ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಜುಲೈ 23ರಂದು ಮಂಡಿಸಿದ 2024-25ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ (Union Budget 2024) ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇಂತಿಷ್ಟು ಹಣವನ್ನು ಯೋಜನೆಗಾಗಿ ಮೀಸಲಿಟ್ಟಿದ್ದಾರೆ. ಈ ಬಜೆಟ್ನಲ್ಲಿ ಮುಖ್ಯವಾಗಿ ಬಡವರು, ಯುವಜನತೆ, ಮಹಿಳೆಯರು ಹಾಗೂ ಅನ್ನದಾತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈ ಯೋಜನೆಗಳ ಪೈಕಿ ಯುವಜನತೆಗಾಗಿ ಇಂಟರ್ನ್ಶಿಪ್ ಯೋಜನೆಯನ್ನು (Internship Scheme) ಜಾರಿಗೆ ತರಲಾಗಿದೆ. ಯುವಕರಿಗೆಂದೇ ಮಾಡಿರುವ ಈ ಹೊಸ ಸ್ಕೀಮ್ನಲ್ಲಿ ಏನಿದೆ? ಇದರ ಉದ್ದೇಶವೇನು? ಈ ಯೋಜನೆಯನ್ನು ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮಂಡಿಸಿದ ಮೊದಲ ಬಜೆಟ್ನಲ್ಲಿ ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 500 ಉನ್ನತ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸಲು ಈ ಯೋಜನೆ ಮಾಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಇಂಟರ್ನ್ಗಳಿಗೆ ಮಾಸಿಕ ಭತ್ಯೆ ಮತ್ತು ಒಂದು ಬಾರಿ ಸಹಾಯದ ಮೊತ್ತವನ್ನು ನೀಡಲಾಗುತ್ತದೆ
PM-JANMAN Project: ಕರ್ನಾಟಕ ಗ್ರಾಮೀಣಾಭಿವೃದ್ಧಿಗೆ 25 ಕೋಟಿ ರೂ. ಘೋಷಿಸಿದ ಕೇಂದ್ರ ಸರ್ಕಾರ.!
ಯುವಕರಿಗೆ ತರಬೇತಿ ನೀಡುವ ವೆಚ್ಚವನ್ನು ಕಂಪನಿಗಳು ಭರಿಸುತ್ತವೆ ಮತ್ತು ಅವರ ಇಂಟರ್ನ್ಶಿಪ್ನ 10 ಪ್ರತಿಶತವು ಅವರ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಭರಿಸುತ್ತದೆ ಎಂದು ಪ್ರಸ್ತಾಪವು ಹೇಳುತ್ತದೆ. ಅರ್ಜಿ ಪ್ರಕ್ರಿಯೆಯು ಆನ್ಲೈನ್ ಪೋರ್ಟಲ್ ಮೂಲಕ ನಡೆಯಲಿದೆ. ಅದರ ವಿವರಗಳನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.
ಈ ಯೋಜನೆಯ ಪ್ರಕಾರ, ಇಂಟರ್ನ್ಶಿಪ್ ಅವಕಾಶಗಳನ್ನು ನೀಡುವ ಕಂಪನಿಗಳು ಅವರಿಗೆ ನಿಜವಾದ ಕೆಲಸದ ಅನುಭವ ಮತ್ತು ಕೌಶಲ್ಯ ಅಭಿವೃದ್ಧಿ ಅವಧಿಗಳನ್ನು ಒದಗಿಸಬೇಕು. ಇಂಟರ್ನ್ಶಿಪ್ನಲ್ಲಿ ಅರ್ಧದಷ್ಟು ಸಮಯ ಕೆಲಸದ ವಾತಾವರಣದಲ್ಲಿದ್ದುಕೊಂಡು ಕಲಿಯಬೇಕು.
ಯಾರೆಲ್ಲಾ ಅರ್ಹರು?
ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿ ನಿರುದ್ಯೋಗಿಯಾಗಿರುವವರು 21ರಿಂದ 24 ವರ್ಷ ವಯಸ್ಸಿನ ಯುವಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (ಐಐಎಸ್ಇಆರ್) ಗಳಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಇಂಟರ್ನ್ಶಿಪ್ಗೆ ಅರ್ಹರಾಗಿರುವುದಿಲ್ಲ.
ಈ ಅಭ್ಯರ್ಥಿಗಳ ಕುಟುಂಬದ ಇತರ ಯಾವುದೇ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿರುವಂತಿಲ್ಲ, ಸರ್ಕಾರಿ ಉದ್ಯೋಗಿಯಾಗಿರುವಂತಿಲ್ಲ. 12 ತಿಂಗಳ ಅವಧಿಯ ಈ ಇಂಟರ್ನ್ಶಿಪ್ ಅಥವಾ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗೆ ತಿಂಗಳಿಗೆ 5,000 ರೂ ಭತ್ಯೆ ಸಿಗುತ್ತದೆ. ಒಂದು ವರ್ಷದಲ್ಲಿ ಒಟ್ಟಾರೆ 66,000 ರೂ. ಭತ್ಯೆ ಒಬ್ಬರಿಗೆ ಸಿಗುತ್ತದೆ. ಇದರಲ್ಲಿ ಸರ್ಕಾರ ಮಾಸಿಕ ಭತ್ಯೆಯಾಗಿ ಒಟ್ಟು 54,000 ರೂ. ಒದಗಿಸುತ್ತದೆ. ಅನಿರೀಕ್ಷಿತ ವೆಚ್ಚಗಳಿಗೆಂದು 6,000 ರೂ ನೀಡುತ್ತದೆ. ಕಂಪನಿಗಳೂ ಕೂಡ ಒಬ್ಬ ಇಂಟರ್ನ್ಗೆ ತರಬೇತಿ ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ 6,000 ರೂ ಕೊಡಬೇಕಾಗುತ್ತದೆ. ಅಲ್ಲಿಗೆ ಇಂಟರ್ನ್ಶಿಪ್ ಮಾಡುವ ಯುವಕನೊಬ್ಬನಿಗೆ ಉಚಿತವಾಗಿ ತರಬೇತಿ ಸಿಗುವುದರ ಜೊತೆಗೆ ಒಟ್ಟಾರೆ 66,000 ರೂ ಪ್ರೋತ್ಸಾಹ ಧನ ಕೂಡ ಲಭಿಸುತ್ತದೆ. ಕಂಪನಿಗಳು ಈ ತರಬೇತಿ ವೆಚ್ಚಗಳಿಗೆ ತಮ್ಮ ಸಿಎಸ್ಆರ್ ಫಂಡ್ಗಳನ್ನು ಬಳಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.