ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವಂತೆ ಕೇಳಿ ಕೊಂಡು ಬಂದ ಯುವತಿಯನ್ನು ನಿರ್ದೇಶಕನೊಬ್ಬ ಬಳಸಿಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವತಿ ನಿರ್ದೇಶಕನ ಜೊತೆ ಚೆನ್ನಾಗಿ ಮಾತನಾಡಿ ಟ್ರಾಪ್ ಮಾಡಿದ್ದಾಳೆ. ಬಳಿಕ ಆತ ತನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಸಿನಿಮಾ ಜಗತ್ತಿನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.
ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು ಸದ್ಯ ನಿರ್ದೇಶಕ ಯುವತಿ ಹಾಗೂ ಆಕೆಯ ಗ್ಯಾಂಗ್ ವಿರುದ್ದ ಹನಿಟ್ರಾಪ್ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಖ್ಯಾತ ನಿರ್ದೇಶಕ ಖಲಿಲ್ ಉರ್ ರೆಹಮಾನ್ ಖಾಮರ್ ಯುವತಿ ಜೊತೆಗಿದ್ದ ಅಶ್ಲೀಲ ವಿಡಿಯೋ ವೈರಲ್ ಆಗಿದೆ. ಒಟ್ಟು ಎರಡು ವಿಡಿಯೋಗಳಿದ್ದು, ಮೊದಲ ವಿಡಿಯೋದಲ್ಲಿ ನಿರ್ದೇಶಕ ಖಲೀಲ್ ಹಾಗೂ ಯುವತಿ ಕೋಣೆಯೊಳಗೆ ಕುಳಿತಿರುವ ದೃಶ್ಯವಿದೆ. ಖಲೀಲ್ ಸಿಗರೇಟು ಸೇದುತ್ತಾ ಯುವತಿ ಪಕ್ಕದಲ್ಲಿ ಕುಳಿತು ಸಂಭಾಷಣೆ ನಡೆಸುತ್ತಿರುವ ದೃಶ್ಯಗಳಿವೆ. ಈ ವಿಡಿಯೋದಲ್ಲಿ ಅವರ ಸಂಭಾಷಣೆಗಳ ಸ್ಪಷ್ಟತೆ ಇಲ್ಲ. ಆದರೆ ಇಬ್ಬರು ಒಂದೇ ಕೋಣೆಯೊಳಗೆ ಜೊತೆಯಾಗಿ ಕುಳಿತಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಖಲೀಲ್ ಹಾಗೂ ಯುವತಿ ಇಬ್ಬರು ಬೆಡ್ ಮೇಲಿರುವ ದೃಶ್ಯಗಳಿವೆ. ಖಲೀಲ್ ಬೆತ್ತಲಾಗಿದ್ದಾರೆ. ಪಕ್ಕದಲ್ಲೇ ಯುವತಿ ಇದ್ದು, ಈ ವಿಡಿಯೋಗಳು ಭಾರಿ ಕೋಲಾಹಲ ಸೃಷ್ಟಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, ನಿರ್ದೇಶ ಖಲೀಲ್ ನೇರವಾಗಿ ಯುವತಿ ಮನೆಗೆ ತೆರಳಿದ್ದಾರೆ. ಈ ವಿಡಿಯೋ ಯುವತಿ ಹಾಗೂ ಆಕೆಯ ಗ್ಯಾಂಗ್ ನಿವಾಸದ ಬಳಿ ನಡೆದಿದೆ. ಆದರೆ ನಿರ್ದೇಶಕ ಹನಿ ಟ್ರಾಪ್ ಆರೋಪ ಮಾಡಿರುವ ಕಾರಣ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆಗೆ ಮುಂದಾಗಿದ್ದಾರೆ. ಘಟನೆ ಸಂಬಂಧ 12 ಮಂದಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಚಾನ್ಸ್ ಕೊಡಿಸಲು ಒಪ್ಪಿಕೊಂಡಿದ್ದ ನಿರ್ದೇಶಕ ಮಂಚದಲ್ಲಿ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದ. ಈ ಬೇಡಿಕೆಗೆ ಒಪ್ಪಿಕೊಂಡ ಯುವತಿ, ನಿರ್ದೇಶಕನಿಗೆ ಪಾಠ ಕಲಿಸಲು ಮುಂದಾಗಿದ್ದಾಳೆ. ಗಳೆಯರ ಜೊತೆ ಸೇರಿ ನಿರ್ದೇಶಕನ ಕರೆಸಿದ್ದಾರೆ. ಇದಕ್ಕೂ ಮೊದಲು ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ಯುವತಿ ಭೇಟಿಯಾಗಲು ಬಂದ ನಿರ್ದೇಶಕ ನೇರವಾಗಿ ಕೋಣೆಗೆ ತೆರಳಿದ್ದಾನೆ. ಬಳಿಕ ನಿರ್ದೇಶಕ ಬಳಿ ದುಬಾರಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.