ಅಲೋವೆರಾ ತ್ವಚೆಯ ಮೈಬಣ್ಣವನ್ನು ಸುಧಾರಿಸುವಲ್ಲಿ ತುಂಬಾ ಪ್ರಯೋಜನಕಾರಿ. ಒತ್ತಡದ ಜೊತೆಗೆ, ಆಯಾಸ ಮತ್ತು ಧೂಳಿನಿಂದ ಚರ್ಮವು ಹಾನಿಗೊಳಗಾಗುತ್ತದೆ. ಇದರಿಂದ ತ್ವಚೆಯ ಬಣ್ಣ ಮಂದವಾಗುತ್ತದೆ. ಸಾಕಷ್ಟು ಜನರು ಹೊಳೆಯುವ ಚರ್ಮಕ್ಕಾಗಿ ವಿವಿಧ ರೀತಿಯ ಸೌಂದರ್ಯ ಚಿಕಿತ್ಸೆಗಳು ಮತ್ತು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅನೇಕ ಬಾರಿ ಇವೆಲ್ಲವೂ ಅಪೇಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ
ಆದರೆ ಅಲೋವೆರಾ ತ್ವಚೆಯ ಮೈಬಣ್ಣವನ್ನು ಸುಧಾರಿಸುವಲ್ಲಿ ತುಂಬಾ ಪ್ರಯೋಜನಕಾರಿ. ಅಲೋವೆರಾ ಎಲೆಯನ್ನು ತೊಳೆದು ಅದರ ಜೆಲ್ ಅನ್ನು ಹೊರತೆಗೆಯಿರಿ. ಈಗ ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಿ. ಒಂದು ಬಟ್ಟಲಿನಲ್ಲಿ ಈ ಎರಡನ್ನೂ ಮಿಶ್ರಣ ಮಾಡಿ. ಈಗ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 20 ರಿಂದ 30 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆಯಿರಿ. ನೀವು ಬಯಸಿದರೆ, ನೀವು ರಾತ್ರಿಯಿಡೀ ಹಾಗೆಯೇ ಬಿಡಬಹುದು. ಹೀಗೆ ಮಾಡಿದ್ರೆ ತ್ವಚೆ ಚೆನ್ನಾಗಿ ಇರುತ್ತದೆ. ನಿತ್ಯವೂ ಹೀಗೆ ಮಾಡಿದ್ರೆ ಹೊಳೆಯುವ ಚರ್ಮ ನಿಮ್ಮದಾಗಲಿದೆ.
ಇದು ಹಾನಿಗೊಳಗಾದ ಚರ್ಮದ ಜೀವಕೋಶಗಳನ್ನು ಸರಿಪಡಿಸಿ ಚರ್ಮ ಕಾಂತಿಯುಕ್ತ ಮತ್ತು ಸುಂದರವಾಗುವಂತೆ ಮಾಡುತ್ತದೆ. ಚರ್ಮ ಪುನಶ್ಚೇತನ ಪಡೆಯಲು ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ನಿಯಮಿತವಾಗಿ ಈ ಜ್ಯೂಸ್ ಕುಡಿಯುವುದರಿಂದ ವೃದ್ಧಾಪ್ಯದ ಲಕ್ಷಣಗಳು ನಿಯಂತ್ರಿಸಲ್ಪಡುತ್ತವೆ. ಕೂದಲಿನ ಆರೋಗ್ಯಕ್ಕೂ ಇದು ಉತ್ತಮ .