ಬೆಂಗಳೂರು: ಮಳೆಗಾಲ ಬಂದ್ರೆ ಸಾಕು ಎಳನೀರಿನ ಬೆಲೆ ತುಂಬ ಕಡಿಮೆ ಆಗುತ್ತಿತ್ತು. ಆದರೆ ಈ ವರ್ಷ ಮಳೆಗಾಲದಲ್ಲಿಯೂ ಎಳನೀರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಬೇಸಿಗೆಯಲ್ಲಿ 60 ರಿಂದ 70 ರೂಪಾಯಿ ದಾಟಿತ್ತು. ಆದಾದ ನಂತರ ಮಳೆಗಾಲ ಆರಂಭವಾದ ಮೇಲೆ 45 ರೂಪಾಯಿಗೆ ಇಳಿದಿತ್ತು. ಆದರೆ ಈಗ ಮಳೆಗಾಲವಿದ್ದರೂ 50 ರಿಂದ 60 ರೂಗೆ ಎಳನೀರು ಮಾರಾಟವಾಗುತ್ತಿದೆ.
ಟೊಮೆಟೋ ಬೆಲೆಯನ್ನು ಹತೋಟಿಗೆ ತರಲು ಕೇಂದ್ರದಿಂದ ನ್ಯೂ ಪ್ಲಾನ್: ಸಬ್ಸಿಡಿ ದರದಲ್ಲಿ ಮಾರಾಟ!
ಇನ್ನು ಬೇಸಿಗೆಯಲ್ಲಿ ನೀರಿಲ್ಲದೆ ಈ ವರ್ಷದ ತೆಂಗಿನ ಫಸಲು ಸರಿಯಾಗಿ ಬಂದಿಲ್ಲ. ಹೀಗಾಗಿ ಸೋನೆ ಮಳೆ ಬಿದ್ರು, ಎಳ ನೀರಿಗೆ ಮಾತ್ರ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ 50, 60 ರೂಪಾಯಿಗೆ ಎಳನೀರು ಮಾರಾಟವಾಗುತ್ತಿದೆ. ಮಳೆಗಾಲದಲ್ಲಿಯೂ ಇಷ್ಟು ಬೆಲೆ ಇರುವುದನ್ನ ಕೇಳಿ ಗ್ರಾಹಕರು ಶಾಕ್ ಆಗ್ತಾ ಇದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ 30 ರಿಂದ 40 ರೂಪಾಯಿ ಇರ್ತಿತ್ತು. ಆದರೆ ಈ ಬೇಸಿಗೆಯಿಂದ ಮಳೆಗಾಲದವರೆಗೂ ಒಂದೇ ಬೆಲೆ ಇದೆ. ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಎಳ ನೀರನ್ನ ಕುಡಿಯಲೇಬೇಕು.