ಭಾರತದಲ್ಲಿ 5ಜಿ ಯುಗ ಆರಂಭವಾದ ಬಳಿಕ ಬಜೆಟ್ ಬೆಲೆಗೆ 5G ಬೆಂಬಲವಿರುವ ಸ್ಮಾರ್ಟ್ಫೋನ್ಗಳು ಅನಾವರಣ ಗೊಳ್ಳುತ್ತಿದೆ. ಅದುಕೂಡ ಅತ್ಯುತ್ತಮ ಬ್ರಾಂಡ್ಗಳಿಂದ ಬಂದ ಫೋನ್ಗಳೇ ಆಗಿದೆ. ಈ ಫೋನ್ಗಳು ಆಕರ್ಷಕ ಫೀಚರ್ಸ್ ಮತ್ತು ವಿನ್ಯಾಸದ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ. ಡಿಸ್ ಪ್ಲೇ, ಪ್ರೊಸೆಸರ್, RAM, ಕ್ಯಾಮೆರಾ ಗುಣಮಟ್ಟ ಮತ್ತು ಹೆಚ್ಚಿನ ಬ್ಯಾಟರಿ ಬಾಳಿಕೆ ಎಲ್ಲವೂ ಇದರಲ್ಲಿದೆ. ಪ್ರಸಿದ್ಧ ಸ್ಮಾರ್ಟ್ ಫೋನ್ ಬ್ರ್ಯಾಂಡ್ಗಳಾದ ಶವೋಮಿ, ಟೆಕ್ನೋ, ವಿವೋ ಮತ್ತು ಪೋಕೋ ದಂತಹ ಉನ್ನತ ದರ್ಜೆಯ 5ಜಿ ಫೋನ್ಗಳು 10,000 ಕ್ಕೆ ಲಭ್ಯವಿದೆ. ಅವುಗಳು ಯಾವುದು ಎಂಬುದನ್ನು ನೋಡೋಣ.
Nokia G42 5G:
ಈ ಸ್ಮಾರ್ಟ್ ಫೋನ್ ನಿಮಗೆ ಉತ್ತಮವಾಗಿರುವಂತಹ ಆಂಡ್ರಾಯ್ಡ್ ಅನುಭವವನ್ನು ನೀಡುತ್ತದೆ. ಸ್ಮೂತ್ ಆಗಿ ಸ್ಮಾರ್ಟ್ಫೋನ್ ಬಳಕೆ ಮಾಡುವಂತಹ ಆಸಕ್ತಿ ಹೊಂದಿರುವವರಿಗೆ ಕಡಿಮೆ ಬೆಲೆಯಲ್ಲಿ ಈ ಫೋನ್ ಉತ್ತಮವಾಗಿದೆ. ಪ್ರತಿದಿನದ ಬಳಕೆಗೆ ನೋಕಿಯಾ ಸಂಸ್ಥೆಯ ಈ ಸ್ಮಾರ್ಟ್ ಫೋನ್ ಬ್ಯಾಟರಿ ಬಾಳಿಕೆಯ ವಿಚಾರದಲ್ಲಿ ಕೂಡ ಅತ್ಯುತ್ತಮವಾಗಿದೆ.
Lava O2:
ಬ್ಯಾಲೆನ್ಸ್ಡ್ ಆಗಿರುವಂತಹ ಈ ಸ್ಮಾರ್ಟ್ ಫೋನ್ ನಿಮಗೆ ಉತ್ತಮ ಸ್ಮಾರ್ಟ್ ಫೋನ್ ಅನುಭವವನ್ನು ನೀಡುತ್ತದೆ. ಒಂದು ಸ್ಮಾರ್ಟ್ ಫೋನ್ನಲ್ಲಿ ಇರಬೇಕಾಗಿರುವಂತಹ ಪ್ರತಿಯೊಂದು ವಿಭಾಗಗಳಲ್ಲಿ ಕೂಡ ಈ ಫೋನ್ ನಿಮ್ಮ ಬಜೆಟ್ ರೇಂಜ್ ನಲ್ಲಿ ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡುತ್ತೆ.
