ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಜೈಲು ಸೇರಿದೆ. ಸ್ಟಾರ್ ನಟನಾಗಿರುವ ದರ್ಶನ್ ಹೊರಗೆ ಐಷಾರಾಮಿ ಜೀವನ ಕಂಡವರು, ಇದೀಗ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದಾರೆ. ಜೈಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟಪಟ್ಟಿರುವ ದರ್ಶನ್ ಆರಂಭದಲ್ಲಿ ಜೈಲೂಟ ಸರಿಹೋಗದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಅನುಭವಿಸಿದ್ದರು. ಇದೀಗ ಮನೆ ಊಟ, ಬಟ್ಟೆ, ಹಾಸಿಗೆಗಾಗಿ ಮತ್ತೆ ಹೈಕೋರ್ಟ್ಗೆ ದರ್ಶನ್ ಇಂದು ಅರ್ಜಿ ಸಲ್ಲಿಸಿದ್ದಾರೆ.
ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದರ ಜೊತೆಗೆ ದರ್ಶನ್ ಅವರು ಕಳೆದ ಜೂನ್ 06ರಂದು ಮನೆ ಊಟಕ್ಕಾಗಿ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿದ್ದಾರೆ. ಹೌದು ನನಗೆ ಮೂಳೆ ಶಸ್ತ್ರಚಿಕಿತ್ಸೆಯಾಗಿದೆ, ಪ್ರೋಟಿನ್ ಅವಶ್ಯಕತೆ ಇದೆ. ಕಾರಾಗೃಹಕ್ಕೆ ದಾಖಲಾದ ದಿನದಿಂದ ಜೈಲೂಟ ಸೇವೆನೆ ಮಾಡುತ್ತಿದ್ದೇನೆ. ನನ್ನ ಆರೋಗ್ಯ, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಮನೆ ಊಟ ನೀಡುವಂತೆ ಪತ್ರದ ಮೂಲಕ ದರ್ಶನ್ ಮನವಿ ಮಾಡಿದ್ದಾರೆ.
Suzuki: 4 ಲಕ್ಷ ಬೈಕ್, ಸ್ಕೂಟರ್ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ.! ಯಾಕೆ ಗೊತ್ತಾ..?
ಇತ್ತೀಚೆಗಷ್ಟೇ ಮನೆಯೂಟ ಕೋರಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಸಲ್ಲಿಸಿದ್ದ ಮೆಮೋ ಅರ್ಜಿಯನ್ನು ವಿಚಾರಣೆಗೆ ಬರುತ್ತಿದ್ದಂತೆ ದರ್ಶನ್ ಪರ ವಕೀಲರು ಹಿಂದಕ್ಕೆ ಪಡೆದಿದ್ದರು. ತಾಂತ್ರಿಕ ಕಾರಣ ನೀಡಿ ದರ್ಶನ್ ಪರ ವಕೀಲರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದರು. ಅರ್ಜಿ ವಾಪಸ್ ಪಡೆದ ಕಾರಣ ದರ್ಶನ್ ಜೈಲೂಟವನ್ನೇ ಸೇವಿಸಬೇಕಿದೆ.