ಚಿತ್ರದುರ್ಗ:- ಹಿರಿಯೂರು ಪೊಲೀಸರು ಕಾರ್ಯಚರಣೆ ನಡೆಸಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ಯಾ!?, ಹಾಗಿದ್ರೆ ಅಡುಗೆಯಲ್ಲಿ ಬಳಸಿ ಈ ಎಣ್ಣೆ!
26 ವರ್ಷದ ಹನುಮಂತ ಇತನ ಬಳಿಯಿದ್ದ ಬರೋಬ್ಬರಿ 69 ಲಕ್ಷ ರೂ. ಮೌಲ್ಯದ 1 ಕೆಜಿ 3 ಗ್ರಾಂ ಚಿನ್ನ, 68 ಸಾವಿರ ನಗದು ಹಾಗೂ 2 ಬೈಕ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ 15 ಮನೆಗಳ್ಳತನ ಹಾಗೂ 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಹಿರಿಯೂರು ಡಿವೈಎಸ್ಪಿ ಎಸ್.ಚೈತ್ರಾ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ಇದೀಗ ಹಿರಿಯೂರು ಪೊಲೀಸರು ಆತನನ್ನ ಬಂಧಿಸಿದ್ದಾರೆ. ಇತ ವಿವಿಧ ಕಳ್ಳತನ ಪ್ರಕರಗಳಲ್ಲಿ ಭಾಗಿಯಾಗಿ, ಹಿರಿಯೂರು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಈಗಾಗಲೇ ಬಂಧಿತ ಆರೋಪಿಯಿಂದ ಲಕ್ಷಾಂತರ ರೂಪಾಯಿ ಚಿನ್ನ, ನಗದು ಹಾಗೂ ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ
ಇನ್ನು ಇತನ ಮೇಲೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಠಾಣೆಯಲ್ಲಿಯೇ 8 ಪ್ರಕರಣ, ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ 5, ಹೊಸದುರ್ಗ ಠಾಣೆಯಲ್ಲಿ 2, ಅಬ್ಬಿನಹೊಳೆಯಲ್ಲಿ 1, ಚಿತ್ರದುರ್ಗದ ಬಡಾವಣೆ ಠಾಣೆಯಲ್ಲಿ 1, ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ 1 ಸೇರಿ ಒಟ್ಟು 15 ಮನೆಗಳ್ಳತನ ಮತ್ತು 3 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ದಾವಣಗೆರೆ, ಬಳ್ಳಾರಿ, ಕೊಪ್ಪಳ, ಆಂಧ್ರ ಸೇರಿ ವಿವಿಧ ಕಡೆಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿದ್ದನು