ಗದಗ:-ಬಿಡಾಡಿ ದನ ಗುದ್ದಿ ಪಾದಚಾರಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಗದಗ ಬೆಟಗೇರಿ ನಗರದ ಹೊಸ ಬನಶಂಕರಿ ದೇವಸ್ಥಾನದ ಬಳಿ ಜರುಗಿದೆ. ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ 70 ವರ್ಷದ ಶಂಕ್ರಪ್ಪ ಹೋಳಿ ಹೋರಿ ತಿವಿತದಿಂದ ಮೃತಪಟ್ಟ ವೃದ್ಧ ಎಂದು ತಿಳಿದು ಬಂದಿದೆ. ಸಂಬಂಧಿಕರ ಮನೆಗೆ ಬಂದಿದ್ದ ಶಂಕ್ರಪ್ಪ, ಹೋರಿ ತಿವಿತಕ್ಕೆ ಬಲಿಯಾಗಿದ್ದಾನೆ. ವೃಧ್ಧನಿಗೆ ಬೀದಿ ದನ ಗುದ್ದಿದ ಸಿ ಸಿ ಟಿವಿ ಎಕ್ಸ್ ಕ್ಲೂಸಿವ್ ಫೋಟೇಜ್ AIN ಗೆ ಲಭ್ಯವಾಗಿದೆ.
ವೃದ್ಧ ರಸ್ತೆಯಲ್ಲಿ ನಡೆದುಕೊಂದು ಹೋಗುವಾಗ ಏಕಾಏಕಿ ಮೂರ್ನಾಲ್ಕು ಬಾರಿ ವೃಧ್ಧನಿಗೆ ಗುದ್ದಿರೋದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕೂಡಲೇ ಸ್ಥಳೀಯರಿಂದ 108 ಅಂಬುಲೆನ್ಸ್ ಗೆ ಕರೆ ಮಾಡಿದ್ದರು ಆದ್ರೆ ಒಂದೂ ವರೆ ಘಂಟೆ ಆದರೂ ಸ್ಥಳಕ್ಕೆ ಅಂಬುಲೆನ್ಸ್ ಬರಲಿಲ್ಲ. ಇನ್ನೂ ಬಿಡಾಡಿ ದನ ನಿಯಂತ್ರಣ ಮಾಡದ ನಗರಸಭೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳದಲ್ಲೇ ಕೂತು ಸ್ಥಳೀಯರು ಕೆಲ ಕಾಲ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ನಗರಸಭೆ ಅಧಿಕಾರಿಗಳ ಜೊತೆ ಸ್ಥಳೀಯರ ಕೆಲಕಾಲ ವಾಗ್ವಾದ ನಡೆಸಿದರು.