ಗಯಾ ಜಿಲ್ಲೆಯ ಬೈದಾ ಗ್ರಾಮದಲ್ಲಿ 70 ವರ್ಷದ ಮುದುಕ 25 ವರ್ಷದ ಯುವತಿಯೊಂದಿಗೆ ಮದುವೆ ಮಾಡಿಕೊಂಡಿರುವ ಘಟನೆ ಜರುಗಿದೆ. ವೃದ್ಧ ರೈತನಾಗಿದ್ದು, ಆತನ ಮೊದಲ ಹೆಂಡತಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ಮೊದಲ ಹೆಂಡತಿ ಸಾವಿನ ನಂತರ ಮದುವೆ ಮಾಡಿಕೊಂಡಿದ್ದಾನೆ.
ಶಿಕ್ಷಣ ಇಲಾಖೆ ಆದೇಶಕ್ಕೆ ಡೋಂಟ್ ಕೇರ್: ಶುಲ್ಕ ಮಾಹಿತಿ ಪ್ರಕಟಿಸದ ಖಾಸಗಿ ಶಾಲೆಗಳು!
ಮೊಹಮ್ಮದ್ ಸಲೀಮುಲ್ಲಾ ನೂರಾನಿ(70) ಹಮ್ಜಾಪುರದ ಇಸ್ಲಾಂನಗರ ನಿವಾಸಿ ರೇಷ್ಮಾ ಪರ್ವೀನ್(25)ಅವರನ್ನು ವಿವಾಹವಾಗಿದ್ದಾರೆ.
ತನ್ನ ಮಕ್ಕಳಿಗೆ ಮದುವೆ ಮಾಡಿದ ನಂತರ ನಾನು ಒಂಟಿ ಜೀವನ ನಡೆಸುತ್ತಿದ್ದೇನೆ. ನನಗೆ ಆಸರೆಯಾಗಲು ಯಾರೂ ಇರಲಿಲ್ಲ. ಅದೇ ಸಮಯದಲ್ಲಿ, ಸ್ಥಳೀಯ ಜನರು ವಧು ರೇಷ್ಮಾ ಪರ್ವೀನ್ ಅವರನ್ನ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮುಂದಿಟ್ಟರು. ಅದಕ್ಕೊಪ್ಪಿ ಮದುವೆಯಾದೆ ಎಂದು ಮೊಹಮ್ಮದ್ ಸಲೀಮುಲ್ಲಾ ಹೇಳಿಕೊಂಡಿದ್ದಾರೆ.
ದಂಪತಿಗಳು ಇಸ್ಲಾಮಿಕ್ ಆಚರಣೆಗಳ ಪ್ರಕಾರ ವಿವಾಹವಾಗಿದ್ದು, ವದು-ವರ ಇಬ್ಬರೂ ಸ್ವ ಇಚ್ಚೆಯಿಂದಲೇ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ವಿವಾಹದ ನಂತರದ ಇವರ ಸಂದರ್ಶನದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.