ಭಾರತದ ಟಿ20 ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ತುಂಬಬಲ್ಲ ಬ್ಯಾಟರ್ ಯಾರು? ಈ ಬಗ್ಗೆ ಕ್ರಿಕೆಟ್ ಲೋಕದಲ್ಲಿ ಭಾರಿ ಚರ್ಚೆ ನಡೆಯುತ್ತಲೇ ಇದೆ. ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಈ ಕುರಿತಾಗಿ ಮಾತನಾಡಿದ್ದಾರೆ.
ಭಾರತದ ಈ ಪ್ರವಾಸದಲ್ಲಿ ಕಾಮೆಂಟೇಟರ್ ಹಾಗೂ ಕ್ರಿಕೆಟ್ ಎಕ್ಸ್ಪರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಬ್ಯಾಟರ್ರಾಬಿನ್ ಉತ್ತಪ್ಪ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತನ್ನ ಆಡುವ 11ರ ಬಳಗದಲ್ಲಿ ಅಘಾದ ಪ್ರತಿಭೆ ಹೊಂದಿರುವ ಶುಭಮನ್ ಗಿಲ್ ಮತ್ತು ಋತುರಾಜ್ ಗಾಯಕ್ವಾಡ್ ಇಬ್ಬರನ್ನೂ ಆಡಿಸಬೇಕು ಎಂದು ಹೇಳಿದ್ದಾರೆ.
ಇಬ್ಬರೂ ಕೂಡ ಅಪ್ರತಿಮ ಆಟಗಾರರು. ಇಬ್ಬರನ್ನೂ ಕೂಡ ಆಡುವ 11ರ ಬಳಗದಲ್ಲಿ ಆಡಿಸುವಂತ್ತಾಗಬೇಕು. ಅವರ ಅಂಕಿ ಅಂಶಗಳು ಅವರ ಸಾಮರ್ಥ್ಯವನ್ನು ಎತ್ತಿ ಹೇಳುತ್ತವೆ. ಟಿ20 ಕ್ರಿಕೆಟ್ನಲ್ಲಿ ಗಿಲ್ ಮತ್ತು ಗಾಯಕ್ವಾಡ್ ಅವರ ಪ್ರದರ್ಶನ ಅದ್ಭುತವಾಗಿದೆ. ಇಬ್ಬರಲ್ಲಿ ಬೆಸ್ಟ್ ಯಾರೆಂದು ಆಯ್ಕೆ ಮಾಡುವುದು ಬಹಳಾ ಕಷ್ಟ. ಸ್ಥಿರ ಪ್ರದರ್ಶನ ಗಮನಿಸುವುದಾದರೆ ಗಿಲ್ ಗಿಂತಲೂ ಗಾಯಕ್ವಾಡ್ ಹೆಚ್ಚು ಸ್ಥಿರತೆ ಹೊಂದಿದ್ದಾರೆ. ಆದರೆ, ಶುಭಮನ್ ಗಿಲ್ ಅವರಲ್ಲಿ ವೈವಿದ್ಯ ಹೊಡೆತಗಳ ಜೊತೆಗೆ ಬಲಿಷ್ಠ ಹೊಡೆತಗಳನ್ನು ಕಾಣಬಹುದು,” ಎಂದು ಶ್ರೀಲಂಕಾ ವಿರುದ್ಧದ 2ನೇ ಪಂದ್ಯದ ವಿಚಾರವಾಗಿ ಸೋನಿ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ರಾಬಿನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.