ಧಾರ ಮಾಡ್ತೀವಿ ಎಂದರು.
ಒಟ್ನಲ್ಲಿ, ಮುಡಾ ಹಗರಣದಲ್ಲಿ ಸರ್ಕಾರ ಹಾಗು ರಾಜ್ಯಪಾಲರ ನಡುವೆ ದೊಡ್ಡ ಮಟ್ಟದ ಕಾನೂನು ಹೋರಾಟ ಶುರುವಾಗಿದೆ.ಒಂದು ವೇಳೆ ಸಿಎಂ ವಿರುದ್ದ ರಾಜ್ಯಪಾಲರು ಪ್ರೊಸಿಕ್ಯೂಷನಗೆ ಅನುಮತಿ ಕೊಟ್ಟಿದ್ದೇ ಆದಲ್ಲಿ ಸಿದ್ದರಾಮಯ್ಯ ಸಿಎಂ ಖುರ್ಚಿ ಅಲುಗಾಡೋದು ಬಹುತೇಕ ಖಚಿತ ಎನ್ನಲಾಗ್ತಿದೆ.ಈ ಹಿನ್ನಲೆಯಲ್ಲಿ ರಾಜ್ಯಪಾಲರ ನಡೆ ವಿರುದ್ಧ ಕಾನೂನು ಹೋರಾಟಕ್ಕೆ ಸರ್ಕಾರ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ ತೀರ್ಮಾನ ತೆಗದುಕೊಳ್ಳಲಾಗಿದೆ.