ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಯುವತಿಯ ಬರ್ಬರ ಹತ್ಯೆ ಕೊಲೆ ನಡೆದಿದೆ. ಲೇಡಿಸ್ ಪಿಜಿಯೊಳಗೆ ನುಗ್ಗಿ ಯುವಕತ್ತು ಕೊಯ್ದು ಯುವತಿಯ ಕೊಲೆ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ(24) ಮೃತ ಯುವತಿ ಎನ್ನಲಾಗಿದೆ. ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು.ಹಾಗೂ ಕೋರಮಂಗಲದ ವಿಆರ್ ಲೇಔಟ್ ಪಿಜಿ ನಲ್ಲಿ ವಾಸವಿದ್ದ ವೇಳೆ ಕೃತ್ಯ ನಡೆದಿದೆ.
ಬಿಹಾರದಿಂದ ಬಂದಿದ್ದ ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 11.10ಕ್ಕೆ ಲೇಡಿಸ್ ಪಿಜಿಯೊಳಗೆ ಚಾಕುವಿನ ಜೊತೆಗೆ ಯುವಕನೊಬ್ಬ ಆಗಮಿಸಿದ್ದಾನೆ. ಮೂರನೇ ಮಹಡಿಯಲ್ಲಿರುವ ರೂಮ್ನಲ್ಲಿ ಯುವತಿಯ ಕತ್ತು ಕೊಯ್ದು ಚಾಕುವಿನಿಂದ ಹಿರಿದು ಹತ್ಯೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಯುವತಿ ಕೃತಿ ಕುಮಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಪಿಜಿಗೆ ಯುವತಿ ಬಂದಿದ್ದು ಯಾವಾಗ?
ಕಳೆದ ಎರಡು ದಿನದ ಹಿಂದಷ್ಟೇ ಈ ಯುವತಿ ಕೋರಮಂಗಲದ ಪಿಜಿಗೆ ಬಂದಿದ್ದರು. ನಿನ್ನೆ ಲೆಗೇಜ್ ತೆಗೆದುಕೊಂಡು ಒಬ್ಬ ಯುವಕ ಬಂದಿದ್ದ. ಈ ವೇಳೆ ಯುವಕನನ್ನು ಒಳ ಬಿಡುವುದಿಲ್ಲ ಎಂದು ಪಿಜಿ ಸೆಕ್ಯೂರಿಟಿ ಹೇಳಿದ್ದರಂತೆ. ಸೆಕ್ಯೂರಿಟಿ ಬಳಿ ಈ ವ್ಯಕ್ತಿ ನನ್ನ ಸಹೋದರ. ಬೇಗ ಕಳುಹಿಸುತ್ತೇನೆ ಎಂದು ಯುವತಿ ಪಿಜಿ ಒಳಗೆ ಕರೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ.
ಕೃತಿ ಮೊಬೈಲ್ನಲ್ಲಿ ಕೊಲೆಗಾರನ ಸುಳಿವು
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಯುವತಿ ಕೃತಿ ಕುಮಾರಿ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಆಕೆಯ ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಕೃತಿ ಕುಮಾರಿ ಯಾರಿಗೆ ಕಾಲ್ ಮಾಡಿದ್ದರು. ಯಾವ, ಯಾವ ನಂಬರ್ನಿಂದ ಈಕೆಗೆ ಕಾಲ್ ಬಂದಿದೆ. ಇದರ ಜೊತೆಗೆ ಪಿಜಿಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಕೊಲೆಯಾದ ಯುವತಿ ಎಲ್ಲಿ ಹೋಗಿದ್ದಾಳೆ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೊಲೆಗಾರನ ಬಂಧನಕ್ಕೆ ಕೋರಮಂಗಲ ಪೊಲೀಸರು ಮೂರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.