ಕೋಲಾರ:- ಬೆಮೆಲ್ ಕಂಪನಿಯಲ್ಲಿ ಪ್ರತಿಭಟನೆ ನಿರತ ಇಬ್ಬರು ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಜರುಗಿದೆ.
Women’s Asia Cup 2024: ಶ್ರೀಲಂಕಾಗೆ ಒಲಿದ ಏಷ್ಯನ್ ಕಿರೀಟ: ಹರ್ಮನ್ ಪಡೆಗೆ ನಿರಾಸೆ!
ನಿನ್ನೆ ಮಧ್ಯಾಹ್ನದಿಂದ ಆಹಾರವಿಲ್ಲದೆ ಪ್ರತಿಭಟನೆ ಹಿನ್ನೆಲೆ ಆಪರೇಟರ್ ಸೆಂದಿಲ್ ಹಾಗೂ ಸುಂದರ್ ಸಿಂಗ್ ಅಸ್ವಸ್ಥಗೊಂಡಿದ್ದು, ಅಸ್ವಸ್ಥರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಮೆಲ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ ಖಂಡಿಸಿ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ಕೈಗೊಂಡಿದ್ದರು. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಬಿಟ್ಟು ಉತ್ತರ ಭಾರತದ ಕಾರ್ಮಿಕರನ್ನು ಬೆಮೆಲ್ ಆಡಳಿತ ಮಂಡಳಿ ನೇಮಕ ಮಾಡಿಕೊಂಡಿದೆ.
ಇದನ್ನು ಖಂಡಿಸಿ ಕಾರ್ಖಾನೆ ಒಳಗೆ ಹಾಗೂ ಹೊರಗೆ ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ. 2500 ಜನ ಕಾರ್ಮಿಕರಿಂದ ಪ್ರತಿಭಟನೆ ನಡೆದಿದ್ದು, ಕಾರ್ಖಾನೆ ಒಳಗೆ ಆಹಾರವಿಲ್ಲದೆ ಕಾರ್ಖಾನೆ ಹೊರಗೂ ಬಾರದೆ ಪ್ರತಿಭಟನೆ ನಡೆಸಲಾಗಿದೆ.ಕೇಂದ್ರ ಸರ್ಕಾರದ ಒಡೆತನದ ಬೆಮೆಲ್ ಕಂಪನಿ ಇದಾಗಿದ್ದು, ಸದ್ಯ ಕಾರ್ಮಿಕರ ಜೊತೆಗೆ ಆಡಳಿತ ಮಂಡಳಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.