ಗಣಿ ಜಿಲ್ಲೆ ಬಳ್ಳಾರಿಯ ಜೀವನಾಡಿಯಾಗಿರುವ ತುಂಗಾಭದ್ರ ಡ್ಯಾಂ ಭರ್ತಿಯಾದ ಹಿನ್ನಲೆ, ನದಿಗೆ ಸುಮಾರು ಎರಡು ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ. ತುಂಗಭದ್ರ ನದಿ ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಕಂಪ್ಲಿ ಸೇತುವೆ ಬಳಿ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಜೊತೆಗೂಡಿ ತುಂಗಾಭದ್ರೆಗೆ ಗಂಗೆ ಪೂಜೆ ನಿರ್ವಹಿಸಿ ಬಾಗಿನ ಅರ್ಪಿಸಿದರು.ಮಳೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಡ್ಯಾಂ ತುಂಬಿ ನದಿಗೆ ಸಹ ಬೃಹತ್ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಗಣಿ ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿದೇ.
ಅವಳಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆಧರಿವೆ. ಈಗಾಗಲೇ ನಾಟಿ ಕಾರ್ಯವನ್ನು ಆರಂಭಿಸಿರುವುದರಿಂದ, ಅದೇ ಸಮಯಕ್ಕೆ ತುಂಗಾಭದ್ರ ನದಿಯು ಕೇವಲ 25 ದಿನದಲ್ಲಿ ಸಂಪೂರ್ಣ ಭರ್ತೀಯಾಗಿರುವುದಕ್ಕೆ ಅವಳಿ ಜಿಲ್ಲೆಯ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಉತ್ತಮ ಮಳೆಯಾಗಿದೆ, ಮುಂದಿನ ದಿನಗಳಲ್ಲಿ ಉತ್ತಮವಾಗಿ ಫಸಲು ಬಂದು ಒಳ್ಳೆಯ ಧರ ಸಿಗಲಿ ಎಂದು ಆಶಾಯವನ್ನು ವ್ಯಕ್ತಪಡಿಸಿದರು.