ಕಿಡ್ನಿ ಸಮಸ್ಯೆ ಈಗ ಕಾಮನ್ ಆಗಿ ಬಿಟ್ಟಿದೆ. ಅದರಲ್ಲಿಯೂ ಈ ಕಾಯಿಲೆ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅಷ್ಟೇ ಅಲ್ಲದೇ ಈಗೀಗ ಯುವ ಜನತೆಯನ್ನು ಕೂಡ ಕಾಡಲಾರಂಭಿಸಿದೆ. ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಕೊಳ್ಳುವ ಜನರು ತಮ್ಮ ಕಿಡ್ನಿಯ ಪರೀಕ್ಷೆಗೆ ಮುಂದಾಗುವುದಿಲ್ಲ.
ಪರೀಕ್ಷೆಗೆ ಒಳಪಟ್ಟಿರುವ ಸುಮಾರು 16.8 ಶೇ ಜನರಲ್ಲಿ ಕಿಡ್ನಿಯ ಅಸಾಮಾನ್ಯತೆಯು ಕಂಡುಬಂದಿದೆ. ಕಿಡ್ನಿಯ ಅನಾರೋಗ್ಯದ ಲಕ್ಷಣಗಳು ಕಂಡುಬಂದರೂ ನಾವು ಅದನ್ನು ಕಡೆಗಣನೆ ಮಾಡುತ್ತೇವೆ ಮತ್ತು ಇದು ಬೇರೆ ಅನಾರೋಗ್ಯದ ಲಕ್ಷಣವೆಂದು ಭಾವಿಸುತ್ತೇವೆ. ಕಿಡ್ನಿ ಸಮಸ್ಯೆಯ ಯಾವುದೇ ಲಕ್ಷಣವೂ ಕಂಡುಬಂದರೆ ಆಗ ತಕ್ಷಣವೇ ಪರೀಕ್ಷೆ ಮಾಡಿಸಬೇಕು. ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಇದ್ದರೆ ಆಗ ತಪ್ಪದೆ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಕಿಡ್ನಿ ವೈಫಲ್ಯದ ಇತಿಹಾಸವಿದ್ದರೆ ಮತ್ತು ೬೦ ವರ್ಷ ಮೇಲ್ಪಟ್ಟವರು ಕಿಡ್ನಿ ಪರೀಕ್ಷೆ ಮಾಡಿಸುತ್ತಿರಬೇಕು.
ಮೂತ್ರದಲ್ಲಿ ಪ್ರೋಟೀನ್ ಅಂಶ ಹೆಚ್ಚಾದ ಕೂಡಲೇ ಅದರಿಂದ ನೊರೆಯು ಕಾಣಿಸಿಕೊಳ್ಳುವುದು ಹೆಚ್ಚಬಹುದು. ಕಿಡ್ನಿಯ ಶುದ್ಧೀಕರಿಸುವ ಕಾರ್ಯಕ್ಕೆ ಹಾನಿಯಾಗಿರುವ ಕಾರಣ ಪ್ರೋಟೀನ್ ಮತ್ತು ರಕ್ತವು ಮೂತ್ರಕೋಶಕ್ಕೆ ಸೋರಿಕೆ ಆಗಬಹುದು.
ಮೂತ್ರದಲ್ಲಿ ರಕ್ತವು ಕಂಡುಬಂದರೆ ಆಗ ಇದು ಗಡ್ಡೆ, ಕಿಡ್ನಿ ಕಲ್ಲು ಅಥವಾ ಸೋಂಕಿನ ಲಕ್ಷಣವಾಗಿರಬಹುದು. ಜ್ವರ, ಚಳಿ ಜತೆಗೆ ಮೂತ್ರದಲ್ಲಿ ಕೀವು ಕಂಡುಬಂದರೆ ಆಗ ಇದು ತೀವ್ರ ರೀತಿಯ ಮೂತ್ರಕೋಶದ ಸೋಂಕಿನ ಲಕ್ಷಣವಾಗಿದೆ. ಬಣ್ಣ, ಸ್ಥಿರತೆಯಲ್ಲಿ ಯಾವುದೇ ಬದಲಾವಣೆಗಳು ಆದರೆ ಆಗ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು.
ಜಿಲ್ಲೆ ಬದಲಾವಣೆ ಹೋರಾಟದಲ್ಲಿ ಗೆದ್ದುಬೀಗಿದ ಡಿಸಿಎಂ ಡಿಕೆಶಿ..! ಸರ್ಕಾರದ ನಿರ್ಧಾರ ಒಪ್ಪುತ್ತಾರಾ ರಾಮನಗರದ ಜನ.?
