ಮಂಡ್ಯ: ಕೊಡಗು, ಹಾಸನ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಮಂಡ್ಯದಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದಿಂದ 1.30 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿದ್ದು ಹಾರಂಗಿ ಮತ್ತು ಹೇಮಾವತಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿ ಹರಿಸಲಾಗುತ್ತಿದೆ.
ಸಾರ್ವಜನಿಕರೇ ಗಮನಿಸಿ: ಇಂದಿನಿಂದ 3 ದಿನ ಇ-ಸ್ವತ್ತು ತಂತ್ರಾಂಶ ಸ್ಥಗಿತ..! ಯಾಕೆ ಗೊತ್ತಾ..?
ಪರಿಣಾಮ ಕ್ಷಣ ಕ್ಷಣಕ್ಕೂ ಕೆಆರ್ಎಸ್ ಒಳ ಹರಿವು ಹಾಗೂ ಹೊರಹರಿವಿನಲ್ಲಿ ಏರಿಕೆಯಾಗುತ್ತಿದೆ. ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. 124.84 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 124.80 ಅಡಿ ನೀರು ಸಂಗ್ರಹವಾಗಿದೆ. 1,20,000 ಕ್ಯೂಸೆಕ್ ಒಳ ಹರಿವು ಇದ್ದು 1,30,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 49.452 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 48.643 ಟಿಎಂಸಿ ನೀರು ಸಂಗ್ರಹಗೊಂಡಿದೆ.