ಬೆಂಗಳೂರು:- ಬೆಂಗಳೂರು ರೈಲ್ವೆ ಸ್ಟೇಷನ್ ನಲ್ಲಿ ನಾಯಿ ಮಾಂಸ ತಂದು ಮಾರಾಟ ಮಾಡುತಿದ್ದರೆ ಅಂತ ಗುಲ್ಲೆಬ್ಬಿಸಿ ಜೈಲು ಸೇರಿದ್ದ ಪುನೀತ್ ಕೆರೆಹಳ್ಳಿಗೆ ಎಸಿಪಿ ಚದನ್ ಕುನಾರ್ ನಗ್ನ ಮಾಡಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಪ್ರಾಮಾಣಿಕ ದಕ್ಷ ಪೊಲೀಸ್ ಅಧಿಕಾರಿಗೆ ವಾರ್ನಿಂಗ್ ಕೊಡೋ ರೀತಿ ಪೋಸ್ಟ್ ಮಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ. ನಾನು ಬರ್ತೇನೆ ನೀವು ಇರಬೇಕು ಎಂದು ಸಿನಿಮಾ ಸ್ಟೈಲ್ ನಲ್ಲಿ ಟ್ವೀಟ್ ಮಾಡಿದ್ರು.ಪೋಲಿಸರು ಕೊಟ್ಟ ಖಡಕ್ರಿಯಾಕ್ಷನ್ ಕಂಪ್ಲೇಂಟ್ ಸ್ಟೋರಿ ಇಲ್ಲಿದೆ.
Krishna Byre Gowda: ಗುಡ್ ನ್ಯೂಸ್: ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂ ಪರಿಹಾರದ ಜೊತೆಗೆ ಹೊಸ ಮನೆ – ಕಂದಾಯ ಸಚಿವ
ಎಸಿಪಿ ಚಂದನ್ ಕುಮಾರ್ ವಿರುದ್ಧ ಆಕ್ರೋಶ ಕೂಗುತ್ತಿರುವ. ಪುನೀತ್ ಕೆರೆಹಳ್ಳಿ ಬೆಂಬಲಿಗರು.ಘೋಷಣೆ ಕೂಗುತ್ತಿರುವವರನ್ನ ಬಸ್ ಗೆ ಹತ್ತಿಸುತ್ತಿರುವ ಪೊಲೀಸರು. ಯೆಸ್ ಇಂದು ಬಸವೇಶ್ವರ ನಗರ ಪೋಲಿಸ್ ಠಾಣೆ ಮುಂದೆ ಕಂಡು ಬಂದ ಹೈ ಡ್ರಾಮಾದ ಸೀನ್ ಗಳು..ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್ ಹಲ್ಲೆ ಮಾಡಿದ್ದಾರೆ ಅನ್ನೊ ಆರೋಪಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಇಂದು ದೂರು ನೀಡಿದ್ರು. ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ26 ನೇ ತಾರೀಖು ಅಕ್ರಮ ಮಾಂಸ ಬರ್ತಿದೆ ಅಂತ ಪುನೀತ್ ಕೆರೆಹಳ್ಳಿ ಹೋಗಿದ್ರು.ಪೊಲೀಸರು ಆರೋಗ್ಯ ಇಲಾಖೆ ಅಧಿಕಾರಿಗಳು ಬಂದು . ಪುನೀತ್ ಕೆರೆಹಳ್ಳಿ ಮಾಂಸ ತಪಾಸಣೆ ಮಾಡಬೇಕು ಅಂದ್ರು.
ಆಗ ಅಬ್ದುಲ್ ರಜಾಕ್ ಆಕ್ರಮಣಕಾರಿಯಾಗಿ ಬಂದಿದ್ದಾರೆ.ಪುನೀತ್ ಕೆರೆಹಳ್ಳಿ ಮೇಲೆ ಆಗ ಕೇಸ್ ದಾಖಲು ಮಾಡಿದ್ರು.ಎಸಿಪಿ ಚಂದನ್ ನಗ್ನ ಮಾಡಿ ಹಲ್ಲೆ ಮಾಡಿದ್ದಾರೆ.
