ಅತೀ ವೇಗವಾಗಿ ತೂಕ ಇಳಿಸುವ ಆಸೆಯಿಂದ ಹಲವರು ಏನಾದರೊಂದು ತಪ್ಪುಗಳನ್ನು, ಅಧ್ವಾನಗಳನ್ನು ಮಾಡಿ, ಆರೋಗ್ಯವನ್ನು ತೊಂದರೆಯಲ್ಲಿ ಸಿಲುಕಿಸುತ್ತಾರೆ. ಮಾರುಕಟ್ಟೆಯ ಜಾಹಿರಾತು ತಂತ್ರಗಳಿಗೆ ಮರುಳಾಗಿ ಏನಾದರೊಂದು ಹೊಸ ಬಗೆಯ ಆಹಾರ ಪದ್ಧತಿ, ಹೊಸ ಹಾಗೂ ಸಂಪೂರ್ಣ ಭಿನ್ನವಾದ ಒಗ್ಗಲಾರದ ಆಹಾರ ಹಾಗೂ, ಊಟ ಬಿಟ್ಟು ತಮ್ಮನ್ನು ತಾವೇ ಸಂಕಷ್ಟಕ್ಕೆ ತಳ್ಳುತ್ತಾರೆ. ಆದರೆ, ಡಯಟ್ ಎಂಬುದನ್ನು ಹುರುಳಿಲ್ಲದಂತೆ, ನಮ್ಮ ದೇಹಕ್ಕೆ ಸರಿಹೊಂದದಂತೆ ಮಾಡಿದರೆ, ಒಳ್ಳೆಯದಾಗುವುದಕ್ಕಿಂತ ತೊಂದರೆಯಲ್ಲಿ ಸಿಲುಕುವುದೇ ಹೆಚ್ಚು. ಹಾಗಾದರೆ, ವೇಗವಾಗಿ ತೂಕ ಇಳಿಸುವುದು ಹೇಗೆ ಎಂಬ ಪ್ರಶ್ನೆ ಬಹುತೇಕರಲ್ಲಿ ಇರುವುದು ಸಾಮಾನ್ಯ. ಬನ್ನಿ, ವೇಗವಾಗಿ ತೂಕ ಹೇಗೆ ಇಳಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
ಇತ್ತೀಚಿನ ದಿನಗಳಲ್ಲಿ ತೂಕ ಇಳಿಸೋದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಕೆಲವರು ತೆಳ್ಳಗಾಗಲು ಜಿಮ್ ಮೊರೆ ಹೋದರೆ ಒಂದಿಷ್ಟು ಮಂದಿ ಊಟವನ್ನೇ ಕಡಿಮೆ ಮಾಡುತ್ತಾರೆ. ಆದರೆ ಅನೇಕ ಪ್ರಯತ್ನಗಳ ನಡುವೆಯೂ ತೂಕ ಮಾತ್ರ ಕಡಿಮೆಯಾಗಲ್ಲ. ಅಚ್ಚರಿ ಎಂಬಂತೆ ಕೆಲವರು ಬೇಗವೇ ತೂಕ ಇಳಿಸಿಕೊಳ್ಳುವದನ್ನು ನೋಡಿರುತ್ತೇವೆ. ಅದು ಹೇಗೆ ಸಾಧ್ಯ ಎಂದು ಎಲ್ಲರಲ್ಲಿಯೂ ಕಾಡುತ್ತಿರುತ್ತದೆ.
ಬಹುತೇಕ ಎಲ್ಲಾ ತಜ್ಞರು ವಾಕಿಂಗ್ ಮಾಡುವುದರಿಂದ ತೂಕ ಕಡಿಮೆಯಾಗುತ್ತೆ ಮತ್ತು ಆರೋಗ್ಯ ಸುಧಾರಿಸುತ್ತದೆ ಎಂದು ಹೇಳುತ್ತಾರೆ. ಆದರೆ ದಿನಕ್ಕೆ ಎಷ್ಟು ದೂರ ನಡೆಯಬೇಕು? ಯಾವಾಗ ನಡೆಯಬೇಕು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿರುತ್ತದೆ. ಇಂದು ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
ಒಬ್ಬ ವ್ಯಕ್ತಿಯು 10 ಕೆಜಿ ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ಪ್ರತಿದಿನ ಎಷ್ಟು ದೂರ ವಾಕಿಂಗ್ ಮಾಡಬೇಕು ? ನಿಮ್ಮ ಮನಸ್ಸಿನಲ್ಲಿ ಈ ಪ್ರಶ್ನೆ ಇದ್ದರೆ, ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಉತ್ತರ ನಿಮಗೆ ಸಿಗಲಿದೆ.. 100 ಕ್ಯಾಲೋರಿ ಬರ್ನ್ ಮಾಡಲು 2 ಕಿಲೋಮೀಟರ್ ನಡೆಯಬೇಕು. ವಾಸ್ತವವಾಗಿ ತೂಕವನ್ನು ಕಳೆದುಕೊಳ್ಳಲು ದಿನಕ್ಕೆ ಇಷ್ಟು ಕಿಲೋಮೀಟರ್ ನಡೆಯಬೇಕು ಎಂಬ ಯಾವುದೇ ನಿಯಮ ಇಲ್ಲ. ತೂಕ ನಷ್ಟಕ್ಕೆ ಪ್ರತಿದಿನ ಎಷ್ಟು ಗಂಟೆ ನಡೆಯಬೇಕು ಎಂಬುದರು ವಿಭಿನ್ನ ಅಭಿಪ್ರಾಯಗಳನ್ನು ನೀವು ಕೇಳಿರಬಹುದು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, 1-ಮೈಲಿ ಅಥವಾ 1.6 ಕಿಲೋಮೀಟರ್ ನಡೆಯುವುದರಿಂದ 55 ರಿಂದ 140 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು
ತೂಕ ಇಳಿಸಲು ಬ್ರಿಟಿಷ್ ರಾಷ್ಟ್ರೀಯ ಆರೋಗ್ಯ ಸೇವೆಯು ದಿನಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ನಡಿಗೆಯನ್ನು ಶಿಫಾರಸು ಮಾಡುತ್ತದೆ. ನೀವು ಚುರುಕಾಗಿ ಅಂದ್ರೆ ವೇಗವಾಗಿ ವ್ಯಾಯಾಮ ಮಾಡುತ್ತಾ ನಡೆದರೆ 75 ನಿಮಿಷಗಳ ವಾಕ್ ಮಾಡಬಹುದು. ಇದು ನಿಮ್ಮ ನಡಿಗೆಯ ವೇಗವನ್ನು ನಿರ್ಧರಿಸುತ್ತದೆ. ಇತ್ತೀಚೆಗೆ ದಿನಕ್ಕೆ 10,000 ಹೆಜ್ಜೆ ನಡೆದ್ರೂ ಸಾಕು ಎಂದು ಹೇಳುತ್ತಾರೆ. ಒಂದು ಕಿಲೋ ಮೀಟರ್ ನಡೆದ್ರೆ ಎಷ್ಟು ತೂಕ ಇಳಿಕೆಯಾಗುತ್ತೆ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ.
ವಾಕಿಂಗ್ ಮೂಲಕವೇ ಕೆಲವರು ಒಂದು ತಿಂಗಳಲ್ಲಿ 10 ಕೆಜಿ ತೂಕವನ್ನು ಕಳೆದುಕೊಳ್ಳಬಹುದು, ಆದರೆ ಕೆಲವರು 10 ಕೆಜಿ ತೂಕವನ್ನು ಕಳೆದುಕೊಳ್ಳಲು 2 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಅದು ಅವರ ನಡಿಗೆಯನ್ನು ಅವಲಂಬಿಸಿರುತ್ತದೆ. ಎಷ್ಟು ತೂಕವನ್ನು ಕಳೆದುಕೊಳ್ಳುತ್ತದೆ ಎಂಬುದಕ್ಕೆ ಅನೇಕ ಅಂಶಗಳು ಕಾರಣವಾಗಿವೆ.
ಕೇವಲ ವಾಕಿಂಗ್ನಿಂದ ತೂಕ ಇಳಿಕೆಯಾಗಲ್ಲ ಎಂಬ ಮಾತೂ ಸಹ ಇದೆ. ವಾಕಿಂಗ್ ಜೊತೆಯಲ್ಲಿ ಆಹಾರದ ಮೇಲೆ ನಿಯಂತ್ರಣ ಇರಬೇಕು. ಅನಾರೋಗ್ಯಕರ ಆಹಾರದಿಂದ ದೂರ ಇರಬೇಕು. ಇಷ್ಟು ಮಾತ್ರವಲ್ಲದೇ ತೂಕ ನಷ್ಟಕ್ಕೆ ಸಾಕಷ್ಟು ನಿದ್ರೆ ಮತ್ತು ಒತ್ತಡವಿಲ್ಲದ ಜೀವನವೂ ಮುಖ್ಯವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ
ವ್ಯಾಯಾಮ, ಉಪವಾಸ, ಆಹಾರ ಪಥ್ಯ ಇತ್ಯಾದಿಗಳನ್ನು ಮಾಡಿದರೂ ಬೊಜ್ಜು ಕಡಿಮೆ ಆಗದೆ ಇದ್ದರೆ ಆಗ ಕೆಲವೊಂದು ಪಾನೀಯಗಳನ್ನು ಸೇವನೆ ಮಾಡಿದರೆ ಅದು ತುಂಬಾ ಒಳ್ಳೆಯದು.
ಸಾಮಾನ್ಯವಾಗಿ ನಾವು ಅಡುಗೆಗೆ ಬಳಕೆ ಮಾಡುವಂತಹ ಸಾಂಬಾರ ಪದಾರ್ಥಗಳಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ ಮತ್ತು ಇದು ತೂಕ ಇಳಿಸಲು ಕೂಡ ಸಹಕಾರಿ. ಇಂತಹ ಒಂದು ಪ್ರಮುಖ ಸಾಂಬಾರ ಪದಾರ್ಥವೆಂದರೆ ಅದು ಜೀರಿಗೆ.
ಜೀರಿಗೆಯನ್ನು ಹಲವಾರು ವಿಧದಿಂದ ಭಾರತೀಯರು ತಮ್ಮ ಅಡುಗೆಯಲ್ಲಿ ಬಳಕೆ ಮಾಡುವರು. ಇದು ಜೀರ್ಣಕ್ರಿಯೆ ಸುಧಾರಿಸುವುದು, ಮಲಬದ್ಧತೆ ಕಡಿಮೆ ಮಾಡುವುದು, ಇನ್ಸುಲಿನ್ ಪ್ರತಿರೋಧಕ ಸಮಸ್ಯೆ ತಡೆಯುವುದು. ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಇದು ತುಂಬಾ ಸಹಕಾರಿ.
ಕೆಲವು ಗಂಟೆಗಳ ಕಾಲ ಜೀರಿಗೆಯನ್ನು ನೆನೆಸಿದ ಬಳಿಕ ಅದನ್ನು ಸೇವನೆ ಮಾಡಬೇಕು. ನೀರಿನಲ್ಲಿ ಜೀರಿಗೆ ನೆನೆಸಿದ ವೇಳೆ ಅದು ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಬಿಡುಗಡೆ ಮಾಡುವುದು. ಹೀಗಾಗಿ ನೀರು ಹಳದಿ ಬಣ್ಣಕ್ಕೆ ತಿರುವುದು. ತೂಕ ಇಳಿಸಬೇಕಿದ್ದರೆ ಆಗ ನೀವು ಇದನ್ನು ಬಳಸಿದರೆ ಉತ್ತಮ. ಆಯುರ್ವೇದದಲ್ಲಿ ಕೂಡ ಜೀರಿಗೆಯನ್ನು ಹಲವಾರು ಔಷಧಿಗಳಿಗೆ ಬಳಕೆ ಮಾಡಿಕೊಂಡು ಬರಲಾಗಿದೆ. ಜೀರಿಗೆ ನೀರು ಹಲವಾರು ವಿಧದಿಂದ ದೇಹಕ್ಕೆ ಒಳ್ಳೆಯದು. ಇದು ಆರೋಗ್ಯಕಾರಿ ಕೂಡ.
ಪುರುಷರ ಮತ್ತು ಮಹಿಳೆರಲ್ಲಿ ಪ್ರತಿಯೊಬ್ಬರ ತೂಕವು ವೇಗವಾಗಿ ಹೆಚ್ಚುತ್ತಿದೆ. ವಾಸ್ತವವಾಗಿ, ನಮ್ಮ ಜೀವನಶೈಲಿ ಆರಾಮದ ಕಡೆಗೆ ಹೆಚ್ಚು ಒಲವು ತೋರಲು ಆರಂಭಿಸಿದೆ. ಅದೇ ಸಮಯದಲ್ಲಿ, ನಮ್ಮ ಆಹಾರವು ತುಂಬಾ ಅನಾರೋಗ್ಯಕರವಾಗಿದೆ. ಈ ಎರಡೂ ಕಾರಣಗಳಿಂದ ಬೊಜ್ಜು ಅಥವಾ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಆರಂಭವಾಗುತ್ತದೆ. ಆದರೆ ಕೆಲವು ಮಸಾಲೆಗಳನ್ನು ಸೇವಿಸುವುದರಿಂದ ಸ್ಥೂಲಕಾಯ ಹೆಚ್ಚಾಗುವುದಿಲ್ಲ ಮತ್ತು ತೂಕ ಇಳಿಕೆ ವೇಗವಾಗಿ ಪ್ರಾರಂಭವಾಗುತ್ತದೆ.
ಇನ್ನೂ ಭಾರತದ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ಕೇವಲ ಆಹಾರದ ರುಚಿ ಹೆಚ್ಚಿಸುವುದಿಲ್ಲ. ಸಾಕಷ್ಟು ಔಷಧಿ ಗುಣವನ್ನು ಹೊಂದಿರುತ್ತವೆ. ನಿಮ್ಮ ತೂಕ ಇಳಿಕೆಗೂ ಅವು ನೆರವಾಗುತ್ತವೆ. ಖಾರದ ಅಡುಗೆಯಲ್ಲಿ ಇದು ಇರಲೇಬೇಕು. ಇದು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಚಯಾಪಯಶಕ್ತಿ ಬಲ ಪಡೆಯುತ್ತದೆ. ನಿಮ್ಮ ದೇಹದ 100 ಕ್ಯಾಲೋರಿಯನ್ನು ಬರ್ನ್ ಮಾಡುತ್ತದೆ. ನಿಮ್ಮ ಹಸಿವನ್ನು ಇದು ಕಡಿಮೆ ಮಾಡುತ್ತದೆ. ದೇಹದ ಕೊಬ್ಬು ಇದ್ರಿಂದ ಕರಗುತ್ತದೆ.
ಜೀರಿಗೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿರುತ್ತದೆ. ಇದ್ರಲ್ಲಿ ಸಾಕಷ್ಟು ಔಷಧಿ ಗುಣವಿದೆ. ಜೀರಿಗೆ ತೂಕ ಇಳಿಸಿಕೊಳ್ಳಲು ಸಹಕಾರಿ. ಪ್ರತಿದಿನ ಬೆಳಿಗ್ಗೆ ಜೀರಿಗೆ ನೀರು ಸೇವನೆ ಮಾಡಿದ್ರೆ ತೂಕ ವೇಗವಾಗಿ ಇಳಿಯುತ್ತದೆ.
ಶುಂಠಿ ಕೂಡ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದ್ರಲ್ಲೂ ಔಷಧಿ ಗುಣವಿದೆ. ಹಸಿವನ್ನು ಕಡಿಮೆ ಮಾಡುತ್ತದೆ. ಚಯಾಪಚಯವನ್ನು ಸುಲಭಗೊಳಿಸುತ್ತದೆ. ದೇಹದಲ್ಲಿರುವ ಕೊಬ್ಬನ್ನು ಕರಗಿಸುವ ಕೆಲಸ ಮಾಡುತ್ತದೆ.
ಕರಿಮೆಣಸು ಕೊಬ್ಬು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೊಬ್ಬಿನ ಕೋಶಗಳು ರೂಪುಗೊಳ್ಳದಂತೆ ತಡೆಯುತ್ತದೆ. ಕರಿಮೆಣಸು ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ.
ಅರಿಶಿನ ರುಚಿ ಮತ್ತು ಬಣ್ಣಕ್ಕೆ ಪ್ರಸಿದ್ಧಿ ಪಡೆದಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಆಹಾರದಲ್ಲಿ ಅರಿಶಿನ ಬಳಕೆ ಹೆಚ್ಚು ಮಾಡಿ. ಹಾಲಿಗೆ ಹಾಕಿ ಇಲ್ಲವೆ ನೀರಿಗೆ ಹಾಕಿ ಅರಿಶಿನವನ್ನು ಸೇವಿಸಬಹುದು.
ಚಯಾಪಚಯ ಶಕ್ತಿಯನ್ನು ಬಲಪಡಿಸುವ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವ ಕೆಲಸವನ್ನು ದಾಲ್ಚಿನಿ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸಿದರೆ ಆಹಾರದಲ್ಲಿ ದಾಲ್ಚಿನ್ನಿ ಬಳಸಿ. ಚಹಾಕ್ಕೆ ದಾಲ್ಚಿನಿ ಹಾಕಿ ಸೇವನೆ ಮಾಡಬಹುದು.