ಬೆಂಗಳೂರು: ಸಚಿವ ಸಂಪುಟದಲ್ಲಿ ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಘೋಷಣೆ ಮಾಡಿದ್ದು ತುಂಬಾ ಖಂಡನೀಯ ವಿಚಾರ ಅಂತಾ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
Traffic Rules: ಆಗಸ್ಟ್ 1ರಿಂದ ಹೊಸ ರೂಲ್ಸ್ ಜಾರಿ: ದಂಡ ಕಟ್ಟದೆ ಇರಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂ ವಿರೋಧಿ, ರಾಮನ ವಿರೋಧಿ ಅಂತ ಮತ್ತೊಮ್ಮೆ ಸಾಬೀತಾಗಿದೆ. ರಾಮನಗರ, ರಾಮ ಅನ್ನೋ ಹೆಸರಿಗೆ ಅಪಚಾರವಾಗಿದೆ. ರಾಮನಗರ ಅಲ್ಲ ಇಡೀ ದೇಶದ ರಾಮನ ಭಕ್ತರ ಆಸೆಗೆ ಮಾಡಿದ ಅವಮಾನ ಇದು. ಕಾಂಗ್ರೆಸ್ ನವರಿಗೆ ಇನ್ನೂ ಬುದ್ದಿ ಬಂದಿಲ್ಲ. ರಾಮನಗರಕ್ಕೆ ಹೆಸರಿಟ್ಟಿರುವುದು ಪೌರಾಣಿಕ, ಆಧ್ಯಾತ್ಮಿಕ ಹಿನ್ನೆಲೆಯಿಂದ. ಆ ಹೆಸರನ್ನು ಬದಲಾವಣೆ ಮಾಡುತ್ತಿರುವ ಹಿಂದಿನ ಉದ್ದೇಶ ಏನು ನಿಮಗೆ ಏನು ಸಮಸ್ಯೆ ಆಗ್ತಿದೆ. ಈ ರೀತಿಯ ದ್ರೋಹದ ಕೆಲಸ ಮಾಡುತ್ತಿರುವ ಡಿಕೆಶಿ ಮತ್ತು ಕಾಂಗ್ರೆಸ್ ಗೆ ಧಿಕ್ಕಾರ ಹೇಳ್ತಿವಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ನಿರ್ಧಾರವನ್ನು ವಾಪಸ್ಸು ತೆಗೆದುಕೊಳ್ಳಬೇಕು ಇಲ್ಲಾಂದ್ರೆ, ಇದೆ ಆಗಸ್ಟ್ 2 ರಂದು ದೊಡ್ಡಮಟ್ಟದಲ್ಲಿ ಹೋರಾಟ ಮಾಡ್ತಿವಿ. ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳದಿದ್ರೆ ನಿಮಗೆ ಶ್ರೀರಾಮನ ಶಾಪ ತಟ್ಟುತ್ತದೆ ಅಂತಾ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.