ನೀರನ್ನು ಅಳೆಯುವ ಮಾಪಕಗಳು ನಮಗೆ ತಿಳಿದಂತೆ ‘ಲೀಟರ್’ ಹೆಚ್ಚು ಬಳಕೆಯಲ್ಲಿದೆ. ಅದೇ ನೀರಿನ ಪ್ರಮಾಣ ಅಧಿಕವಾದಂತೆ ಅಳೆಯುವ ಮಾಪಕವೂ ಬದಲಾಗುತ್ತದೆ. ಈ ಬಗ್ಗೆ ಗೂಗಲ್, ಯಾಹೂ, ಕ್ಯೂರಾದಲ್ಲಿ ಪ್ರಶ್ನೆ ಹಾಕಿ ಅನೇಕ ಮಂದಿ ಉತ್ತರ ಪಡೆದಿದ್ದಾರೆ. ಇದೇ ರೀತಿ ಪಡೆದ ಉತ್ತರ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗಿದೆ.
ಒಂದು ಟಿಎಂಸಿ ಎಂದರೆ ಎಷ್ಟು? : ಒಂದು ಟಿ.ಎಂ.ಸಿ ಅಂದರೆ ಒಂದು ಸಾವಿರ ಅಡಿ ಉದ್ದ, ಸಾವಿರ ಅಡಿ ಅಗಲ, ಸಾವಿರ ಅಡಿ ಎತ್ತರದ ನೀರಿನ ರಾಶಿ.
ನಿಮಗೆ ರಾತ್ರಿ ಹೊತ್ತು ಸರಿಯಾದ ನಿದ್ದೆ ಆಗ್ತಿಲ್ಲವೇ: ಈ ಆಹಾರಗಳನ್ನ ತಿಂದು ನೋಡಿ!
2300 ಎಕರೆ ಜಾಗದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿಎಂಸಿಗೆ ಸಮ. ಟಿಎಂಸಿಯ ಪೂರ್ಣ ರೂಪ ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ. ಇದನ್ನು t.m.c ಅಥವಾ Tmc ft ಅಥವಾ Tmcft ಎಂದೂ ಸೂಚಿಸಲಾಗುತ್ತದೆ. ಇದು ನೀರಿನ ಪ್ರಮಾಣವನ್ನು ಅಳೆಯಲು ಬಳಸುವ ಒಂದು ಘಟಕವಾಗಿದೆ
ಅಂದಹಾಗೆ ಟಿಎಂಸಿಯನ್ನು ಭಾರತದಲ್ಲಿ ಮಾತ್ರ ಜಲಾಶಯಗಳನ್ನು ಅಳೆಯಲು ಹೆಚ್ಚಾಗಿ ಬಳಸಲಾಗುತ್ತದೆ. 1 ಟಿಎಂಸಿ ಎಂದರೆ ಅಂದಾಜು 2831 ಕೋಟಿ ಲೀಟರ್ ನೀರು ಅಥವಾ ಘನ ಅಡಿ. ಸಾಮಾನ್ಯವಾಗಿ ದೊಡ್ಡ ಜಲಾಶಯಗಳ ಸಾಮರ್ಥ್ಯವನ್ನು ಅಳೆಯಲು ಟಿಎಂಸಿ ಎಂಬ ಪ್ರಮಾಣವನ್ನು ಬಳಸಲಾಗುತ್ತದೆ. ಉದಾಹರಣೆಗೆ ಭಾರತದ ಅತಿದೊಡ್ಡ ಜಲಾಶಯವಾದ ಖಾಂಡ್ವಾ ಜಿಲ್ಲೆಯ ಇಂದಿರಾಸಾಗರದ ಸಂಗ್ರಹ ಸಾಮರ್ಥ್ಯವು ಸುಮಾರು 346 ಟಿಎಂಸಿ ಆಗಿದೆ.
ಒಟ್ಟಾರೆ ಲೀಟರ್, ಮಿಲಿ ಲೀಟರ್ಗಳಲ್ಲಿ ಅಳೆಯುವ ದ್ರವ ಪದಾರ್ಥವಾದ ನೀರನ್ನು ಅಳೆಯಲು ಬಳಕೆಯಾಗುವ ಟಿಎಂಸಿ ಹಿಂದಿನ ಅಳತೆ ನಿಜಕ್ಕೂ ಕುತೂಹಲಕರವಾಗಿದೆ.