ಬೆಂಗಳೂರು: ರಾಮನಗರ (Ramanagara) ಜಿಲ್ಲೆ ಹೆಸರನ್ನ ಮರು ಸ್ಥಾಪನೆ ಮಾಡೇ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಜೆಡಿಎಸ್ ಯುವ ಘಟದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮರು ಸವಾಲು ಎಸೆದಿದ್ದಾರೆ.
ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ ಎಂಬ ಡಿಕೆ ಶಿವಕುಮಾರ್ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಹಣೆಬರಹ ಬರೆಯೋದು ಭಗವಂತ ಮತ್ತು ಏಳೂವರೆ ಕೋಟಿ ಜನತೆ. ರಾಜ್ಯದ ಜನತೆ ಕುಮಾರಸ್ವಾಮಿ ಹಣೆಬರಹ ಬರೆಯುತ್ತಾರೆ. ಕಾದು ನೋಡೊಣ ಭಗವಂತ ಯಾರ್ ಯಾರ್ ಹಣೆಬರಹ ಏನು ಬರೆಯುತ್ತಾನೆ. ಈಗಾಗಲೇ ಏನೇನು ಬರೆದಿದ್ದಾನೆ ಅಂತ ಮುಂದೆ ಹೋಗ್ತಾ ಹೋಗ್ತಾ ಗೊತ್ತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ಇನ್ನೂ ಬುದ್ದಿ ಬಂದಿಲ್ಲ, ರಾಮ ಅನ್ನೋ ಹೆಸರಿಗೆ ಅಪಚಾರವಾಗಿದೆ: ಪ್ರಮೋದ್ ಮುತಾಲಿಕ್
ನಾವು ಯಾವತ್ತು ಡಿಕೆ ಶಿವಕುಮಾರ್ ಅವರನ್ನ ನೆನಪು ಮಾಡಿಕೊಳ್ಳೊಲ್ಲ. ಆದರೆ ಡಿಕೆ ಶಿವಕುಮಾರ್ ಹಾಗೆ ಹೇಳ್ತಾರೆ. ನೆನಪು ಮಾಡಿಕೊಂಡರೂ ನಾವು ಅವರಿಗೆ ಒಳ್ಳೆಯದಾಗಲಿ ಅಂತ ಹೇಳುತ್ತೇವೆ. ರಾಜಕೀಯವಾಗಿ ಅವರು ತೆಗೆದುಕೊಳ್ತಿರೋ ನಡೆಗಳು ಸರಿಯಲ್ಲ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದರೆ ಅನೇಕ ತಾಂತ್ರಿಕ ಸಮಸ್ಯೆ ಆಗಲಿವೆ. ರೆವಿನ್ಯೂ ರೆಕಾರ್ಡ್, ಸರ್ಕಾರದ ದಾಖಲೆಗಳು 5 ತಾಲೂಕುಗಳಲ್ಲಿ ಬದಲಾವಣೆ ಆಗಬೇಕು.ಪ್ರತಿನಿತ್ಯ ಜನ ತಾಲೂಕು ಕಚೇರಿಗೆ ಓಡಾಬೇಕು. ಓಟರ್ ಐಡಿ, ಗ್ಯಾಸ್ ಬಿಲ್ ಅಡ್ರೆಸ್ ಇರಬಹುದು. ಇವೆಲ್ಲ ಸಮಸ್ಯೆಗಳಾಗುತ್ತವೆ. ಅಷ್ಟು ಸುಲಭವಾಗಿ ಹೆಸರು ಬದಲಾವಣೆ ಮಾಡೋದು ಸಾಧ್ಯವಿಲ್ಲ ಅಂತ ತಿಳಿಸಿದರು.
2006 ರಲ್ಲಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರ, ರಾಮನಗರ ಅಂತ ಜಿಲ್ಲೆ ಮಾಡಿದ್ರು. ಅವತ್ತು ಯಾರೂ ವಿರೋಧ ಮಾಡದೇ ಎಲ್ಲರೂ ಸಹಮತ ವ್ಯಕ್ತಪಡಿಸಿದರು.ಇವತ್ತು ಈ ರಾಮನ (Rama) ಹೆಸರು ಅಳಿಸುವ ಪ್ರಯತ್ನವನ್ನ ಕಾಂಗ್ರೆಸ್ ಸರ್ಕಾರ ಮಾಡ್ತಿದೆ. ಇವರನ್ನು ಅ ರಾಮನೇ ನೋಡಿಕೊಳ್ತಾನೆ. ಮುಂದಿನ ದಿನಗಳಲ್ಲಿ ರಾಮನಗರದ ಇತಿಹಾಸ, ರಾಮನ ಇತಿಹಾಸ ಯಾರಿಗೂ ಅಳಿಸುವ ಶಕ್ತಿ ಇಲ್ಲ ಎಂದು ತಿರುಗೇಟು ನೀಡಿದರು.