ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಐದು ವರ್ಷ ಖಚಿತ ಅಂತ ಜಿ ಪರಮೇಶ್ವರ ಹೇಳಲಿಲ್ಲ ಎಂಬ ಪ್ರಶ್ನೆ.ಅದು ಮುಖ್ಯವಲ್ಲ ಯಾಕೆಂದರೆ. ಈಗ ಒಬ್ಬ ಮುಖ್ಯಮಂತ್ರಿ ಇದ್ದಾಗ. ಇನ್ನೊಬ್ಬರು ಮುಖ್ಯಮಂತ್ರಿ ಮಾಡ್ತಿವಿ ಅಂತ ಹೇಳೋದು ಖಂಡಿತವಾಗಿ ಸರಿಯಲ್ಲ.ಅದರ ಬಗ್ಗೆ ಮಾತಾಡೋದು ಅನಾವಶ್ಯಕ ಎಂದು ಬಾಡಗಂಡಿ ಗ್ರಾಮದಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರಕಾರ ಅಸ್ತಿರ ಮಾಡಲು ಬಿಜೆಪಿಯವರಿಂದರಾಜ್ಯಪಾಲರ ಬಳಕೆ ವಿಚಾರ.ಇವತ್ತು ನೇರವಾಗಿ ಗವರ್ನರ್ ಬಗ್ಗೆ ನಮಗೆ ಸಂಶಯ ಬರ್ತಿದೆ.ಯಾಕೆಂದರೆ ಎಲ್ಲೋ ಒಂದು ಕಡೆ ಬೇರೆ ಬೇರೆ ರಾಜ್ಯಗಳಲ್ಲಿ.ಯಾವ ರೀತಿ ರಾಜ್ಯಪಾಲರ ದುರುಪಯೋಗ ಪಡಿಸಿಕೊಳ್ಳುವ ಇತಿಹಾಸ ಅನೇಕ ನಿದರ್ಶನಗಳಿವೆ.ಅದು ತಮಿಳುನಾಡು,ಪಶ್ಚಿಮ ಬಂಗಾಳ,ಮಹಾರಾಷ್ಟ್ರ ಇರಬಹುದು.ರಾಜ್ಯಪಾಲರು ಕಚೇರಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಒಂದು ಕೆಟ್ಟ ಕೆಲಸವನ್ನು ಕೇಂದ್ರ ಸರಕಾರ ಮಾಡ್ತಿದೆ.
ಕೇರಳದಲ್ಲಿ ,ದೆಹಲಿಯಲ್ಲಿ ಎಲ್ಲ ಕಡೆ.ನಮ್ಮ ಕರ್ನಾಟ ಕರ್ನಾಟಕ ರಾಜ್ಯದಲ್ಲಿ ನಮ್ಮ ರಾಜ್ಯಪಾಲರು ಈ ತರಹ ಮಾಡ್ತಾರೆ ಅಂತ ಅನ್ಕೊಂಡಿರಲಿಲ್ಲ.ಇವತ್ತು ಅವರು ಕೇಂದ್ರ ಸರಕಾರದ ಕೈಗೊಂಬೆಯಾಗಿ.ಬಿಜೆಪಿ ಪಕ್ಷದ ನಿರ್ದೇಶನದ ಮೇರೆಗೆ.ಕೆಲಸ ಮಾಡ್ತಿದಾರೆ ಎಂಬ ಭಾವನೆ ನಮಗೆ ಬರ್ತಿದೆ ಅದು ಒಳ್ಳೆಯದಲ್ಲ.ಯಾಕೆಂದರೆ ಈಗ ಸಿಎಮ್ ಅವರಿಗೆನೆ ನೊಟೀಸ್ ಕೊಡುವ ಕೆಲಸ ಮಾಡಿದಾರೆ ರಾಜ್ಯಪಾಲರು.
ಯಾವುದರಲ್ಲಿಯೂ ಏನು ಆದಾರಗಳಿಲ್ಲ.ಅಂತಹ ಒಂದು ವಿಷಯದ ಬಗ್ಗೆ ಕಾನೂನು ಸಲಹೆ ಪಡೆಯದೆನೆ.ನೇರವಾಗಿ ಒಬ್ಬ ಸಿಎಮ್ ಗೆ ನೊಟೀಸ್ ಕೊಡ್ತಿನಿ ಅಂದರೆ.ಈ ರಾಜ್ಯಪಾಲರ ಬಗ್ಗೆ ಮತ್ತಿನ್ನೇನು ಹೇಳಬೇಕು.ಖಂಡಿತವಾಗಿಯೂ ಇದು ಒಪ್ಪುವ ಮಾತಲ್ಲ.ಜನತಂತ್ರ ವ್ಯವಸ್ಥೆಯಲ್ಲಿ ರಾಜ್ಯಪಾಲರು ಸರಕಾರದ ಮಂತ್ರಿಮಂಡಲದ ಶಿಪಾರಸ್ಸಿನ ಮೇರೆಗೆ.ಜವಾಬ್ದಾರಿ ನಿರ್ವಹಣೆ ಮಾಡಬೇಕು.ರಾಜಕೀಯ ಮಾಡೋದಕ್ಕೆ ರಾಜ್ಯಪಾಲರು ಈ ಕೆಲಸ ಮಾಡಬಾರದು.ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಈ ತರಹ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಜೆಪಿಯ ವ್ಯವಸ್ಥೆಯಾಗಿದೆ.ಎಲ್ಲ ರಾಜ್ಯಗಳಲ್ಲಿ ಸರಕಾರ ಅಸ್ತಿರಗೊಳಿಸಬೇಕು.ಅಯರಕಾರ ಬೀಳಿಸಬೇಕು ಬೇರೆ ಪಕ್ಷ ಅಧಿಕಾರದಲ್ಲಿದ್ದಾಗ ಆಡಳಿತ ನಡೆಸಲು ಬಿಡಬಾರದು.ಗೊಂದಲ ಸೃಷ್ಟಿ ಮಾಡಬೇಕು ಎಂಬ ಹುನ್ನಾರಗಳನ್ನು ಕೇಂದ್ರ ಸರಕಾರ ಬಿಜೆಪಿ ಮಾಡ್ತಿದೆ.ಬಿಜೆಪಿ ಕೇಂದ್ರ ಅಯವ್ಯಯದಲ್ಲಿ ನಮಗೆ ದುಡ್ಡು ಕೊಡೋದಿಲ್ಲ.ಮಹಾದಾಯಿ ,ಭದ್ರಾ ಮೇಲ್ದಂಡೆ ಇರಬಹುದು.ಬರಗಾಲದ ಅನುದಾನ ಪಡೆದುಕೊಳ್ಳಲು.ನಾವು ಸುಪ್ರೀಂ ಕೋರ್ಟ್ ಗೆ ಹೋಗಿ ಅನುದಾನ ತರತಕ್ಕ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಬಂತು.
ನಮ್ಮ ರಾಜ್ಯಕ್ಕೆ ಯಾವ ವ್ಯವಸ್ಥೆ ಮಾಡದೆ.ಸರಕಾರ ತೆಗೆಯಬೇಕು ಎಂಬ ಉದ್ದೇಶದಿಂದ ಹುನ್ನಾರ ಸಂಚುಗಳನ್ನು ಮಾಡುತ್ತಿದ್ದಾರೆ.ಅದರಲ್ಲೂ ಈ ಕಾರ್ಯಕ್ಕೆ ರಾಜ್ಯಪಾಲರನ್ನು ಬಳಸಿಕೊಳ್ಳೋದು ಕೊಟ್ಟ ಬೆಳವಣಿಗೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.