ಕೆಲವರಿಗೆ ಚಹಾ ಅಥವಾ ಕಾಫಿ ಎನ್ನುವುದು ಒಂದು ಚಟವಾಗಿ ಹೋಗಿದೆ. ಅದನ್ನು ಕುಡಿಯದೆ ಇದ್ದರೆ ಆಗ ಅವರಿಗೆ ದಿನಪೂರ್ತಿ ಏನೋ ಕಳಕೊಂಡಂತೆ ಆಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ಬಳಿಕ ಚಹಾ ಕುಡಿಯಲೇಬೇಕು. ಇನ್ನು ಕೆಲವು ಮಂದಿ ದಿನದಲ್ಲಿ ಎಷ್ಟು ಕಪ್ ಚಹಾ ಕುಡಿಯುತ್ತಾರೆ ಎಂದು ಹೇಳಲು ಆಗದು. ಚಹಾ ದಿಂದ ಹಲವಾರು ಆರೋಗ್ಯ ಲಾಭಗಳು ಇವೆ ಎಂದು ನಾವು ಕೇಳಿದ್ದೇವೆ.
ಅದೇ ರೀತಿಯಾಗಿ ಚಹಾ ಕುಡಿದರೆ ಅದರಿಂದ ಕೆಲವು ಅಡ್ಡಪರಿಣಾಮಗಳು ಕೂಡ ಇದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿಯುವ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಅದು ನಮ್ಮ ಆರೋಗ್ಯಕ್ಕೆ ಮಾರಕ ಎಂದು ಪರಿಗಣಿಸಲಾಗಿದೆ. ಅದು ಹೇಗೆ ಎಂದು ತಿಳಿಯಲು ನೀವು ತಯಾರಾಗಿ.
ಅನ್ನನಾಳದ ಕ್ಯಾನ್ಸರ್ ಅಪಾಯ ಹೆಚ್ಚಿಸುವುದು
ತುಂಬಾ ಬಿಸಿಯಾಗಿರುವಂತಹ ಚಹಾ ಕುಡಿದರೆ ಅದರಿಂದ ಅನ್ನನಾಳದ ಕ್ಯಾನ್ಸರ್ ನ ಅಪಾಯವು ಹೆಚ್ಚಾಗುತ್ತದೆ ಎಂದು 2008ರಲ್ಲಿ ನಡೆಸಿರುವಂತಹ ಸಂಶೋಧನೆಯೊಂದು ಹೇಳಿಕೆಗೆ ಅಧ್ಯಯನ ಗಳಿಂದ ತಿಳಿದುಬಂದ ಅಂಶವೆಂದರೆ ತುಂಬಾ ಬಿಸಿ(65 ಡಿಗ್ರಿ ಸೆಲ್ಸಿಯಸ್/149 -156 ಡಿಗ್ರಿ ಫರ್ಹಾ ನ್ಹೀಟ್ ತನಕ ಬಿಸಿ ಚಹಾಕುಡಿಯುವವರು ಅನ್ನನಾಳದ ಕ್ಯಾನ್ಸರ್ ಗೆ ತುತ್ತಾಗುವಂತಹ ಸಾಧ್ಯತೆಯು ಹೆಚ್ಚಾಗಿ ಇರುತ್ತದೆ.
ಆಸ್ಟಿಯೋಫ್ಲೋರೋಸಿಸ್ ಉಂಟು ಮಾಡಹುದು
ಅತಿಯಾಗಿ ಚಹಾ ಕುಡಿದ ಪರಿಣಾಮವಾಗಿ ಕೆಲವರಲ್ಲಿ ಮೂಳೆಗಳಿಗೆ ಹಾನಿಯಾಗಿರುವ ಘಟನೆಗಳು ನಡೆದಿದೆ. ಅತಿಯಾಗಿ ಚಹಾ ಕುಡಿದ ಪರಿಣಾಮವಾಗಿ ಇಂಗ್ಲೆಂಡಿನ ಮಹಿಳೆಯೊಬ್ಬರ ಮೂಳೆಗಳು ಬಿರುಕು ಬಿಟ್ಟಿದೆ ಮತ್ತು ಹಲ್ಲುಗಳನ್ನು ಕೂಡ ಆಕೆ ಕಳೆದುಕೊಂಡಿರುವುದು ಪತ್ತೆಯಾಗಿದೆ. ಪ್ರತಿ ನಿತ್ಯವೂ ಆಕೆ ಸುಮಾರು 100-150 ಬ್ಯಾಗ್ ಚಹಾ ಕುಡಿಯುತ್ತಿದ್ದಳು.
ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಿಸುವುದು
ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ಚಹಾ ಸೇವನೆ ಮಾಡಿದರೆ ಅದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ದಿನಕ್ಕೆ ಏಳು ಅಥವಾ ಅದಕ್ಕಿಂತ ಹೆಚ್ಚು ಟೀ ಸೇವಿಸುವವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವು ಶೇ.50ರದಷ್ಟು ಹೆಚ್ಚಾಗಿರುವುದು. ದಿನಕ್ಕೆ0-3 ಕಪ್ ಚಹಾಕುಡಿಯುವವರಲ್ಲಿ ಇದರ ಅಪಾಯ ತುಂಬಾ ಕಡಿಮೆ ಇದೆ. ದಿನಕ್ಕೆ4-6 ಕಪ್ ಚಹಾಕುಡಿಯುವವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚು ಎಂದು ಅಧ್ಯಯನಗಳು ಹೇಳಿವೆ.
ಚಹಾ ಕೆಫಿನ್ನ ನಕಾರಾತ್ಮಕ ಅಡ್ಡಪರಿಣಾಮ ಬೀರುವುದು
ಚಹಾದಲ್ಲಿ ನೈಸರ್ಗಿಕದತ್ತವಾದ ಕೆಫಿನ್ ಇದೆ ಮತ್ತು ಕೆಫಿನ್ ಶಕ್ತಿ ಹೆಚ್ಚಿಸುವುದು. ಅದೇ ರೀತಿಯಾಗಿ
ಚುರುಕುತನ ಕೂಡ. ನೀವು ಅತಿಯಾಗಿ ಚಹಾಕುಡಿದರೆ ಅಥವಾ ಕೆಫಿನ್ ಸೂಕ್ಷ್ಮತೆಯಿದ್ದರೆ ಆಗ ಕೆಲವೊಂದು ಅಡ್ಡಪರಿಣಾಮಗಳು ಕಂಡುಬರಬಹುದು. ಕೆಫಿನ್ ನ ಕೆಲವೊಂದು ನಕಾರಾತ್ಮಕ ಪರಿಣಾಮಗಳೆಂದರೆ ಅದು ನಿದ್ರೆ ಬರದಿರುವುದು, ಹೃದಯ ಬಡಿತ ಹೆಚ್ಚಾಗುವುದು, ಖಿನ್ನತೆ, ಆತಂಕ ಇತ್ಯಾದಿಗಳು.
ದೇಹವನ್ನು ನಿರ್ಜಲೀಕರಿಸುವುದು
ಚಹಾ ಮೂತ್ರವರ್ಧಕವಾಗಿದೆ. ಇದರಿಂದಾಗಿ ದೇಹದ ನೀರಿನಾಂಶವನ್ನು ಇದು ಹೊರಗೆ ಹಾಕುವುದು. ನೀವು ಬೆಳಗ್ಗೆ ಎದ್ದ ವೇಳೆ ಎಂಟು ಗಂಟೆಗಳ ಮಲಗಿರುವ ಕಾರಣದಿಂದಾಗಿ ದೇಹವು ಅದಾಗಲೇ ನಿರ್ಜಲೀಕರಣಕ್ಕೆ ಗುರಿಯಾಗಿರುವುದು. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಆಗ ನಿರ್ಜಲೀಕರಣವು ಹೆಚ್ಚಾಗುವುದು ಮತ್ತು ಸ್ನಾಯುಗಳ ಸೆಳೆತಕ್ಕೆ ಕಾರಣವಾಗಬಹುದು.
ಹೊಟ್ಟೆ ಉಬ್ಬರ
ಹಾಲು ಹಾಕಿದ ಚಹಾಕುಡಿದ ಕೂಡಲೇ ಕೆಲವರಿಗೆ ಹೊಟ್ಟೆ ಉಬ್ಬರ ಕಾಣಿಸುವುದು. ಯಾಕೆಂದರೆ ಹಾಲಿನಲ್ಲಿ ಇರುವ ಉನ್ನತ ಮಟ್ಟದ ಲ್ಯಾಕ್ಟೋಸ್ ನಿಂದಾಗಿ ಖಾಲಿ ಹೊಟ್ಟೆಯ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಮಲಬದ್ಧತೆ ಮತ್ತು ಗ್ಯಾಸ್ ಕಾಣಿಸಿಕೊಳ್ಳಬಹುದು.
