ಬೆಂಗಳೂರು: ಮನೆಯೂಟಕ್ಕೆ ಅನುಮತಿ ನೀಡಬೇಕೆಂದು ಕೋರಿ ನಟ ದರ್ಶನ್ (Darshan) ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ (High Court) ನಡೆಯಲಿದೆ.
ಮನೆಯೂಟ (Home Food), ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ (Maagsitrate Court) ಜುಲೈ 25 ರಂದು ವಜಾಗೊಳಿಸಿತ್ತು. ಅರ್ಜಿ ವಜಾಗೊಂಡ ಬೆನ್ನಲ್ಲೇ ಹೈಕೋರ್ಟ್ನಲ್ಲಿ (High Court) ದರ್ಶನ್ ಪರ ವಕೀಲರ ಅರ್ಜಿ ಸಲ್ಲಿಸಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್: ನಾನು ಯಾವ ರಾಜೀ ಸಂಧಾನಕ್ಕೆ ಹೋಗಿರಲಿಲ್ಲ: ನಟ ವಿನೋದ್ ರಾಜ್ ಸ್ಪಷ್ಟನೆ
ಹತ್ಯೆ ಪ್ರಕರಣದ ಆರೋಪಿಗಳಿಗೆ ಮನೆಯೂಟ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕೆ ಈ ಮೊದಲು ಕೆಳ ಹಂತದ ನ್ಯಾಯಾಲಯಗಳು ಎರಡು ಬಾರಿ ದರ್ಶನ್ ಮನವಿಯನ್ನು ತಿರಿಸ್ಕರಿಸಿವೆ. ಆದರೂ ದರ್ಶನ್ ಮತ್ತು ಅವರ ತಂಡ ಛಲಬಿಡದೆ, ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.
ವೈದ್ಯರ ಸಲಹೆಯಂತೆ ಜೈಲಿನಲ್ಲೇ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ಕಾನೂನು ಮೀರಿ ಅವರಿಗೆ ಮನೆಯೂಟದ ವ್ಯವಸ್ಥೆ ಮಾಡುವ ಅಗತ್ಯವಿಲ್ಲವೆಂದು ಸರ್ಕಾರದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದರು. ಎರಡೂ ಕಡೆಯ ವಾದ ವಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಇಂದಿಗೆ ತಮ್ಮ ತೀರ್ಪು ಕಾಯ್ದಿರಿಸಿದ್ದರು.