ಮಳೆಗಾಲ ಶುರುವಾದಾಕ್ಷಣ ಒಂದಿಲ್ಲೊಂದು ಚರ್ಮದ ಸಮಸ್ಯೆ ಕಾಡುವುದು ಸಹಜ. ಕೊಳಚೆ ನೀರು ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಇದರಿಂದ ಚರ್ಮದಲ್ಲಿ ತುರಿಕೆ, ಕಜ್ಜಿ, ದದ್ದು ಮುಂತಾದ ಸಮಸ್ಯೆಗಳು ಕಾಣಿಸಬಹುದು. ಇದರ ಪರಿಹಾರಕ್ಕೆ ಮನೆಯಲ್ಲೇ ಕೆಲವು ಸರಳ ಪರಿಹಾರ ಕಂಡುಕೊಳ್ಳಬಹುದು.
ಪಾದದ ಸೋಂಕು:
ಗಾಜಿಯಾಬಾದ್ನ ಚರ್ಮರೋಗ ತಜ್ಞೆ ಡಾ.ಸೌಮ್ಯ ಸಚ್ದೇವ ಅವರು ಹೇಳುವಂತೆ, ಮಳೆಗಾಲದಲ್ಲಿ ಕ್ರೀಡಾಪಟುಗಳಲ್ಲಿ ಪಾದದ ಸೋಂಕು ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳುತ್ತಾರೆ. ಅಥ್ಲೀಟ್ಸ್ ಫೂಟ್ ಎಂಬುದು ಪಾದಗಳಲ್ಲಿ ಉಂಟಾಗುವ ಶಿಲೀಂಧ್ರಗಳ ಸೋಂಕು. ಇದು ವಿಶೇಷವಾಗಿ ಬೆರಳುಗಳ ನಡುವೆ ಸಂಭವಿಸುತ್ತದೆ. ಪಾದಗಳು ದೀರ್ಘಕಾಲ ಒದ್ದೆಯಾಗಿದ್ದಾಗ ಈ ಸೋಂಕು ಸಂಭವಿಸುತ್ತದೆ.ಇದು ಪಾದಗಳ ಚರ್ಮದ ಮೇಲೆ ತುರಿಕೆ ಬೆರಳುಗಳ ನಡುವೆ ಗುಳ್ಳೆಗಳು, ಪಾದಗಳಿಂದ ದುರ್ವಾಸನೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಶಿಲೀಂದ್ರಗಳ ಸೋಂಕು:
ಫಂಗಲ್ ಸೋಂಕು ಚರ್ಮದ ಮೇಲೆ ಕೆಂಪು ಮತ್ತು ತುರಿಕೆ ಕಲೆಗಳನ್ನು ಉಂಟುಮಾಡುತ್ತದೆ. ಈ ಸೋಂಕು ದೇಹದ ಯಾವುದೇ ಭಾಗದಲ್ಲಿ ಸಂಭವಿಸುತ್ತದೆ. ಇದನ್ನು ರಿಂಗ್ ವರ್ಮ್ ಎಂದೂ ಕರೆಯುತ್ತಾರೆ. ಈ ಕಾರಣದಿಂದಾಗಿ, ಚರ್ಮದ ಮೇಲೆ ವೃತ್ತಾಕಾರದ ಕಲೆಗಳು ಕಾಣಿಸಿಕೊಳ್ಳುತ್ತವೆ, ಅದು ನಿಧಾನವಾಗಿ ಬೆಳೆಯುತ್ತದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೂ ಬರಬಹುದು. ಮಳೆಗಾಲದಲ್ಲಿ ಒದ್ದೆಯಾದ ಮತ್ತು ಕೊಳಕು ಬಟ್ಟೆಗಳನ್ನು ಧರಿಸುವುದು ಅಪಾಯವನ್ನು ಹೆಚ್ಚಿಸುತ್ತದೆ.
ಯೀಸ್ಟ್ ಸೋಂಕು:
ಯೀಸ್ಟ್ ಸೋಂಕು ಸಹ ಶಿಲೀಂಧ್ರಗಳ ಸೋಂಕಾಗಿದ್ದು, ಇದು ಸಾಮಾನ್ಯವಾಗಿ ಆರ್ಮ್ಪಿಟ್ಸ್, ತೊಡೆಸಂದು ಮತ್ತು ಮಹಿಳೆಯರ ಖಾಸಗಿ ಭಾಗಗಳಂತಹ ತೇವಾಂಶವುಳ್ಳ ಪ್ರದೇಶಗಳಲ್ಲಿ ಕಂಡುಬರುತ್ತದೆ.