ಮಲಬದ್ಧತೆ
ಬೆಳಗ್ಗೆ ಹೆಚ್ಚಿನ ಜನರು ಖಾಲಿ ಹೊಟ್ಟೆಯಲ್ಲಿ ಚಹಾಕುಡಿಯುತ್ತಾರೆ. ಇದನ್ನು ನಾವು ಕೆಟ್ಟ ಚಹಾ ಎಂದು ಕೂಡ ಕರೆಯ ಬಹುದು. ಖಾಲಿ ಹೊಟ್ಟೆಯಲ್ಲಿ ಚಹಾಕುಡಿದರೆ ಅಸಿಡಿಟಿ ಹೆಚ್ಚಾಗುವುದು. ಇಷ್ಟು ಮಾತ್ರವಲ್ಲದೆ ಜೀರ್ಣಕ್ರಿಯೆಗೆ ಬೇಕಾಗುವಂತಹ ರಸದ ಸ್ರವಿಸುವಿಕೆ ಮೇಲೆ ಇದು ಪರಿಣಾಮ ಉಂಟು ಮಾಡುವುದು. ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಆಗುವುದು. ಈ ಕಾರಣದಿಂದಾಗಿ ಜೀರ್ಣಕ್ರಿಯೆ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
ವಿಷಕಾರಿ ಪರಿಣಾಮ
ನಾವು ಹೊರಗಡೆ ಹೋಗಿ ಕೆಲವೊಂದು ಸಲ ಚಹಾಕುಡಿಯುತ್ತೇವೆ. ಆದರೆ ನಾವು ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಹಿಂದಿನ ಚಹಾಪುಡಿಯು ಆ ಪಾತ್ರೆಯಲ್ಲಿ ಹಾಗೆ ಇರುವುದು. ಹಳೆ ಚಹಾ ಪುಡಿಗೆ ಮತ್ತೆ ಹೊಸ ಚಹಾಪುಡಿ ಹಾಕುವರು. ಇದು ತುಂಬಾ ವಿಷಕಾರಿ ಮತ್ತು ಹಾನಿಕಾರಕ. ನಿಮಗೆ ಚಹಾಕುಡಿಯಲು ಇದ್ದರೆ ಆಗ ನೀವು ಇಂತಹ ಕಡೆಗಳಲ್ಲಿ ಚಹಾಕುಡಿಯಲು ಹೋಗ ಬೇಡಿ. ಮನೆಯಲ್ಲೇ ಚಹಾಕುಡಿಯಿರಿ ಮತ್ತು ದಿನದಲ್ಲಿ ಒಂದು ಕಪ್ ಗಿಂತ ಹೆಚ್ಚು ಚಹಾಕುಡಿಯಬೇಡಿ.
ಕೊಲೆಸ್ಟ್ರಾಲ್
ಹೆಚ್ಚಾಗಿ ನಾವೆಲ್ಲರೂ ಹಾಲು ಹಾಕಿದ ಚಹಾಕುಡಿಯುವುದು ಮತ್ತು ಇದಕ್ಕೆ ಸರಿಯಾದ ಪ್ರಮಾಣದಲ್ಲಿ ಸಕ್ಕರೆ ಕೂಡ ಹಾಕಿರುತ್ತೇವೆ. ಒಂದು ಕಪ್ ಚಾದಲ್ಲಿ ಸುಮಾರು 40-50 ಕ್ಯಾಲರಿ ಇರುತ್ತದೆ. ಅದೇ ನಾವು ದಿನಕ್ಕೆ 4-5 ಕಪ್ ಚಹಾಕುಡಿದರೆ ಆಗ ಸುಮಾರು 250-300 ಕ್ಯಾಲರಿ ಸೇವಿಸಿದಂತೆ ಆಗುತ್ತದೆ. ಇದರೊಂದಿಗೆ ಬೊಜ್ಜು ಹೆಚ್ಚಾಗುವುದು ಮತ್ತು ಕೊಬ್ಬು ಕೂಡ ಬೆಳೆಯುವುದು. ಇದರಿಂದ ಚಹಾಕುಡಿಯುವುದನ್ನು ನಿಲ್ಲಿಸಿ ಅಥವಾ ದಿನದಲ್ಲಿ ಒಂದು ಕಪ್ ಮಾತ್ರ ಸೇವಿಸಿ.
ಮೂಳೆ ಸಾಂದ್ರತೆ ಕುಗ್ಗುವುದು
ಅತಿಯಾಗಿ ಚಹಾಕುಡಿಯುವ ಪರಿಣಾಮದಿಂದಾಗಿ ಆಸ್ಟಿಯೋಫ್ಲೋರೋಸಿಸ್ ಎನ್ನುವ ಕಾಯಿಲೆಯು ಬರುವುದು ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿವೆ. ಅತಿಯಾಗಿ ಚಹಾಕುಡಿದರೆ ಆಗ ದೇಹದಲ್ಲಿ ಫ್ಲೋರೈಡ್ ಮಟ್ಟವು ಹೆಚ್ಚಾಗುವುದು ಮತ್ತು ಫ್ಲೋರೈಡ್ ಹೆಚ್ಚಾದರೆ ಆಗ ಮೂಳೆಗಳಲ್ಲಿ ದುರ್ಬಲತೆ ಕಾಣಿಸುವುದು.