ಶಿವಮೊಗ್ಗ: ಪ್ರಪಂಚದಲ್ಲಿ ನಾನಾ ರೀತಿಯ ಕಾಯಿಲೆಗಳು ಇತ್ತೀಚಿಗೆ ಕಾಣಿಸುತ್ತಿವೆ. ಅದರಲ್ಲಿ ಇಲಿ ಜ್ವರ ಕೂಡ ಒಂದು. ಇಲಿ ತಾನೆ ಎಂದು ನಿರ್ಲಕ್ಷ ಮಾಡುವ ಹಾಗಿಲ್ಲ. ಏಕೆಂದರೆ ವೈದ್ಯರ ಪ್ರಕಾರ ಇದು ತುಂಬಾ ಡೇಂಜರ್. ಈಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಕ್ಲಾಪುರ ಗ್ರಾಮದ ಯುವತಿ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಲಿ ಜ್ವರದಿಂದ ಮೃತಪಟ್ಟಿದ್ದಾಳೆ.
ಪಲ್ಲವಿ(21) ಮೃತ ರ್ದುದೈವಿ. ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಪಲ್ಲವಿ ಅವರಿಗೆ ಜುಲೈ 9ರಂದು ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಹತ್ತಿರದ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಲವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ವೈದ್ಯಲೋಕಕ್ಕೆ ಅಚ್ಚರಿ! ಪ್ರತಿ ಶನಿವಾರ ಮಿಸ್ ಮಾಡದೆ ಈ ವ್ಯಕ್ತಿ ಎಲ್ಲೇ ಇದ್ರೂ ಹೋಗಿ ಕಚ್ಚುತ್ತೆ ಈ ಹಾವು!
ಜ್ವರದ ತೀವ್ರತೆ ಹೆಚ್ಚಾದ ಹಿನ್ನಲೆ ಮೆಗ್ಗಾನ್ ಆಸ್ಪತ್ರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಪಲ್ಲವಿಯನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿಯೇ ಜುಲೈ 23 ರಂದು ಯುವತಿ ಮೃತಪಟ್ಟಿದ್ದಾರೆ. ಇತ್ತ ಮನೆ ಮಗಳನ್ನು ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.