ಒಲಿಂಪಿಕ್ನ ನಾಲ್ಕನೇ ದಿನವಾದ ಇಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಆಟಗಾರರು ಪದಕಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇದರ ನಡುವೆಯೇ ಈಜಿಪ್ಟ್ನ ಫೆನ್ಸರ್ ನಾಡಾ ಹಫೀಜ್ ಗರ್ಭಿಣಿಯಾಗಿದ್ದರಿಂದ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕರೂ ತನ್ನಿಂದ ಅದು ಸಾಧ್ಯವೇ? ಎಂಬ ಗೊಂದಲದಲ್ಲಿದ್ದರು.
ಆದರೆ, ಒಲಿಂಪಿಕ್ಸ್ ವೇದಿಕೆಯಲ್ಲೇ ತಾಯ್ತನವನ್ನು ಸಂಭ್ರಮಿಸಬೇಕು, ಈ ಮೂಲಕ ಎಲ್ಲ ಮಹಿಳೆಯರಿಗೆ ಒಂದು ಸಂದೇಶ ನೀಡಬೇಕೆಂದು ಅವರು 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ, 16ನೇ ಸುತ್ತಿನಲ್ಲಿ ಸೋಲನ್ನು ಕಂಡಿದ್ದಾರೆ. ಆದರೇ ಗರ್ಭಿಣಿಯಾಗಿದ್ದರೂ ಕೂಡ ದೇಶವನ್ನು ಪ್ರತಿನಿಧಿಸಿ ಜನರ ಹೃದಯವನ್ನು ಗೆದ್ದಿದ್ದಾರೆ.
ಬಾಯ್ ಫ್ರೆಂಡ್ ಜೊತೆ ಔಟಿಂಗ್ ಹೋಗಿದ್ದ ಈಜುಗಾರ್ತಿ: ಒಲಿಂಪಿಕ್ಸ್ನಿಂದ ಹೊರಹಾಕಿದ ಮುಖ್ಯಸ್ಥ!
ಈಜಿಪ್ಟಿನ ಫೆನ್ಸರ್ ನಡಾ ಹಫೀಜ್ ಅವರು 7 ತಿಂಗಳ ಗರ್ಭಿಣಿಯಾಗಿದ್ದಾಗ ಸ್ಪರ್ಧಿಸುವ ಮೂಲಕ ಪ್ಯಾರಿಸ್ 2024 ಒಲಿಂಪಿಕ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 26ನೇ ವಯಸ್ಸಿನ ನಾಡಾ ಹಫೀಜ್ ತನ್ನ ಮೂರನೇ ಒಲಿಂಪಿಕ್ಸ್ನಲ್ಲಿ ಮಹಿಳೆಯರ ವೈಯಕ್ತಿಕ ಸೇಬರ್ ಸ್ಪರ್ಧೆಯಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿದ್ದರು. 26 ವರ್ಷದ ಹಫೀಜ್ ಅವರು ಮಹಿಳೆಯರ ವೈಯಕ್ತಿಕ ಫೆನ್ಸಿಂಗ್ ಸ್ಪರ್ಧೆಯಲ್ಲಿ USAಯ ಎಲಿಜಬೆತ್ ಟಾರ್ಟಕೋವ್ಸ್ಕಿ ವಿರುದ್ಧ ತಮ್ಮ ಮೊದಲ ಪಂದ್ಯವನ್ನು 15-13 ರಲ್ಲಿ ಗೆದ್ದರು. ನಂತರ ಅವರು 16ನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೋನ್ ಹಯಾಂಗ್ ಅವರನ್ನು ಎದುರಿಸಿದರು. ಆದರೆ ಅಂತಿಮವಾಗಿ ಸೋಲನ್ನು ಅನುಭವಿಸಿದರು.