Redmi 13C 5G:
ವಿಡಿಯೋ ಹಾಗೂ ಗೇಮಿಂಗ್ ಇಷ್ಟಪಡುವವರು ಈ ಸ್ಮಾರ್ಟ್ ಫೋನಿನ ಡಿಸ್ಪ್ಲೇ ಕ್ವಾಲಿಟಿ ಬಗ್ಗೆ ಖಂಡಿತವಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಈ ಸ್ಮಾರ್ಟ್ ಫೋನಿನ ವಿಚಾರದ ಬಗ್ಗೆ ಕೇಳಿಬರುವಂತಹ ಒಂದೇ ಒಂದು ಕಂಪ್ಲೇಂಟ್ ಅಂತ ಅಂದ್ರೆ ಅದು ಬ್ಯಾಟರಿ ಬಾಳಿಕೆ.
POCO M6 Pro 5G:
ಈ ಸ್ಮಾರ್ಟ್ ಫೋನ್ ತನ್ನ ದೃಢವಾದ ಪರ್ಫಾರ್ಮೆನ್ಸ್ ಗೆ ಹೆಸರುವಾಸಿಯಾಗಿರುವಂತಹ ಸ್ಮಾರ್ಟ್ಫೋನ್ ಆಗಿದೆ. ಡೀಸೆಂಟ್ ಆಗಿರುವಂತಹ ಪ್ರೊಸೆಸರ್ ಜೊತೆಗೆ ಇದು ನಿಮಗೆ ಸಿಗುತ್ತದೆ. ಬ್ಯಾಟರಿ ಬಾಳಿಕೆ ಕೂಡ ಸಾಲಿಡ್ ಆಗಿದೆ. ಪದೇಪದೇ ಚಾರ್ಜ್ ನಡುವೆ ಕೂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತಹ ಸಾಮರ್ಥ್ಯವನ್ನು ಹೊಂದಿದೆ.
ಇದು ಕ್ಯಾಮರಾ ಕ್ವಾಲಿಟಿಯಲ್ಲಿ ಸ್ವಲ್ಪ ಮಟ್ಟಿಗೆ ಆವರೇಜ್ ಆಗಿದ್ದು ಫೋಟೋಗ್ರಾಫಿ ವಿಚಾರದಲ್ಲಿ ಅಷ್ಟೊಂದು ಉತ್ತಮ ಆಗಿಲ್ಲ ಅಂತ ಹೇಳಬಹುದು.
Lava Blaze 5G:
ಹತ್ತು ಸಾವಿರ ರೂಪಾಯಿಗಳ ಒಳಗೆ ಸಿಗುವಂತಹ ಸ್ಮಾರ್ಟ್ ಫೋನ್ ಗಳಲ್ಲಿ ಖಂಡಿತವಾಗಿ ಇದು ನಿಮ್ಮ ಹಣಕ್ಕೆ ಒಳ್ಳೆಯ ವ್ಯಾಲ್ಯೂ ನೀಡುವಂತಹ ಸ್ಮಾರ್ಟ್ಫೋನ್ ಆಗಿದೆ ಎಂದು ಹೇಳಬಹುದಾಗಿದೆ. ನಿಮ್ಮ ಪ್ರತಿನಿತ್ಯದ ಬಳಕೆಗಾಗಿ ಖಂಡಿತವಾಗಿ ಇದು ಪಕ್ಕ ಪರ್ಫೆಕ್ಟ್ ಫೋನ್.
ಬೇರೆ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಕ್ಯಾಮೆರಾ ಕ್ವಾಲಿಟಿ ಕೂಡ ಈ ಬೆಲೆಯ ರೇಂಜಿಗೆ ಚೆನ್ನಾಗಿದೆ ಅಂತ ಹೇಳಬಹುದು. ಒಂದು ವೇಳೆ ನೀವು ಹೆಚ್ಚು ಹಣವನ್ನು ಖರ್ಚು ಮಾಡದೆ ಒಂದೊಳ್ಳೆ ಫೋನ್ ಬೇಕು ಅಂತ ಅಂದ್ರೆ ನಿಮಗೆ ಇದು ಬೆಸ್ಟ್ ಆಪ್ಷನ್.