ಪಾದ ಹಿಂಗಾಲು ಅಥವಾ ಕಾಲಿನಲ್ಲಿ ಊತ
ಈ ಭಾಗದಲ್ಲಿ ಎಡಿಮಾವು ಕಾಣಿಸಿಕೊಳ್ಳಲು ಆರಂಭಿಸುವುದು ಮತ್ತು ಇದನ್ನು ಕಿಡ್ನಿ ಕಾರ್ಯವು ಕುಗ್ಗಿರುವ ಲಕ್ಷಣವೆಂದು ಕರೆಯಲಾಗುತ್ತದೆ. ಸೋಡಿಯಂ ಧಾರಣದಿಂದಾಗಿ ಚರ್ಮ ಮತ್ತು ಹಿಂಗಾಲಿನಲ್ಲಿ ಊತವನ್ನು ಕಾಣಿಸಿಕೊಳ್ಳುವುದು. ಪಾದದಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಆಗ ಇದಕ್ಕೆ ತಕ್ಷಣವೇ ವೈರದ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು
ನಿಶ್ಯಕ್ತಿ
ಕಿಡ್ನಿ ಸಮಸ್ಯೆಯಿಂದಾಗಿ ಆರಂಭದಲ್ಲೇ ನಿಶ್ಯಕ್ತಿಯು ಕಾಣಿಸಿ ಕೊಳ್ಳುವುದು. ಕಿಡ್ನಿಯ ವೈಫಲ್ಯವು ಹೆಚ್ಚಾದಂತೆ ದೇಹದಲ್ಲಿ ಶಕ್ತಿಯು ಕಡಿಮೆ ಆಗುವುದು. ಸಣ್ಣ ಕೆಲಸ ಮಾಡಿದರೂ ಆಗ ಹೆಚ್ಚು ನಿಶ್ಯಕ್ತಿಗೆ ಒಳಗಾಗಬಹುದು.
ಹೆಚ್ಚಿನ ವಿಶ್ರಾಂತಿ ಬೇಕೆಂದು ನಿಮಗೆ ಅನಿಸಬಹುದು. ರಕ್ತನಾಳ ದಲ್ಲಿ ವಿಷಕಾರಿ ಅಂಶಗಳು ಮತ್ತು ಕಲ್ಮಷವು ತುಂಬಿರುವುದು ಇದಕ್ಕೆ ಕಾರಣವಾಗಿದೆ. ಇಂತಹ ಲಕ್ಷಣಗಳನ್ನು ಕಡೆಗಣಿಸಲಾ ಗುತ್ತದೆ ಮತ್ತು ವೈದ್ಯರಿಂದ ತಪಾಸಣೆ ಮಾಡಿಸಲು ಹೋಗಲ್ಲ.
ವಿಷಕಾರಿ ಅಂಶಗಳಾಗಿರುವಂತಹ ಯೂರಿಯಾ, ಕ್ರಿಯೇಟಿನಿನ್ ಮತ್ತು ಆಮ್ಲವು ಜಮೆಯಾಗುವ ಕಾರಣದಿಂದ ಹಸಿವು ತಗ್ಗುವುದು. ಕಿಡ್ನಿ ಸಮಸ್ಯೆಯು ತೀವ್ರವಾದಂತೆ ರುಚಿಯು ಕಡಿಮೆ ಮಾಡುವುದು ಮತ್ತು ಲೋಹದ ರುಚಿಯು ಬರಬಹುದು. ಸ್ವಲ್ಪ ಊಟ ಮಾಡುವಾಗಲೇ ಹೊಟ್ಟೆ ತುಂಬಿದ ಭಾವನೆಯು ಆಗುತ್ತಲಿದ್ದರೆ, ಆಗ ಇದು ಕಿಡ್ನಿಯ ಕಾರ್ಯ ಕುಸಿತವಾಗಿರುವುದರ ಲಕ್ಷಣವಾಗಿದೆ.
