17 ಆವೃತ್ತಿಗಳಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಯಾರನ್ನು ಉಳಿಸಿಕೊಳ್ಳಲಿದೆ ಮತ್ತು ಬಿಡುಗಡೆ ಮಾಡಲಿದೆ ಎಂಬ ಕುತೂಹಲ ಈಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಮೆಗಾ ಆಕ್ಷನ್ ಆಗಿರುವ ಕಾರಣ ಪ್ರತಿ ತಂಡಗಳು 3+1 ಆಟಗಾರರನ್ನು ಉಳಿಸಿಕೊಳ್ಳಬೇಕಾಗುತ್ತದೆ. ಬಿಡುಗಡೆ ಮಾಡಿದ ಆಟಗಾರರಲ್ಲಿ ಕೆಲವರನ್ನು ರೈಟ್ ಟು ಮ್ಯಾಚ್ ಅಧಿಕಾರ ಬಳಕೆ ಮಾಡಿ ಮರಳಿ ಖರೀದಿ ಮಾಡಬಹುದು ಕೂಡ. ಐಪಿಎಲ್ 2022 ಟೂರ್ನಿ ಸಲುವಾಗಿ ನಡೆದಿದ್ದ ಮೆಗಾ ಆಕ್ಷನ್ನಲ್ಲೂ ಇದೇ ನಿಯಮವನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಉಳಿಸಿಕೊಳ್ಳಬಹುದಾದ 4 ಆಟಗಾರರಲ್ಲಿ ಗರಿಷ್ಠ ಇಬ್ಬರು ವಿದೇಶಿಗರು, ಗರಿಷ್ಠ ಮೂವರು ಭಾರತೀಯ ಆಟಗಾರರು ಆಗಿರಬಹುದಾಗಿದೆ. ಹೀಗಾಗಿ ಆರ್ಸಿಬಿ ಉಳಿಸಿಕೊಳ್ಳಬಲ್ಲ ಆ 4 ಆಟಗಾರರು ಯಾರು? ಎಂಬ ಚರ್ಚೆ ಈಗ ಜೋರಾಗಿದೆ.
ಕಳೆದ 3 ಆವೃತ್ತಿಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿರುವ ದಕ್ಷಿಣ ಆಫ್ರಿಕಾದ ದಿಗ್ಗಜ ಪಾಫ್ ಡು ಪ್ಲೆಸಿಸ್, ಕೆಲ ದಿನಗಳ ಹಿಂದಷ್ಟೇ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೀಗಾಗಿ ತಂಡದಿಂದ ಫಾಫ್ ಅವರನ್ನು ಬಿಡುಗಡೆ ಮಾಡಿ ಹೊಸ ಕ್ಯಾಪ್ಟನ್ ಸಲುವಾಗಿ ಆರ್ಸಿಬಿ ಹುಡುಕಾಟ ಶುರು ಮಾಡಲಿದೆ. ಈ ನಡುವೆ ಹರಾಜಿಗೂ ಮೊದಲೇ ಟ್ರೇಡಿಂಗ್ ಮೂಲಕ ಲಖನೌ ಸೂಪರ್ ಜಯಂಟ್ಸ್ ತಂಡದಿಂದ ಕೆಎಲ್ ರಾಹುಲ್ ಅವರನ್ನು ಆರ್ಸಿಬಿ ತೆಗೆದುಕೊಳ್ಳುವ ಸಾಧ್ಯತೆ ಇದೆ ವರದಿಗಳಾಗಿವೆ. ಆರ್ಸಿಬಿ ತಂಡಕ್ಕೆ ರಾಹುಲ್ ಬಂದರೆ ಕ್ಯಾಪ್ಟನ್ಸಿ ಕೂಡ ಪಡೆದುಕೊಳ್ಳಲಿದ್ದಾರೆ ಎನ್ನಲ್ಲಾಗಿದೆ.
ಮೆಗಾ ಆಕ್ಷನ್ಗೂ ಮುನ್ನ ಆರ್ಸಿಬಿ ಉಳಿಸಿಕೊಳ್ಳಬಲ್ಲ ಆಟಗಾರರು
01. ವಿರಾಟ್ ಕೊಹ್ಲಿ (ಬ್ಯಾಟರ್)
02. ಕ್ಯಾಮೆರಾನ್ ಗ್ರೀನ್ (ಆಲ್ರೌಂಡರ್)
03. ವಿಲ್ ಜಾಕ್ಸ್ (ಬ್ಯಾಟರ್)
04. ರಜತ್ ಪಾಟಿದಾರ್ (ಬ್ಯಾಟರ್)
ಆರ್ಸಿಬಿ ಬಿಡುಗಡೆ ಮಾಡಬಹುದಾದ ಸ್ಟಾರ್ ಆಟಗಾರರು
01. ಫಾಫ್ ಡುಪ್ಲೆಸಿಸ್
02. ಮೊಹಮ್ಮದ್ ಸಿರಾಜ್ (ರೈಟ್ ಟು ಮ್ಯಾಚ್ ಬಳಸಿ ಮರಳಿ ಖರೀದಿಸಬಹುದು)
03. ಅಲ್ಝಾರಿ ಜೋಸೆಫ್
04. ರೀಸ್ ಟಾಪ್ಲೀ
05. ಗ್ಲೆನ್ ಮ್ಯಾಕ್ಸ್ವೆಲ್
06. ಲಾಕಿ ಫರ್ಗ್ಯೂಸನ್