ಮುಂಡಗೋಡ ತಾಲೂಕಿನ ಕಲಕೇರಿಯಲ್ಲಿ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಹೋರಿಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಗದ್ದೆಯಲ್ಲಿ ಭತ್ತದ ನಾಟಿ ಕೆಲಸದ ತಯಾರಿ ನಡೆದಿತ್ತು. ಎತ್ತುಗಳ ಜೊತೆಯಲ್ಲಿ ರೈತ ರಾಜಣ್ಣ ಮುಕ್ಕನಕಟ್ಟಿ ಎಂಬುವವರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಎತ್ತು ವಿದ್ಯುತ್ ಕಂಬದ ಹತ್ತಿರ ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಕಂಬಕ್ಕೆ ತಗುಲಿದೆ.
ನಿಮಗೆ ಗೊತ್ತೇ..? ಜಸ್ಟ್ ಈ ಆಹಾರಗಳಿಂದ ನಿಮ್ಮ ಹೃದಯನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು..!
ಹೀಗಾಗಿ, ತಕ್ಷಣವೇ ವಿದ್ಯುತ್ ಪ್ರವಹಿಸಿ ಹೋರಿ ಮೃತಪಟ್ಟಿದೆ. ಬಚಾವ್ ಮಾಡಲು ಹೋದ ರೈತನಿಗೂ ವಿದ್ಯುತ್ ಸಂಚಾರದ ಅನುಭವವಾಗಿದೆ. ಅದೃಷ್ಟವಶಾತ್ ರೈತನ ಸಮಯ ಪ್ರಜ್ಞೆಯಿಂದ ಅವ್ರಿಗೆ ಏನೂ ಆಗಿಲ್ಲ. ತಕ್ಷಣವೇ ಅಲ್ಲಿಂದ ಮತ್ತೊಂದು ಎತ್ತನ್ನು ಎಳೆದುಕೊಂಡು ಹೊರಗಡೆ ಬಂದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.