ಬೆಳಗ್ಗೆ ಎದ್ದ ಬಳಿಕ ಹಲ್ಲುಜ್ಜಲು ಹೋದ ವೇಳೆ ವಾಕರಿಕೆ ಅಥವಾ ವಾಂತಿಯು ಕಂಡುಬಂದರೆ ಆಗ ಇದು ಕಿಡ್ನಿಯ ಸಮಸ್ಯೆಯ ಲಕ್ಷಣ ವೆಂದು ಪರಿಗಣಿಸಬೇಕು. ಇದರ ಜತೆಗೆ ಹಸಿವು ಕೂಡ ಕಡಿಮೆ ಆಗಿರುವುದು. ಪದೇ ಪದೇ ವಾಂತಿ ಬಂದಂತೆ ಆಗುವುದು ಮತ್ತು ಹಸಿವು ಕಡಿಮೆ ಆಗು ವುದು ಕಿಡ್ನಿ ವೈಫಲ್ಯದ ಪ್ರಮುಖ ಲಕ್ಷಣವಾಗಿದೆ
ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಕಡಿಮೆ ಆದ ವೇಳೆ ದೇಹವು ತುಂಬಾ ಪೇಲವವಾಗಿ ಕಾಣಿಸಬಹುದು. ದೇಹದಲ್ಲಿ ರಕ್ತನಷ್ಟದ ಕುರುಹುಗಳು ಕಾಣಿಸದೇ ಇರಬಹುದು.
ಇದು ಕಿಡ್ನಿ ಸಮಸ್ಯೆಯ ಸಾಮಾನ್ಯ ಲಕ್ಷಣದಲ್ಲಿ ಒಂದಾಗಿದೆ. ಇದರಿಂದ ನಿಶ್ಯಕ್ತಿ ಮತ್ತು ಬಳಲಿಕೆ ಕಂಡುಬರಬಹುದು. ಎರಿಥ್ರೋಪೊಯೆಟಿನ್ ಮಟ್ಟ ಕುಗ್ಗುವುದು, ಕಬ್ಬಿಣಾಂಶ ಮಟ್ಟ ಕಡಿಮೆ ಆಗುವುದು ಮತ್ತು ವಿಷಕಾರಿ ಅಂಶಗಳು ಜಮೆ ಆಗುವ ಕಾರಣದಿಂದಾಗಿ ರಕ್ತಹೀನತೆಯು ಉಂಟಾಗುವುದು.
ಮೂತ್ರದ ಆವರ್ತನದಲ್ಲಿ ಬದಲಾವಣೆ
ಮೂತ್ರ ವಿಸರ್ಜನೆ ವೇಳೆ ಯಾವಾಗಲೂ ಗಮನಿಸಬೇಕು. ಮೂತ್ರದ ಹರಿವು ಕಡಿಮೆ ಆಗುವುದು ಅಥವಾ ಮೂತ್ರದ ಪದೇ ಪದೇ ಬರುವುದು. ಅದರಲ್ಲೂ ರಾತ್ರಿ ವೇಳೆ ಇದು ಹೆಚ್ಚಾಗಿರುವುದು. ಇದು ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದರ ಲಕ್ಷಣವಾಗಿದೆ.
ಕೆಲವು ಸಂದರ್ಭದಲ್ಲಿ ಪುರುಷರಲ್ಲಿ ಇದು ಮೂತ್ರಕೋಶದ ಸೋಂಕು ಅಥವಾ ಪ್ರಾಸ್ಟೇಟ್ ಗ್ರಂಥಿಯು ಊದಿಕೊಂಡಿರುವ ಲಕ್ಷಣವೂ ಆಗಿರಬಹುದು. ಮೂತ್ರದ ಆವರ್ತನದಲ್ಲಿ ಬದಲಾವಣೆ ಆದರೆ ಆಗ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ
ಚರ್ಮವು ಒಣ ಮತ್ತು ತುರಿಕೆಯಿಂದ ಕೂಡಿದ್ದರೆ, ಆಗ ಇದು ತೀವ್ರ ರೀತಿಯ ಕಿಡ್ನಿಯ ಸಮಸ್ಯೆಯ ಲಕ್ಷಣವಾಗಿದೆ. ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದ ವೇಳೆ ದೇಹದಲ್ಲಿ ವಿಷಕಾರಿ ಅಂಶಗಳು ಜಮೆ ಆಗುವುದು. ಇದರಿಂದ ಚರ್ಮವು ಒಣಗಿ, ತುರಿಕೆ ಮತ್ತು ವಾಸನೆ ಬರಬಹುದು
ಬೆನ್ನಿನಲ್ಲಿ ನೋವು, ದೇಹದ ಒಂದು ಪಾರ್ಶ್ವ ನೋವು ಅಥವಾ ಪಕ್ಕೆಲುಬಿನ ಕೆಳಗೆ ನೋವು ಕಂಡುಬಂದರೆ ಆಗ ಇದು ಕಿಡ್ನಿ ಸಮಸ್ಯೆಯ ಲಕ್ಷಣಗಳು ಎಂದು ತಿಳಿಯಬೇಕು.