ಪೊಲೀಸ್ರು ಏನು ಸಲಿಂಗ ಕಾಮಿಗಳ ಎಂದು ಆಕ್ರೋಶ ವ್ಯಕ್ತಪಡಿಸಿದರು.. ಸ್ಥಳೀಯ ಡಿಸಿಪಿ ಇಲ್ಲದ ಕಾರಣ ಆಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆಯಾಕೆ ಪುನೀತ್ ಕೆರೆಹಳ್ಳಿ ಬಟ್ಟೆ ಬಿಚ್ಚಿಸ್ಬೇಕಿತ್ತು. ಅಬ್ದುಲ್ ರಜಾಕ್ ಹತ್ತಿರ ಟ್ರೇಡ್ ಲೈಸೆನ್ಸ್ ಇಲ್ಲ..ಕೈ ಬೆರಳಿಗೆ ಶಾಹಿ ಹಚ್ಕೊಂಡು ಯಾವ್ದೋ ರಿಪೋರ್ಟ್ ತಂದಿದಾನೆ. ರಾಜಸ್ತಾನಕ್ಕೆ ಯಾಕೆ ಹೋಗ್ಬೇಕಿತ್ತು, ನಮ್ ಬನ್ನೂರಲ್ಲೆ ಒಳ್ಳೆ ಕುರಿ ಸಿಗುತ್ತದೆ ಒಂದೂವರೆ ಗಂಟೆಯಲ್ಲಿ ಒಳ್ಳೆ ಮಾಂಸ ಕೊಡ್ತೇವೆ ಬನ್ನಿ ಎಂದ್ರು ..
ರಾಜ್ಯದಲ್ಲಿ ಹಿಂದು ಕಾರ್ಯಕರ್ತರನ್ನ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ದೂರು ಕೊಟ್ಟವರನ್ನೇ ಬಂದಿಸಲಾಗಿದೆ. ಲ್ಯಾಬ್ ರಿಪೋರ್ಟ್ ಬರುವ ಮೊದಲೇ ಗೃಹ ಸಚಿವರು ರಿಪೋರ್ಟ್ ಕೊಡ್ತಾರೆ. ಹಲವು ಪ್ರಕರಣ ಗಳಲ್ಲಿ ಇದೇ ರೀತಿ ಹೇಳಿಕೆ ನೀಡಿದ್ದಾರೆ ಇದು ಯಾವ ಸೀಮೆ ನ್ಯಾಯ ಎಂದು ಶಾಸಕ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದರು..
ಈ ವೇಳೆ ಮಾತನಾಡಿ ಪುನೀತ್ ಕರೆಹಳ್ಳಿ ಎಸಿಪಿ ಚಂದನ್ ವಿರುದ್ದ ಹಲ್ಲೆ ಆರೋಪ ಮಾಡಿದ್ರು. ಠಾಣೆಗೆ ನನ್ನ ಎಳೆದೋಯ್ದು ಒಂದು ಕೊಣೆಯಲ್ಲಿ ಹಾಕಿದ್ರು. ಆಗ ಎಸಿಪಿ ಚಂದನ್ ಬಂದು ನನ್ನ ಯಾಕ್ ಮಲಗಿಸಿದ್ದಾರೆ ಅಂತ ಸಿಬ್ಬಂದಿನ ಕೇಳಿ ಲಾಠಿಯಿಂದ ಹಲ್ಲೆ ನಡೆಸಿದ್ರು. ನನ್ನ ಬಟ್ಟೆ ಬಿಚ್ಚಿಸಿ ಸಂಪೂರ್ಣವಾಗಿ ಬೆತ್ತಲುಮಾಡಿ ಈ ವಿಚಾರವನ್ನ ಮಾಧ್ಯಮದ ಮುಂದೆ ಹೇಳಿಕೊಂdrನಿನ್ನ ಮರ್ಯಾದೆ ಹೋಗುತ್ತೆ ಅಂತ ಧಮ್ಕಿ ಹಾಕಿದ್ರು. ಇದೇ ಕಾರಣಕ್ಕೆ ನಾನು ಕಮಿಷನರ್ ಗೆ ದೂರು ನೀಡಿದ್ದೇನೆ ಎಂದ್ರು.
ಠಾಣೆ ಮುಂದೆ ಪ್ರತಿಭಟನೆ ಮಾಡಲು ಬಂದಿದ್ದವರನ್ನ ಬಂಧಿಸಿದ್ರು, ಕೆಲಕಾಲ ಬಸವೇಶ್ವರ ನಗರ ಠಾಣೆ ಮುಂದೆ ಹೈ ಡ್ರಾಮಾ ವೇ ನಡೆಯಿತು. ಇನ್ನೂ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತಾದೆಯೋ ಕಾದು ನೋಡಬೇಕು.