ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾದ ದರ್ಶನ್ ಅಂಡ್ ಗ್ಯಾಂಗ್ ನ ನ್ಯಾಯಾಂಗ ಬಂಧನದ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ಇಂದು ಪ್ರಕರಣದ ಎಲ್ಲಾ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಿರೊ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪೊಲೀಸ್ರು ಮನವಿ ಮಾಡಿಕೊಳ್ಳಲಿದ್ದಾರೆ.
ದರ್ಶನ್ ಗೆ ಮನೆಯೂಟ ಸಿಗೋದು ಡೌಟ್!?: ಕಾರಾಗೃಹ ಇಲಾಖೆ ಐಜಿಗೆ ವಕೀಲ ಪತ್ರ!
ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ ಆರೋಪಿಗಳು, ತುಮಕೂರು ಜೈಲಿನಿಂದ 4 ಆರೋಪಿಗಳನ್ನ ಹಾಜರು ಪಡಿಸಲು ಸಿದ್ದತೆ ನಡೆದಿದೆ. ರೇಣುಕಾಸ್ವಾಮಿ ಕೊಲೆ ಸಂಬಂಧ ನಟ ದರ್ಶನ್, ಪವಿತ್ರಾಗೌಡ, ಪವನ್, ಪ್ರದೂಷ್, ವಿನಯ್, ದೀಪಕ್ ಸೇರಿ 17 ಮಂದಿ ಅರೆಸ್ಟ್ ಆಗಿದ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಪುನಃ ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ ಮಾಡಲಿದ್ದಾರೆ.
ನ್ಯಾಯಾಂಗ ಬಂಧನ ವಿಸ್ತರಣೆಗೆ 10 ಕ್ಕು ಹೆಚ್ಚು ಅಂಶಗಳ ರಿಮ್ಯಾಂಡ್ ಅಪ್ಲಿಕೇಷನ್ ತಯಾರಿ ಮಾಡಲಾಗಿದೆ.
ಇಂದು ಕೋರ್ಟ್ ಗೆ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಕೆಮಾಡಲಿದ್ದು,
ಪೊಲೀಸರ ರಿಮ್ಯಾಂಡ್ ಅಪ್ಲಿಕೇಷನ್ ಪ್ರಮುಖ ಅಂಶಗಳು ಏನು ಅಂತಾ ನೋಡೋದಾದ್ರೆ..
1) ಪ್ರಕರಣದ ಎ1 ರಿಂದ ಎ17 ಆರೋಪಿಗಳು ಅಪಹರಣ, ಕೊಲೆ, ಒಳ ಸಂಚು, ಮತ್ತು ಸಾಕ್ಷಿನಾಶದಲ್ಲಿ ಭಾಗಿ.
2) ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನಗಳು ಬೇರೆಯವರ ಹೆಸರಿನಲ್ಲಿದ್ದು, ಮಾಲೀಕರನ್ನ ಪತ್ತೆ ಮಾಡಿ ಹೇಳಿಕೆ ದಾಖಲಿಸುವುದು.
3) ಆರೋಪಿಗಳು ಭೌತಿಕ ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನ ನಾಶಪಡಿಸಿರುವುದು ತನಿಖೆಯಲ್ಲಿ ಪತ್ತೆ.
4) ಆರೋಪಿಗಳು ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿ, ಸಿಮ್ ನೊಂದಣೆಯಾದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಿ ವಿಚಾರಣೆ.
5) ತನಿಖಾ ಕಾಲದಲ್ಲಿ ಸಿಕ್ಕ ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನ ತಜ್ಞರ ಪರಿಶೀಲನೆಗೆ ಕಳುಹಿಸಿದ್ದು, ವರದಿ ಸಂಗ್ರಹಿಸುವುದು.
6) ಮೊಬೈಲ್ ಹಾಗೂ ಸಾಕ್ಷಿಗಳ ಮೊಬೈಲ್ ಪೋನ್ ಹೈದರಾಬಾದ್ ಸಿ.ಎಫ್.ಎಸ್.ಎಲ್ ಗೆ ಕಳುಹಿಸಿದ್ದು, ವರದಿಯನ್ನು ಪಡೆದುಕೊಳ್ಳುವುದು.
7) ಡಿವಿಆರ್ನಲ್ಲಿನ ದತ್ತಾಂಶವನ್ನು ಸಂಗ್ರಹಿಸಿದ ನಂತರ ಪರಿಶೀಲನೆ, ಎಫ್ಎಸ್ಎಲ್ಗೆ ಕಳುಹಿಸಿ ವರದಿಯನ್ನ ಪಡೆಯುವುದು.
8) ಪ್ರಕರಣದ ವೇಳೆ ಆರೋಪಿಗಳು ಸಂಪರ್ಕಿಸಿದ ಹಲವು ಸಾಕ್ಷಿದಾರರುಗಳನ್ನ ವಿಚಾರಣೆ ಮಾಡಿ ಹೇಳಿಕೆ ಪಡೆಯುವುದು.
9) ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿದಾರರುಗಳನ್ನು ವಿಚಾರಣೆ ಮಾಡಿ ಹೇಳಿಕೆಗಳನ್ನು ಹಾಗೂ ಕಲಂ 164 ಅಡಿ ಹೇಳಿಕೆಗಳನ್ನು ಪಡೆದುಕೊಳ್ಳವುದು.
10) ಪ್ರಕರಣದ ಸಾಕ್ಷಿದಾರರುಗಳಿಗೆ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕುವ ಮತ್ತು ವ್ಯವಸ್ಥಿತ ರೀತಿಯನ್ನು ಸಾಕ್ಷ್ಯನಾಶ ಪಡಿಸುವ ಸಾದ್ಯತೆ.
ಹೀಗೆ ಹತ್ತಕ್ಕು ಹೆಚ್ಚು ಅಂಶಗಳನ್ನ ಸಿದ್ದಪಡಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಇಂದು ರಿಮ್ಯಾಂಡ್ ಸಲ್ಲಿಕೆ ಮಾಡಲಿದ್ದಾರೆ.