ಬೆಂಗಳೂರು:- ಕೋರಮಂಗಲ ಪಿಜಿಯಲ್ಲಿ ಮರ್ಡರ್ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಗರದ ಪಿಜಿಗಳ ಡೇಟಾ ಕಲೆಕ್ಟ್ ಮಾಡಲು ಪೊಲೀಸ್ ಕಮಿಷನರ್ ಸೂಚನೆ ಕೊಟ್ಟಿದ್ದಾರೆ.
DKS Meets PM Modi: ಮೋದಿ ಭೇಟಿ ಮಾಡಿದ ಡಿ.ಕೆ ಶಿವಕುಮಾರ್: ಪ್ರಧಾನಿ ಮುಂದೆ DCM ಇಟ್ಟ ಬೇಡಿಕೆ ಏನು ಗೊತ್ತಾ..?
ಕಮಿಷನರ್ ದಯಾನಂದ್ ಅವರಿಂದ ಎಲ್ಲಾ ಠಾಣಾ ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದು, ಪ್ರತಿಯೊಂದ ಪಿಜಿ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಕೋರಮಂಗಲ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ಪ್ರಕರಣ ನಂತ್ರ ಪೊಲೀಸರು ಅಲರ್ಟ್ ಆಗಿದ್ದಾರೆ.
ಪಿಜಿಗಳಿಗೆ ಪೊಲೀಸರಿಂದ ಗೈಡ್ ಲೆನ್ಸ್ ಜಾರಿ ಆಗಿದ್ದು, ತನಿಖೆ ವೇಳೆ ನಗರದಲ್ಲಿ ಪಿಜಿಗಳ ಅನಧಿಕೃತವೇ ಹೆಚ್ಚು ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ. ಬಿಬಿಎಂಪಿಯವರ ನಿರ್ಲಕ್ಷ್ಯದಿಂದ ಅನಧಿಕೃತ ಪಿಜಿಗಳೇ ಹೆಚ್ಚು ಓಪನ್ ಆಗಿವೆ.
ಹಾಗಾದ್ರೆ ಪೊಲೀಸರು ಪಿಜಿಗಳಿಗೆ ನೀಡಿರುವ ಗೈಡ್ ಲೈನ್ಸ್ ಹೀಗಿವೆ:-
* ಪಿಜಿಗಳಲ್ಲಿ ಮುಖ್ಯವಾಗಿ ಸಿಸಿಟಿವಿ ಅಳವಡಿಸಬೇಕು
* ಪಿಜಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜನೆ ಮಾಡಬೇಕು
* ಪಿಜಿಯಲ್ಲಿ ವಾಸ ಮಾಡುವ ಪ್ರತಿಯೊಬ್ಬರ ಡೇಟ್ ಕಲೆಕ್ಟ್ ಮಾಡಬೇಕು
* ಪಿಜಿಯಲ್ಲಿ ವಾಸಿಸುವವರ ಕೆವೈಸಿ ಮಾಡಿಸಬೇಕು
* ಹೊಸದಾಗಿ ಜಾರಿಗೆ ತಂದಿರೋ ಸಾಫ್ಟ್ ವೇರ್ ನಲ್ಲಿ ಎಲ್ಲಾ ಮಾಹಿತಿ ಅಪ್ಲೋಡ್ ಮಾಡಬೇಕು
* ಮಾಲೀಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು
* ಆಹಾರದ ಗುಣ ಮಟ್ಟದ ಬಗ್ಗೆ ಮಾಲೀಕರು ಗಮನಹರಿಸಬೇಕು
* ಪಿಜಿಗಳ ಟ್ರೇಡ್ ಲೆಸೆನ್ಸ್ ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕು
* ಅನಧಿಕೃತ ಎಂದು ಕಂಡು ಬಂದ್ರೆ ಬಿಬಿಎಂಪಿಗೆ ಮಾಹಿತಿ ನೀಡಬೇಕು
* ಅಕ್ರಮ ,ಅನೈತಿಕ ಚಟುವಟಿಕೆ ನಡೆಯುತ್ತಿದ್ರೆ, ಮಾಹಿತಿ ಕಲೆ ಹಾಕಬೇಕು
* ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಕೇಸ್ ದಾಖಲಿಸುವುದು
* ತಿಂಗಳಿಗೊಮ್ಮೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಪಿಜಿಗಳ ಪರಿಶೀಲನೆ ಮಾಡಬೇಕು
* ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು