ಆನೇಕಲ್: ಹಣ್ಣಿನ ಮಾರುಕಟ್ಟೆಗೆ ಹೋದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯದ ಹುಸ್ಕೂರು ಹಣ್ಣಿನ ಮಾರುಕಟ್ಟೆಯಲ್ಲಿ ನಡೆದಿದೆ. ಮಧು (31) ಮೃತ ಯುವಕ. ಸಿಂಗೇನ ಅಗ್ರಹಾರ ದಲ್ಲಿರುವ ಅತಿ ದೊಡ್ಡ ಹುಸ್ಕೂರು ಹಣ್ಣಿನ ಮಾರುಕಟ್ಟೆಯಲ್ಲಿ ಮಧು ಶವ ಪತ್ತೆ ಆಗಿದೆ.
ವಾಹನ ಸವಾರರೇ ಗಮನಿಸಿ.. ಆಗಸ್ಟ್ 1ರಿಂದ 130 ಕಿ.ಮೀ. ವೇಗದಲ್ಲಿ ಗಾಡಿ ಓಡಿಸಿದರೇ ಬೀಳುತ್ತೆ FIR..!
ಕಳೆದ ವಾರ ಹಣ್ಣಿನ ಮಾರುಕಟ್ಟೆಯಲ್ಲಿ ಯುವಕನೊಬ್ಬನನ್ನು ಪಡೆಯೊಂದು ಅಟ್ಟಾಡಿಸಿದ್ದರು. ಇದಾದ ಬಳಿಕ ಈಗ ಮಾರುಕಟ್ಟೆಯಲ್ಲಿ ಯುವಕ ಸಾವಾಗಿದೆ. ಸದ್ಯ ಮಧು ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.