ಬೆಂಗಳೂರು: ಕರ್ನಾಟಕದಲ್ಲಿ (Karnataka) ವಿರೋಧ ಪಕ್ಷಗಳ (Opposition Party) ಸ್ಟಾರ್ ಚೆನ್ನಾಗಿಲ್ಲ. ಒಳ್ಳೆಯ ಜ್ಯೋತಿಷಿಯನ್ನು ನೋಡಿ ಎಲ್ಲವನ್ನು ಸರಿ ಮಾಡಿಕೊಳ್ಳಬೇಕು ಎಂದು ಮಾಜಿ ಕೇಂದ್ರ ಮಂತ್ರಿ ಡಿವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎನ್ಡಿಎ (NDA) ತಂಡಕ್ಕೆ ಇಂದು ಅದ್ಬುತ ಅವಕಾಶ ಇದೆ. ಸರ್ಕಾರ ಜಾಗ ನುಂಗಿಕೊಂಡು, ಹೆಂಡತಿ ಹೆಸರಿಗೆ ಮಾಡೋ ನಿಕೃಷ್ಟ ರಾಜಕೀಯವನ್ನು ಕಾಂಗ್ರೆಸ್ (Congress) ಮಾಡುತ್ತಿದೆ. ಇದನ್ನ ನಾವು ಬಳಕೆ ಮಾಡಿಕೊಳ್ಳಬೇಕು ಎಂದರು
ಡಿಕೆಶಿವಕುಮಾರ್ಗೆ ಕಾರಂತ ಬಡಾವಣೆಯ ನಿವೇಶನ ಹಂಚಿಕೆ ಕುರಿತು ಸುರೇಶ್ ಕುಮಾರ್ ಪತ್ರ!
ಬಿಜೆಪಿ-ಜೆಡಿಎಸ್ (BJP-JDS) ಒಡೆದ ಮನೆ ಆಗಿದೆ. ಕಾಂಗ್ರೆಸ್ ಒಡೆದ ಮನೆಯಾಗಿದೆ ಎನ್ನುವ ಬದಲು ನಮ್ಮದಾಗಿದೆ. ಯತ್ನಾಳ್, ಜಾರಕಿಹೋಳಿ ಒಂದು ಕಡೆ, ಜಿಟಿ ದೇವೇಗೌಡ ಮತ್ತೊಂದು. ಇದನ್ನ ನೋಡಿದ್ರೆ ವಿಪಕ್ಷ ಸ್ಟಾರ್ ಚೆನ್ನಾಗಿಲ್ಲ ಎಂದು ಅನಿಸುತ್ತದೆ.
ನಮ್ಮಲ್ಲಿ ಸಾಮರಸ್ಯವಿಲ್ಲ ಪ್ಲ್ಯಾನ್ ಆಫ್ ಆಕ್ಷನ್ ಇಲ್ಲದ್ದಕ್ಕೆ ನೋವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ನಮ್ಮ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವೂ ಆಗಿದ್ದು ಫೋನ್ ಮಾಡಿ ತಿಳಿಸುತ್ತಿದ್ದಾರೆ. ಒಂದು ಕಡೆ ರಾಜಕೀಯ ಹೋರಾಟ ಆಗಬೇಕು. ಮತ್ತೊಂದು ಕಡೆ ಕಾನೂನು ಹೋರಾಟ ಮಾಡಬೇಕು ಎಂದರು.