ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ನಿದ್ದೆ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಎಚ್ಚರವಾಗಿರುವಾಗ ಹೇಗಿರುತ್ತೀರಿ, ಎಷ್ಟು ಫ್ರೆಶ್ ಆಗಿರುತ್ತೀರಿ ಎಂಬುದು ನಿಮ್ಮ ನಿದ್ದೆ ಮೇಲೆ ಭಾಗಶಃ ಅವಲಂಬಿತವಾಗಿರುತ್ತದೆ. ನಿದ್ರೆಯ ಸಮಯದಲ್ಲಿ ನಿಮ್ಮ ದೇಹವು ಸಂಪೂರ್ಣ ವಿಶ್ರಾಂತಿಗೆ ಜಾರುತ್ತದೆ. ಆರೋಗ್ಯಕರ ಮೆದುಳಿನ ಕಾರ್ಯ ಮತ್ತು ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ ಅತ್ಯಗತ್ಯ. ಆದರೆ, ಕೆಲವೊಬ್ಬರಿಗೆ ರಾತ್ರಿ ಮಲಗಿದ ಬಳಿಕ ನಿದ್ರೆ ಬೀಳೋದೇ ಕಷ್ಟ. ಕಣ್ಣಿಗೆ ನಿದ್ದೆ ಬೀಳಲು ಹರಸಾಹಸ ಪಡುವವರಿದ್ದಾರೆ. ನೀವು ಕೂಡಾ ಅವರಲ್ಲಿ ಒಬ್ಬರಾಗಿದ್ದರೆ, ಈ ಸಲಹೆ ನಿಮಗಾಗಿ.
ವಕೀಲನ ಖಾಸಗಿ ಅಂಗಕ್ಕೆ ಕಚ್ಚಿದ ನಾಯಿ: ಪಿಟ್ ಬುಲ್ ದಾಳಿಗೆ ಗಾಯಾಳು ಗಂಭೀರ!
ದುಃಸ್ವಪ್ನ ಬಾರದೇ ಇರಲು ಹೀಗೆ ಮಾಡಿ
ಮನೆಯಲ್ಲಿ ಮಲಗಿರುವಾಗ ಕೆಲವರು ಆಗಾಗ್ಗೆ ಥಟ್ಟನೆ ಎಚ್ಚರಗೊಳ್ಳುತ್ತಾರೆ. ಜನರನ್ನು ಎಚ್ಚರವಾಗಿಡುವ ಭಯದ ದುಃಸ್ವಪ್ನಗಳು ಹಲವರಿಗೆ ಬಾಧಿಸುತ್ತವೆ. ನೀವು ಈ ಸಮಸ್ಯೆಯನ್ನು ಹೊಂದಿದ್ದರೆ ನಿಮ್ಮ ದಿಂಬಿನ ಕೆಳಗೆ ಚಾಕು, ಕತ್ತರಿ ಅಥವಾ ಇತರ ಕಬ್ಬಿಣದ ವಸ್ತುವನ್ನು ಇರಿಸಿ. ಅಥವಾ ಮಂಚದ ಕೆಳಗೆ ಒಂದು ಬಟ್ಟಲು ಕಲ್ಲು ಉಪ್ಪು ಮತ್ತು ದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಮಲಗಬಹುದು. ಇದರಿಂದ ಭಯಾನಕ ದುಃಸ್ವಪ್ನಗಳ ಸಮಸ್ಯೆ ನಿವಾರಣೆಯಾಗುತ್ತದೆ.
ಸಂಬಂಧ ಬಲಪಡಿಸಿಕೊಳ್ಳಿ
ಸಂಗಾತಿಯೊಂದಿಗೆ ಸಂಬಂಧವನ್ನು ಬಲಪಡಿಸಲು ಬಯಸಿದರೆ ದಿಂಬಿನ ಕೆಳಗೆ ಪರಿಮಳಯುಕ್ತ ಹೂವುಗಳನ್ನು ಇರಿಸಿ. ಇದು ಶುಕ್ರನ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರಿಂದ ಒಳ್ಳೆಯ ಕನಸುಗಳನ್ನು ಕಾಣಬಹುದು. ವೈವಾಹಿಕ ಜೀವನದಲ್ಲಿ ಪ್ರೀತಿ ಕೂಡ ಬೆಳೆಯುತ್ತದೆ.
ಉತ್ತಮ ಆರೋಗ್ಯಕ್ಕಾಗಿ ಸಲಹೆ
ದಿನದ ಬಹುಪಾಲು ಅಸ್ವಸ್ಥರಾಗಿದ್ದರೆ ಮತ್ತು ಆರೋಗ್ಯವು ನಿರಂತರವಾಗಿ ಹದಗೆಡುತ್ತಿದ್ದರೆ ಮಲಗುವ ಸಮಯದಲ್ಲಿ ಹಾಸಿಗೆಯ ಕೆಳಗೆ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಇರಿಸಿ. ಬೆಳಗ್ಗೆ ಎದ್ದ ಅನಂತರ ಮರ ಅಥವಾ ಗಿಡದ ಮೇಲೆ ಈ ನೀರನ್ನು ಸುರಿಯಲು ಮರೆಯದಿರಿ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲವಾಗುತ್ತದೆ.