ರಾಯಚೂರು:- ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಮನೆಯೊಂದರಲ್ಲಿ ಹೆಡ್ಕಾನ್ಸ್ಟೇಬ್ ರಾಜ್ ಮೊಹಮ್ಮದ್, ಪ್ರೇಯಸಿ ಜೊತೆ ಇದ್ದಾಗಲೇ ಸಿಕ್ಕಿಬಿದ್ದಿದ್ದಾರೆ. ತನ್ನ ಪತಿ ಪ್ರೇಯಸಿ ಜೊತೆ ಇರುವುದನ್ನು ರೆಡ್ಹ್ಯಾಂಡ್ ಆಗಿ ಲಾಕ್ ಮಾಡಿದ ಪತ್ನಿ ಪ್ಯಾರಿ ಬೇಗಂ, ಬಳಿಕ ಎಸ್ಪಿಗೆ ಕರೆ ಮಾಡಿ ದೂರು ನೀಡಿದ್ದಾರೆ.
ನಿಮ್ಮ ಮಗು ಮೊಬೈಲ್ ಫೋನ್ ಗೆ ಅಡಿಕ್ಟ್ ಆಗಿದ್ಯಾ!?, ಹಾಗಿದ್ರೆ ಈಗಲೇ ಹುಷಾರಾಗಿ!
ರಾಜ್ ಮೊಹಮ್ಮದ್ , ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ ಪತ್ನಿಯನ್ನು ದೂರ ಮಾಡಿದ್ದ ಎಂದು ಆರೋಪಿಸಲಾಗಿದೆ. ಆದ್ರೆ, ಈ ಬಾರಿ ಹೆಡ್ಕಾನ್ಸ್ಟೇಬಲ್ ರಾಜ್ ಮೊಹಮ್ಮದ್, ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಇರುವಾಗಲೇ ಪತ್ನಿ ಪ್ಯಾರಿ ಬೇಗಂ ಲಾಕ್ ಮಾಡಿದ್ದು, ಬಳಿಕ ಕರೆ ಮಾಡಿ ಎಸ್ಪಿಗೆ ದೂರು ನೀಡಿದ್ದಾರೆ
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಆಗಮಿಸಿ ಮನೆ ಲಾಕ್ ಓಪನ್ ಮಾಡಿ ಬಳಿಕ ಹೆಡ್ಕಾನ್ಸ್ಟೇಬಲ್ ರಾಜ್ ಮೊಹಮ್ಮದ್ ಮತ್ತು ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಸುತ್ತಮುತ್ತಲಿನ ಜನರು ಜಮಾವಣೆಗೊಂಡಿದ್ದರು