ಗದಗ: ನಿರಂತರ ಮಳೆ ಹಿನ್ನೆಲೆ ಗದಗನಲ್ಲಿ ಭೂಕುಸಿತ ಉಂಟಾಗಿದೆ. ಗದಗ ನಗರದ ನರಿಭಾವಿ ಓಣಿಯ ವಾಸವಿ ಸ್ಕೂಲ್ ಬಳಿ ಈ ಘಟನೆ ನಡೆದಿದ್ದು, ಭೂಕುಸಿತ ದಿಂದ ಸ್ಥಳಿಯರು ಆತಂಕಗೊಂಡಿದ್ದಾರೆ. ಒಳಗಡೆ ಬೃಹದಾಕಾರದ ಗುಂಡಿ ನಿರ್ಮಾಣವಾಗಿದ್ದು, ಸುಮಾರು ಐದಾರು ಅಡಿ ಆಳದ ವರೆಗೆ ಭೂಕುಸಿತ ಉಂಟಾಗಿದೆ.
ವಾಸವಿ ಸ್ಕೂಲ್ ಹೋಗುವ ರಸ್ತೆಯಲ್ಲಿ ಭೂಕುಸಿತ ಉಂಟಾದ್ದರಿಂದ ಸ್ಥಳಿಯರು ಭಯಭೀತಗೊಂಡಿದ್ದಾರೆ. ಮಳೆಯಿಂದ ಯಾವ ಸಂದರ್ಭದಲ್ಲಿ ಏನಾಗುತ್ತೋ ಎಂಬ ಆತಂಕಕ್ಕೆ ಒಳಗಾದ ಸ್ಥಳಿಯ ನಿವಾಸಿಗಳು ಗುಂಡಿ ಮುಚ್ಚಿ ಅಂತ ಆಗ್ರಹಿಸಿದ್ದಾರೆ.