ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಅವರ ಸಂಗೀತ ಕಾರ್ಯಕ್ರಮದ ವೇಳೆ ಬಾಲಕನೋರ್ವ ಚಾಕುವಿನಿಂದ ದಾಳಿ ನಡೆಸಿದ್ದು ಪರಿಣಾಮ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಇಂಗ್ಲೆಂಡ್ನ ವಾಯವ್ಯ ಪ್ರಾಂತ್ಯದ ಸೌತ್ಪೋರ್ಟ್ ನ ಹಾರ್ಟ್ ಸ್ಟ್ರೀಟ್ನಲ್ಲಿ ಸಂಭವಿಸಿದೆ.
17 ವರ್ಷದ ಬಾಲಕನೊಬ್ಬ ಚಾಕು ಹಿಡಿದು ನಡೆಸಿದ ದಾಳಿಗೆ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಸುಮಾರು ಒಂಬತ್ತು ಜನ ಗಂಭೀರವಾಗಿ ಗಾಯಗೊಂಡಿದ್ದು ಅವರಲ್ಲಿ ಆರು ಬಾಲಕರು ಹಾಗೂ ಮೂವರು ವಯಸ್ಕರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೇಲರ್ ಸ್ವಿಫ್ಟ್ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಸೇರಿದ್ದರು. ಚಾಕು ಹಿಡಿದು ಏಕಾಏಕಿ ದಾಳಿ ಮಾಡಿದ ಬಾಲಕನ ಉದ್ದೇಶ ಏನಾಗಿತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಗಾಯಕಿ ಟೇಲರ್ ಸ್ವಿಫ್ಟ್, ಇಂತಹ ಘಟನೆಗಳು ಆಗಬಾರದು ಎಂದಿದ್ದು, ಮೃತರ ಕುಟುಂಬಗಳಿಗೆ ₹25 ಲಕ್ಷ ನೆರವು ನೀಡಿದ್ದಾರೆ.